ಕೆರಗೋಡು ಧ್ವಜ ವಿವಾದ | ಧ್ವಜ ತೆರವು ವಿಚಾರವಾಗಿ ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ: ಕುಮಾರಸ್ವಾಮಿ

Date:

Advertisements

ಧ್ವಜ ತೆರವು ವಿಚಾರವಾಗಿ ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ. ಕೆರಗೋಡಿನ ಬಸ್ ನಿಲ್ದಾಣದ ಧ್ವಜಸ್ತಂಭ ಸ್ಥಾಪನೆಗೆ ಮನವಿ ಮಾಡಿದ್ದ ಗೌರಿ ಶಂಕರ್ ಸೇವಾ ಟ್ರಸ್ಟ್, ಯಾವ ಧ್ವಜ ಅಂತ ಹೇಳಿರಲಿಲ್ಲ. ಅದಕ್ಕೆ ಅನುಮತಿ ನೀಡಲಾಗಿತ್ತು. ಈಗ ಸರ್ಕಾರವೇ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಆರೋಪ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್ ಡಿ‌ ಕುಮಾರಸ್ವಾಮಿ ಆರೋಪಿಸಿದರು.

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ ಸಚಿವ ಎನ್​ ಚಲುವರಾಯಸ್ವಾಮಿ ಮಾಡಿರುವ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ತೀಕ್ಷ್ಣ ತಿರುಗೇಟು ನೀಡಿದರು.

“ಗೌರಿ ಶಂಕರ್ ಟ್ರಸ್ಟ್​ಗೆ ನವೆಂಬರ್ ತಿಂಗಳಲ್ಲಿ ಅನುಮತಿ ನೀಡಲಾಗಿತ್ತು. ಇಂಥದ್ದೇ ಧ್ವಜ ಎಂದು ಎಲ್ಲಿಯೂ ಉಲ್ಲೇಖಿಸಿರಲಿಲ್ಲ. 2023ರ ಡಿಸೆಂಬರ್ 29ರಂದು ಮತ್ತೆ ಹೊಸ ಅರ್ಜಿ ತೆಗೆದುಕೊಂಡಿದ್ದಾರೆ. ಅದನ್ನು ತಿದ್ದಿಕೊಂಡಿದ್ದಾರೆ. ಇದರಲ್ಲಿ ತ್ರಿವರ್ಣ ಧ್ವಜ, ಕನ್ನಡ ಧ್ವಜ ಹಾಕಲು ಅನುಮತಿ ನೀಡಿದ್ದೇವೆ ಎಂದಿದೆ. ಜನವರಿ ತಿಂಗಳಲ್ಲಿ ಪತ್ರ ಸೃಷ್ಟಿ ಮಾಡಿಕೊಳ್ಳಲಾಗಿದೆ. ಮುಚ್ಚಳಿಕೆಯಲ್ಲಿರುವ ಹೆಸರು, ಅರ್ಜಿಗಳಲ್ಲಿ ಬೇರೆ ಹೆಸರುಗಳು ಇವೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Advertisements

ನಿಮ್ಮಿಂದ ಕಲಿಯಬೇಕಾ ಚಲುವರಾಯಸ್ವಾಮಿ ಅವರೇ?

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ವಿನಯಕ್ಕೆ ನಮಸ್ಕಾರ. ನಾನು ನಿಮ್ಮಿಂದ ಕಲಿಯಬೇಕಾ? 200 ಜನ ರೈತರು ಆತ್ಮಹತ್ಯೆ ಮಾಡಿಕೊಂಡರು. ನೀವು ಒಂದು ರೂಪಾಯಿ ಕೂಡ ಬಿಚ್ಚಿಲ್ಲ. ನನ್ನ ದುಡಿಮೆ ಹಣ ಕೊಟ್ಟು ಬಂದಿದ್ದೇನೆ. ಅದೂ ಸಹ ವರ್ಗಾವಣೆ ದಂಧೆಯಿಂದ ಬಂದ‌ ಹಣ ಅಲ್ಲ. ನಿಮ್ಮಿಂದ ವಿನಯ ಕಲಿಯಬೇಕಿಲ್ಲ. ನಾನು ಜಿಲ್ಲೆ ಹಾಳು ಮಾಡೋಕೆ‌ ಬಂದಿದ್ದೇನೆಯೇ? ಮಂಡ್ಯ ಜಿಲ್ಲೆಯ ಜನರ ಸರ್ಟಿಫಿಕೇಟ್‌ ನನ್ನ ಹತ್ರ ಇದೆ” ಎಂದರು.

