ಮಂಡ್ಯ | ಯುವಕನ ಪ್ರೀತಿಗೆ ಬಿದ್ದಿದ್ದ ಅಪ್ರಾಪ್ತೆ ಆತ್ಮಹತ್ಯೆ; ಪೋಕ್ಸೋ ಪ್ರಕರಣ ದಾಖಲು

Date:

Advertisements

ಇತ್ತೀಚಿನ ದಿನಗಳಲ್ಲಿ ಮಂಡ್ಯ ಜಿಲ್ಲೆ ಸುದ್ದಿಯಾಗುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ದಂಧೆ, ಶಿಕ್ಷಕಿಯ ಕೊಲೆ, ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್‌ನ ಮುಸ್ಲಿಂ ಮಹಿಳೆಯರ ವಿರುದ್ಧದ ದ್ವೇಷ ಭಾಷಣ ಹಾಗೂ ಈಗ, ಕೆರಗೋಡಿನಲ್ಲಿ ಕೇಸರಿ ಕಾರ್ಯಕರ್ತರ ದಾಂಧಲೆಯಿಂದ ಮಂಡ್ಯ ಸುದ್ದಿಯಾಗುತ್ತದೆ. ಇದೆಲ್ಲದರ ನಡುವೆ, ಕಾಮುಕ ಯುವಕನ ಪ್ರೀತಿಗೆ ಬಿದ್ದು ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಬದುಕನ್ನೇ ಕೆಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆಯೂ ಮಂಡ್ಯದಲ್ಲಿ ನಡೆದಿದೆ.

ಮಂಡ್ಯದ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ಬಾಲಕಿಯೊಬ್ಬಳು ಯುವಕನ ಪ್ರೀತಿಗೆ ಬಿದ್ದಿದ್ದಳು. ಆಕೆಯೊಂದಿಗೆ ಯುವಕ ದೈಹಿಕ ಸಂಬಂಧ ಬೆಳೆಸಿದ್ದ. ಪರಿಣಾಮ, ಆಕೆ ಗರ್ಭಿಣಿಯಾಗಿದ್ದಳು. ವಿಷಯ ಯಾರಿಗಾದರು ತಿಳಿದಿರೆ ಅಪಮಾನವಾಗುತ್ತದೆ ಎಂದು ಆಕೆ ಆತ್ಮಹತ್ಯೆ ಮಾಡಿಕೊಂಡು, ಕೊನೆಯುಸಿರೆಳೆದಿದ್ದಾಳೆ. ಜೀವನ ಆರಂಭಕ್ಕೂ ಮುನ್ನವೇ ಅಂತ್ಯಕಂಡಿದ್ದಾಳೆ.

ಆಕೆಯ ಸಾವಿಗೆ ಕಾರಣನಾದ ಶೇಖ್ ಅಕೀಬ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನನ್ನು ಬಂಧಿಸಬೇಕು. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisements

ಪೋಷಕರ ದೂರಿನ ಪ್ರಕಾರ, “ಶೇಖ್‌ ಅಕೀಬ್ ಎಂಬಾತ ತನ್ನನ್ನು ಪ್ರೀತಿಸುವಂತೆ ಕಳೆದ 10 ತಿಂಗಳಿನಿಂದ ಬಾಲಕಿಯ ಬೆನ್ನತ್ತಿದ್ದ. ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಕೈ ಕೊಯ್ದುಕೊಳ್ಳುತ್ತೇನೆಂದು ಬೆದರಿಸಿ ತನ್ನ ಪ್ರೀತಿಗೆ ಬೀಳಿಸಿಕೊಂಡಿದ್ದ. ಅಲ್ಲದೆ, ತನ್ನ ಕಾರಿನಲ್ಲಿ ಸುತ್ತಾಡಿಸುತ್ತಿದ್ದ” ಎಂದು ಆರೋಪಿಸಲಾಗಿದೆ.

