ದೇಶದ ಸಂಸತ್‌ನ ಬಜೆಟ್ ಅಧಿವೇಶನ ಆರಂಭದ ದಿನವೇ ಭಾರತ-ಚೀನಾ ಗಡಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲಾಗಿದೆ.
ಲಡಾಕ್‌ನೊಳಗೆ ನುಸುಳಿದ್ದ ಚೀನಾದ ಸೈನಿಕರನ್ನು ಹಿಮ್ಮೆಟ್ಟಿಸಿರುವ ಭಾರತೀಯ ಕುರಿಗಾಹಿಗಳು, ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದೆ ಹೋಗಿರುವ ಬಗ್ಗೆ ವರದಿಯಾಗಿದೆ. ಈ ಬೆಳವಣಿಗೆಯು ಜನವರಿ 2ರಂದು ನಡೆದಿದ್ದು, ಭಾರತದ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಸ್ಥಳೀಯ ಕುರುಬರು ಮತ್ತು ಚೀನೀ ಸೈನಿಕರ ನಡುವೆ ನಡೆದ ವಾಗ್ವಾದದ ವೀಡಿಯೊ ಬಜೆಟ್ ಅಧಿವೇಶನ ಆರಂಭದ ದಿನವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
लद्दाख में चीन के सैनिक हमारी जमीन पर हमारे चरवाहों को जाने से रोक रहे थे. चरवाहों ने डटकर मुकाबला किया.
यही वक्त है, चीन से लाल आंख दिखाकर बात करनी होगी. सख्त संदेश देना होगा. pic.twitter.com/hizRm7Eg3C
— Ranvijay Singh (@ranvijaylive) January 31, 2024
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಮುಂದುವರಿದಿದೆ. ಲಡಾಖ್‌ನಲ್ಲಿ ಕುರುಬರ ಗುಂಪನ್ನು ಚೀನಾ ಸೈನಿಕರು ಕುರಿಗಳನ್ನು ಮೇಯಿಸುವುದನ್ನು ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತಡೆದಿದ್ದಾರೆ. ಆದರೆ ಕುರುಬರು ಹಿಂದೆ ಹೋಗಲು ನಿರಾಕರಿಸಿದ್ದಲ್ಲದೇ, ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರನ್ನು ಧೈರ್ಯದಿಂದ ಎದುರಿಸಿದ್ದಾರೆ. ಅಲ್ಲದೇ, ನಾವು ಭಾರತೀಯ ಭೂಪ್ರದೇಶದಲ್ಲಿ ನಮ್ಮ ಕುರಿಗಳನ್ನು ಮೇಯಿಸುತ್ತಿದ್ದೇವೆ. ಅದನ್ನು ಕೇಳಲು ನೀವು ಯಾರು ಎಂದು ಪ್ರಶ್ನಿಸಿದ್ದಾರೆ.
“ಇದು ಭಾರತದ ಭೂ ಪ್ರದೇಶ, ವಾಸ್ತವ ಗಡಿ ನಿಯಂತ್ರಣ ರೇಖೆ ಇನ್ನು ದೂರವಿದೆ, ನೀವು ಹಿಂದೆ ಸರಿಯಿರಿ” ಎಂದು ಖಡಕ್ ಎಚ್ಚರಿಕೆ ಕೊಟ್ಟ ನಂತರ ಅಲ್ಲಿಂದ ನಿರ್ಗಮಿಸುವ ದೃಶ್ಯವು ವಿಡಿಯೋದಲ್ಲಿ ದಾಖಲಾಗಿದೆ.
ಕುರಿ ಹಾಗೂ ಸಾಕು ಪ್ರಾಣಿಗಳನ್ನು ಮೇಯಿಸುವ ಹಕ್ಕಿಗೆ ಸಂಬಂಧಿಸಿದಂತೆ ಚೀನಾ ಸೈನಿಕರ ಜೊತೆ ವಾಗ್ವಾದದ ದೃಶ್ಯವನ್ನು ಲಡಾಖ್ ಗಡಿ ಭಾಗದ ಕುರಿಗಾಹಿಗಳು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಅದೇ ವಿಡಿಯೋ ಈಗ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.
