ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ 75 ನೇ ಗಣರಾಜ್ಯೋತ್ಸವ ಅಂಗವಾಗಿ ಗ್ರಾಮ್ ಪಂಚಾಯತ್ ಕಾರ್ಯಾಲಯದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪಡೆದ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ವಿದ್ಯಾನಿಧಿ ಆರ್. ಕವಡೆ ಅವರನ್ನು ಗ್ರಾಮ ಪಂಚಾಯ್ತಿವತಿಯಿಂದ ಸನ್ಮಾನಿಸಲಾಯಿತು.
ಪಂಚಾಯಿತಿ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಿಬೂಬ್ ಪಟೇಲ್ ಮಾತನಾಡಿ, ಉತ್ತಮ ಪ್ರಶಸ್ತಿಗಳಲ್ಲಿ ಒಂದಾಗಿರುವ ಸಾವಿತ್ರಿಬಾಯಿ ಫುಲೆ ಅವರ ಹೆಸರಿನ ಪ್ರಶಸ್ತಿ ನಮ್ಮ ಗ್ರಾಮ ಪಂಚಾಯಿತಿಯ ಅಂಗನವಾಡಿ ಕಾರ್ಯಕರ್ತೆ ವಿದ್ಯಾನಿಧಿ ಅವರಿಗೆ ಲಭಿಸಿದ್ದು ನಮ್ಮ ಗ್ರಾಮಕ್ಕೆ ಮತ್ತು ತಾಲೂಕಿಗೆ ಹೆಮ್ಮೆಯ ವಿಷಯ. ಇದು ಅವರಿಗಿರುವ ಅಕ್ಷರ ದಾಸೋಹದ ಪ್ರೇಮವನ್ನು ಎತ್ತಿ ತೋರಿಸುತ್ತದೆ ಎಂದರು.
ಪ್ರಶಸ್ತಿ ಪುರಸ್ಕೃತೆ ವಿದ್ಯಾನಿಧಿ ಮಾತನಾಡಿ, ಇಂತಹ ಗೌರವವು ಕೇವಲ ನನ್ನ ಪರಿಶ್ರಮವಲ್ಲ ಅಕ್ಷರ ಕಲಿಸುವ ಹುಮ್ಮಸ್ಸು ಎಲ್ಲರಲ್ಲಿಯೂ ಇರುತ್ತದೆ. ಆದರೆ, ನನ್ನ ಪರಿಶ್ರಮಕ್ಕೆ ಎಲ್ಲರ ಸಹಾಯ ಸಹಕಾರವು ಅವಶ್ಯಕವಾಗಿದ್ದು, ನಮ್ಮ ಗ್ರಾಮದವರ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳು ನೀಡಿರುವ ಸಹಕಾರಕ್ಕೆ ನಾನು ಚಿರಋಣಿ. ಈ ಪ್ರಶಸ್ತಿಯು ತಮ್ಮೆಲ್ಲರಿಗೂ ಸಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಿವಲೀಲಾ ಪಾಳೇಕರ್, ಉಪಾಧ್ಯಕ್ಷರು ಶರಣಬಸಮ್ಮ ಕವಡೆ ಗ್ರಾಮ ಪಂಚಾಯತ ಸದಸ್ಯರು, ಜಿಲ್ಲಾ ಪಂಚಾಯತ್ ಮಾಜಿ ರಾಜಶೇಖರ್ ತಿಮ್ಮನಾಯಕ್, ತಾಲೂಕ ಪಂಚಾಯತ್ ಮಾಜಿ ಸದಸ್ಯ ಮುನಿಯಪ್ಪ ಕೊಳ್ಳಿ, ಮುಖಂಡರು ರಶೀದ್ ಪಠಾನ್, ಶಂಕರ್ ಕೊಳ್ಳಿ, ದಾವತ್ ಪಟೇಲ್ ಸೇರಿದಂತೆ ಗ್ರಾಮಸ್ಥರು,ಸಂಘಟಿಕರು, ಶಾಲೆಯ ಮಕ್ಕಳು ಇದ್ದರು.