“ಅದನ್ನು ಗಮನಿಸಿ, ಯುವಕನ ಮನೆಯರನ್ನು ಕರೆದು ಆತನಿಗೆ ಬುದ್ದಿ ಹೇಳುವಂತೆ ಹೇಳಿದ್ದೆವು. ನಮ್ಮ ಮಗಳಿಂದ ದೂರ ಉಳಿಯುವಂತೆ ಬುದ್ದಿ ಹೇಳಿದ್ದೆವು. ಆದರೂ, ಆತ ತನ್ನ ದುರ್ವರ್ತನೆ ಬದಲಾಯಿಸಿಕೊಳ್ಳದೆ ನನ್ನ ಅಪ್ರಾಪ್ತ ಮಗಳನ್ನು ಪೀಡಿಸುವುದು, ಛೇಡಿಸುವುದು, ಹಲವು ಫೋನ್‌ ನಂಬರ್‌ಗಳಿಂದ ಫೋನ್‌ ಮಾಡಿ ತೊಂದರೆ ಕೊಡುತ್ತಿದ್ದ. ಈ ಬಗ್ಗೆ ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದೆವು” ಎಂದು ತಿಳಿಸಿದ್ದಾರೆ.

yu
ಆರೋಪಿ ಶೇಖ್‌ ಅಕೀಬ್

ಇದೆಲ್ಲದರ ನಡುವೆ, ಬಾಲಕಿಯ ತಾಯಿಗೆ ಫೋನ್‌ ಪೇ ಮೂಲಕ 10,000 ರೂ. ಹಣವನ್ನೂ ಹಾಕಿದ್ದಾನೆ. ಆ ಮೂಲಕ ತನ್ನ ಪ್ರೀತಿಗೆ ಬಾಲಕಿಯ ತಾಯಿಯ ಬೆಂಬಲವೂ ಇತ್ತೆಂಬುದನ್ನು ತೋರಿಸಲು ಕುತಂತ್ರ ಹೆಣೆದಿದ್ದಾನೆ. ಅದರೆ, ಆತ ಹಣ ಹಾಕಿದ ಮರುಕ್ಷಣವೇ ಆತನಿಗೆ ಹಣವನ್ನು ವಾಪಸ್‌ ಹಾಕಿದ್ದಾರೆ. ಪದೇ-ಪದೇ ಹಣ ಹಾಕಿ ತೊಂದರೆ ಕೊಟ್ಟಿದ್ದಾನೆ.

“ಬಾಲಕಿಯನ್ನು ಕಾರಿನಲ್ಲಿ ಸುತ್ತಾಡಿಸಿ, ಪ್ರೀತಿಯ ಹೆಸರಿನಲ್ಲಿ ಆಕೆಯ ಜೊತೆ ದೈಹಿಕ ಸಂಬಂಧವನ್ನೂ ಬೆಳೆಸಿದ್ದಾನೆ. ಆಕೆ ಗರ್ಭಿಣಿಯಾಗಿದ್ದಾನೆ. ಇತ್ತೀಚೆಗೆ, ಆಕೆಯ ಚಲನ-ವಲನ ಬದಲಾಗಿತ್ತು. ಹೀಗಾಗಿ, ಅನುಮಾನಗೊಂಡು ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿರುವುದು ಗೊತ್ತಾಯಿತು. ತಾನು ಗರ್ಭಿಣಿಯಾಗಿದ್ದೇನೆಂದು ತಿಳಿದ ಬಾಲಕಿ ಯಾರು ಇಲ್ಲಾದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಪೋಷಕರು ತಿಳಿಸಿದ್ದಾರೆ.

ತಮ್ಮ ಮಗಳ ಸಾವಿಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಮೊದಲಿಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರೆಂದು ಆರೋಪಿಸಲಾಗಿದೆ. ಸದ್ಯ, ಪೊಲೀಸ್‌ ಠಾಣೆಯಲ್ಲಿ ಆರೋಪಿ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X