“ನಾನು ಸೋಮವಾರದ ಭಾಷಣದಲ್ಲಿ ಬೆಂಕಿ‌‌ ಹಚ್ಚಿ‌, ಫ್ಲೆಕ್ಸ್ ಹರಿಯಿರಿ ಅಂತ ಹೇಳಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಆಗ್ರಹಿಸಿದ್ದೆ ಅಷ್ಟೆ. ಕೆರಗೋಡಿನ ಜನತೆ ಜನವರಿ 26 ರಂದು ರಾಷ್ಟ್ರ ಧ್ವಜ ಹಾರಿಸಿದ್ದಾರೆಯೇ ವಿನಃ ಸರ್ಕಾರ ಅಲ್ಲ. ಕಾಂಗ್ರೆಸ್ ಶಾಸಕರನ್ನು ಕರೆದಿಲ್ಲ ಎಂದು ಈ ಗಲಾಟೆ ಆರಂಭ ಆಗಿದೆ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ

ಕೇಸರಿ ಶಾಲು ಹಾಕುವುದು ತಪ್ಪೇ?

“ಪಾಪ ಹಳೆಯ ಸ್ನೇಹಿತರು (ಚಲುವರಾಯಸ್ವಾಮಿ) ಹೇಳಿದ್ದಾರೆ, ಕುಮಾರಸ್ವಾಮಿ ಕೇಸರಿ ಶಾಲು‌‌ ಹಾಕಿಕೊಂಡು ಜೆಡಿಎಸ್ ಕಾರ್ಯಕರ್ತರ ಶಕ್ತಿ ಕೊನೆಗೊಳಿಸಲು ಹೊರಟಿದ್ದಾರೆ ಎಂದು. ನಾನು ಕೇಸರಿ ಶಾಲು ಹಾಕಿಕೊಂಡಿದ್ದು ಮಹಾನ್ ಅಪರಾಧವಾ? ಕಾಂಗ್ರೆಸ್​​ನವರಿಗೆ ಕೇಸರಿ ಮೇಲೆ ಯಾಕೆ ಸಂಕುಚಿತ ಮನೋಭಾವ? ಮಂಡ್ಯ ಉಸ್ತುವಾರಿ ಸಚಿವರಿಂದ ನಾನು ನನ್ನ ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಕಲಿಯಬೇಕಿಲ್ಲ. ನನಗೆ ಜನ ಕೊಟ್ಟಿರುವ ಪ್ರೀತಿ ಇದೆ” ಎಂದು ತಿರುಗೇಟು ನೀಡಿದರು.

“ಕಳೆದ ಎರಡು ದಿನಗಳಿಂದ ಮಂಡ್ಯದಲ್ಲಿ ಆರಂಭ ಆಗಿರುವ ಒಂದು ಘಟನೆಯಿಂದಾಗಿ ಈ‌ ಸರ್ಕಾರದ ಕೆಲ ನಡವಳಿಕೆ ಬಗ್ಗೆ ‌ಮತನಾಡಲೇಬೇಕಿದೆ. ಮಾಜಿ ಸಿಎಂ ದಿ. ದೇವರಾಜ ಅರಸು ಅವರಿಗಿಂತ ಸಿಎಂ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿ ಶೋಷಿತರ ಧ್ವನಿಯಾಗಿ ಚಿತ್ರದುರ್ಗದಲ್ಲಿ ಮಾಡಿದ ವೀರಾವೇಷದ ಭಾಷಣ ಕೇಳಿದ್ದೇನೆ. ಮತ್ತೊಂದೆಡೆ, ಮಂಡ್ಯದಲ್ಲಿ ನಮ್ಮ ಹಳೆಯ ಸ್ನೇಹಿತ ಮಾತನಾಡಿರುವುದನ್ನೂ ಕೇಳಿದ್ದೇನೆ. ಮಂಡ್ಯವನ್ನು ಹಾಳು ಮಾಡಲು ಕುಮಾರಸ್ವಾಮಿ ಬಂದಿದ್ದಾರೆ ಎಂದಿದ್ದಾರೆ. ಮಂಡ್ಯದಲ್ಲಿ ನೆಡೆದ ಘಟನೆಗೂ ನನಗೂ ಏನೂ ಸಂಬಂಧ ಎಂದು ಸಿಎಂ ಮತ್ತು ಉಸ್ತುವಾರಿ ಸಚಿವರನ್ನು ಕೇಳುತ್ತೇನೆ. ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನಾನು ಕೊನೆ ಹಂತದಲ್ಲಿ ಭಾಗಿಯಾಗಿದ್ದೆ” ಎಂದರು.