Where Is The Red Eye Mr. 56″
🔹Chinese Army is entering Indian Territory
🔹Local Indian and Chinese Troops Face OffWhy is the Govt of India silent on the incident that happened on January 2❓#Chinese soldiers confronted Indian graziers in #Ladakh along the LAC on January 2,… pic.twitter.com/YzyhxHGMRp
— তন্ময় l T͞anmoy l (@tanmoyofc) January 31, 2024
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು-ಚೀನೀ ಸೈನಿಕರ ನಡುವೆ ನಡೆದಿದ್ದ ಘರ್ಷಣೆಯು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ನಮ್ಮ ದೇಶದ ಒಂದಿಂಚನ್ನೂ ಕೂಡ ನಾವು ಬಿಟ್ಟುಕೊಡಲ್ಲ ಎಂದು ಹೇಳಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಯ ನಡುವೆ ಈಗಿನ ಘಟನೆ ಗಡಿಯಲ್ಲಿ ಸೈನಿಕರು ಹಾಗೂ ಸ್ಥಳೀಯತು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ.
ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಸ್ಥಳೀಯ ಅಲೆಮಾರಿ ಜನಾಂಗಕ್ಕೆ ಸೇರಿರುವ ಕುರಿಗಾಹಿಗಳು, ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ಬಳಿಕ ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಮೇಯಿಸಲು ಸಾಧ್ಯ ಆಗುತ್ತಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ತಮ್ಮ ಸಾಕು ಪ್ರಾಣಿಗಳನ್ನು ಪೂರ್ವ ಲಡಾಖ್‌ಗೆ ಕರೆದೊಯ್ದ ವೇಳೆ ಕುರಿಗಾಹಿಗಳನ್ನು ಚೀನಾ ಸೈನಿಕರು ತಡೆದಿರುವುದಾಗಿ ವರದಿಯಾಗಿದೆ.
It is heartening to see the positive impact made by @firefurycorps_IA
in Border areas of Eastern Ladakh in facilitating the graziers & nomads to assert their rights in traditional grazing grounds along the north bank of Pangong.
I would like to thank #IndianArmy for such strong… pic.twitter.com/yNIBatPRKE— Konchok Stanzin (@kstanzinladakh) January 30, 2024
ಚೀನಾ ಸೈನಿಕರ ಜೊತೆಗೆ ಕುರಿಗಾಹಿಗಳು ಮಾತ್ರ ವಾಕ್ಸಮರ ನಡೆಸಿದ್ದು, ಯಾವುದೇ ಹಿಂಸಾಚಾರ ನಡೆಸಿಲ್ಲ. ಆದರೆ, ಈ ವಾಕ್ಸಮರದಲ್ಲಿ ಭಾರತದ ಕುರಿಗಾಹಿಗಳು ಮೇಲುಗೈ ಸಾಧಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಕುರಿಗಾಹಿಗಳು ಚೀನಾ ಸೈನಿಕರ ವಿರುದ್ಧ ದಿಟ್ಟತನದಿಂದ ಎದುರಿಸಿರುವುದನ್ನು ಭಾರತೀಯ ಸೇನೆಯು ಪ್ರಶಂಸಿಸಿದೆ. “ನಮ್ಮ ಈ ಧೈರ್ಯಕ್ಕೆ ಭಾರತೀಯ ಸೇನೆ ನೀಡಿರುವ ಧೈರ್ಯವೇ ನಮಗೆ ಸ್ಪೂರ್ತಿ” ಎಂದು ಚೀನೀ ಸೈನಿಕರನ್ನು ಎದುರಿಸಿದ್ದ ತಂಡದಲ್ಲಿದ್ದ ಕುರಿಗಾಹಿಯೋರ್ವರು ಹೇಳಿಕೆ ನೀಡಿದ್ದಾರೆ.