ಬೆಂಗಳೂರು | ಮೂರು ಕೋಟಿ ಮೌಲ್ಯದ ನಿಷೇಧಿತ ಇ-ಸಿಗರೇಟ್ ಪತ್ತೆ: ಬಂಧನ

Date:

Advertisements

ಮೂರು ಕೋಟಿ ಮೌಲ್ಯದ ಇ-ಸಿಗರೇಟ್‌ ಅನ್ನು ಸಿಸಿಬಿ ನಾರ್ಕೋಟಿಕ್ಸ್‌ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಶೋಹೆಬ್ ಬಂಧಿತ ಆರೋಪಿ. ಈತ ಕೇರಳ ಮೂಲದವನು ಎಂದು ಗುರುತಿಸಲಾಗಿದೆ. ಬ್ಲೂ ಡಾರ್ಟ್ ಕೊರಿಯರ್ ಮೂಲಕ ಇ-ಸಿಗರೇಟ್ ಅನ್ನು ದುಬೈಯಿಂದ ದೆಹಲಿಗೆ ತರಿಸಿ, ನಂತರ ಅಲ್ಲಿಂದ ಬೆಂಗಳೂರಿಗೆ ತರಿಸಲಾಗಿತ್ತು. ಒಂದು ಇ-ಸಿಗರೇಟ್‌ಗೆ ₹5 ರಿಂದ ₹6 ಸಾವಿರ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಇ-ಸಿಗರೇಟ್ ಅನ್ನು ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisements

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ ಅವರು, “ಇ-ಸಿಗರೇಟ್‌ಗಳನ್ನು ಅಕ್ರಮವಾಗಿ ವ್ಯಾಪಾರ ಮಾಡಿದ್ದಕ್ಕಾಗಿ ಅಂತರರಾಜ್ಯ ಅಪರಾಧಿಯೊಬ್ಬನನ್ನು ಬಂಧಿಸಲಾಗಿದೆ. ಆತನ ಮನೆಯಿಂದ ₹3 ಕೋಟಿ ಮೌಲ್ಯದ ಇ-ಸಿಗರೇಟ್‌ಗಳನ್ನು ಕೊರಿಯಾದ ಏಜೆನ್ಸಿಯ ಮೂಲಕ ದುಬೈಯಿಂದ ಅಕ್ರಮವಾಗಿ ಪಡೆಯಲಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದರು.

ಬಂಧಿತ ಆರೋಪಿ ಬೆಂಗಳೂರಿನ ಹಲವಾರು ಸ್ಮೋಕಿ ಜೋಜ್ ಹಾಗೂ ರೀಟೆಲ್ ಮಾರಾಟ ಮಾಡುವವರಿಗೆ ಇ-ಸಿಗರೇಟ್​​ ಅನ್ನು ನೀಡುತ್ತಿದ್ದನು. ಆನ್​ಲೈನ್ ಮೂಲಕ ಆರ್ಡರ್ ಮಾಡಿಸಿಕೊಂಡು ಪೋರ್ಟರ್ ಮತ್ತು ಡನ್ಜೋ ಮೂಲಕ ಪೂರೈಕೆ ಮಾಡುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

ಸಿಸಿಬಿ ಪೊಲೀಸರು ಅರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಏನಿದು ಇ-ಸಿಗರೇಟ್?

ಇ-ಸಿಗರೇಟ್‌ಗಳನ್ನು ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್, ಇ-ಸಿಗಾರ್, ಇ-ಪೈಪ್ ಎಂಬ ಹೆಸರಿನಲ್ಲಿ ಕರೆಯಬಹುದಾಗಿದೆ. ಈ ಸಾಧನಗಳು ಇ-ದ್ರವವನ್ನು ಉಪಯೋಗ ಮಾಡಿಕೊಂಡು ಏರಸಾಲ್‌ಗಳನ್ನು ಉತ್ಪತ್ತಿ ಮಾಡಬಹುದಾಗಿದೆ. ಎ-ದ್ರವದಲ್ಲಿ ಸಾಮಾನ್ಯವಾಗಿ ತಂಬಾಕುವಿನಿಂದ ಉತ್ಪತ್ತಿಯಾಗುವ ನಿಕೋಟಿನ್ ಅಂಶ. ಪ್ರೊಪಿಲೀನ್, ಗ್ಲೈಕಾಲ್, ಗ್ಲಿಸರೀನ್, ಪರಿಮಳ ಸೂಸುವ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.‌

ಈ ಸಾಧನಗಳು ಶಾಖವನ್ನು ಉತ್ಪತ್ತಿ ಮಾಡಿ ಇ-ದ್ರವವನ್ನು ಬಿಸಿ ಮಾಡುವುದರಿಂದ ಏರಸಾಲ್ ಉತ್ಪತ್ತಿಯಾಗುತ್ತದೆ. ಈ ಸಾಧನಗಳನ್ನು ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ ಎಂದು ಕರೆಯಲಾಗುತ್ತದೆ.

ಈ ಸುದ್ದಿ ಓದಿದ್ದೀರಾ?ಬೆಂಗಳೂರು | ಸಾಲ ತೀರಿಸುವುದಕ್ಕೆ ಕಳ್ಳತನದ ಹಾದಿ ಹಿಡಿದ ಅಸಿಸ್ಟೆಂಟ್ ಲೋಕೋ ಪೈಲಟ್: ಬಂಧನ

ಅತಿಯಾದ ಶಾಖ, ಶ್ವಾಸಕೋಶದ ತೊಂದರೆಗಳು, ನರಸಂಬಂಧಿ ದೌರ್ಬಲ್ಯಕ್ಕೆ ಕಾರಣವಾಗುವುದರಿಂದ ಇ-ಸಿಗರೇಟ್ ಬಳಸುವ ಮುನ್ನ ಯುವಜನತೆ ಯೋಚಿಸಬೇಕಾಗಿದೆ.

ತಂಬಾಕು ಸಂಬಂಧಿತ ಸಿಗರೇಟ್, ಬೀಡಿ, ಚುಟ್ಟಾ ಅಥವಾ ಹುಕ್ಕಾ ಇರಬಹುದು ಅಥವ ಇ-ಸಿಗರೇಟ್‌ಗಳಲ್ಲಿನ ನಿಕೋಟಿನ್ ಅಂಶವು ಮಿದುಳಿನಲ್ಲಿ ಡೋಪಮಿನ್ ಎಂಬ ಕ್ಷಣಿಕ ಆಹ್ಲಾದ ನೀಡುವ ಹಾರ್ಮೋನ್‌ಗಳನ್ನು ಸ್ರವಿಸಬಹುದಾಗಿದ್ದು ವ್ಯಕ್ತಿಯನ್ನು ಮತ್ತೆ ಮತ್ತೆ ಆ ಕ್ಷಣಿಕವಾದ ಆಹ್ಲಾದವನ್ನು ಪಡೆಯುವ ದಾಹವನ್ನು ಸೃಷ್ಟಿಸುತ್ತದೆ. ಇದರಿಂದ ವ್ಯಕ್ತಿ ವ್ಯಸನಿಯಾಗಲು ಕಾರಣವಾಗುತ್ತದೆ. ದೀರ್ಘಕಾಲ ಈ ದುಶ್ಚಟದಿಂದ ಆರೋಗ್ಯಕ್ಕೆ ಹಾನಿಕರವಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X