“ಮಂಡ್ಯ ಸಕ್ಕರೆ ಕಾರ್ಖಾನೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಚಲುವರಾಯಸ್ವಾಮಿ ದೂರಿದ್ದಾರೆ. ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್​​ನವರು ಕೆಲಸ ಮಾಡಲು ಬಿಡಲಿಲ್ಲ. ನಮ್ಮ ಕೊಡುಗೆ ಮಂಡ್ಯಗೆ ಏನೂ ಅಂತ ಜನ ನಿರ್ಧಾರ ಮಾಡುತ್ತಾರೆ. ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲ. ಸೋಮವಾರ ನಡೆದ ಅಹಿತಕರ ಘಟನೆಗೆ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಸರ್ಕಾರವೇ ಕಾರಣ. ಮೊದಲು ನಿಮ್ಮ ಮಂಡ್ಯ ಶಾಸಕರಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂದು ಪಾಠ ಮಾಡಿ” ಎಂದು ಕಿಡಿಕಾರಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಮಾಜಿ ಜಾತ್ಯತೀತ ಮಾಜಿ ಮುಖ್ಯಮಂತ್ರಿ ಗಳೆ,,, ಉತ್ತರದ ಗುಜರಿಗಳು ಮತ್ತು ನಕಲಿ ರಾಷ್ಟ್ರವಾದಿಗಳ ಸಹವಾಸ ಮಾಡಿದ ಯಾವುದೇ ಪ್ರಾದೇಶಿಕ ಪಕ್ಷ ಬದುಕುಳಿಯುವ ಸಾಧ್ಯತೆಗಳು ತೀರಾ ವಿರಳ,,, ಕಾಂಗ್ರೆಸ್ ವಿರೋಧಿಸುವ ಭರದಲ್ಲಿ ನಿಮ್ಮ ಅಡಿಪಾಯವನ್ನು ನೀವೇ ಅಗೆದು ಬೀಳಿಸುವದು ಬಹುಶಃ ರಾಜಕೀಯದಲ್ಲಿ ದುರಂತದ ಕಥೆಯಾಗಬಹುದು. ಸಕ್ಕರೆ ನಾಡಿನವರು ಉತ್ತರದ ಕೋಮುವ್ಯಾಧಿ ವಿಷವನ್ನು ಉಣಿಸದೆ ಸಕ್ಕರೆ ತಿನಿಸಿ,,,, ರಾಷ್ಟ್ರಧ್ವಜ ಮತ್ತು ಕೇಸರಿ ಧ್ವಜ ಎರಡರಲ್ಲಿ ನಿಮ್ಮ ಆಯ್ಕೆ,,ಯಾವುದಿರಬೇಕು ಪ್ರಧಾನಿ ಹುದ್ದೆ ಅಲಂಕರಿಸಿದ್ದ ಮೊದಲ ಕನ್ನಡಿಗ ದೊಡ್ಡ ಗೌಡರ ಸಲಹೆ ಪಡೆಯಬೇಕಾಗಿತ್ತು

  2. ಸುಮಾರು ಸ್ವಾಮಿ ಯವರೆ
    ಅಧಿಕಾರಕ್ಕಾಗಿ ಯಾರ ಬಾಗಿಲನ್ನು ತಟ್ಟುವ ನಿಮಗೆ
    ರಾಷ್ಟ್ರ ಧ್ವಜ,ರಾಜ್ಯ ಧ್ವಜ
    ಹನುಮ ಧ್ವಜ
    ಯಾವುದನ್ನು ಎಲ್ಲಿ ಹಾರಿಸಬೇಕು
    ಅನ್ನುವ ಸಣ್ಣ ವಿಚಾರದಲ್ಲಿಯೂ
    ರಾಜಕೀಯ ಮಾಡುವುದು ಸರಿಯೇ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X