ಮಂಡ್ಯದ ಜನರು ಶಾಂತಿ ಪ್ರಿಯರು. ಫೆಬ್ರವರಿ 9ರಂದು ಬಂದ್ ಬೇಡವೆಂದು ಮಂಡ್ಯ ಜನರೇ ಹೇಳುತ್ತಿದ್ದಾರೆ. ಆದರೆ, ಬಿಜೆಪಿ-ಜೆಡಿಎಸ್ ತಮ್ಮ ರಾಜಕೀಯ ಲಾಭಕ್ಕಾಗಿ ಬಂದ್ ಮಾಡಲು ಮುಂದಾಗಿವೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜಕೀಯ ಪಕ್ಷಗಳ ಬಗ್ಗೆ ಮಂಡ್ಯದ ಜನರಿಗೆ ತಮ್ಮದೇ ಆದ ಒಲವು, ಅಭಿಮಾನವಿದೆ. ಬಿಜೆಪಿ-ಜೆಡಿಎಸ್ ಫೆಬ್ರವರಿ 9ರಂದು ಬಂದ್ಗೆ ಕರೆಕೊಟ್ಟಿರುವುದು ಮಂಡ್ಯ ಜನರಿಗೆ ಇಷ್ಟವಿಲ್ಲ” ಎಂದು ತಿಳಿಸಿದ್ದಾರೆ.
“ಮಂಡ್ಯದ ಜನರು ಶಾಂತಿ ಪ್ರಿಯರು. ಬಂದ್ ಬೇಡವೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಹನುಮ ಧ್ವಜ ಪ್ರಕರಣವನ್ನು ಬಿಜೆಪಿ-ಜೆಡಿಎಸ್ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿವೆ. ಅವರ, ಆಟ ಮಂಡ್ಯ ಜನರ ಎದುರು ನಡೆಯುವುದಿಲ್ಲ” ಎಂದಿದ್ದಾರೆ.
“ಕೆರಗೋಡಿಯಲ್ಲಿ ಜಿಲ್ಲಾಡಳಿತ ಸಭೆ ಕರೆಯಲಿದೆ. ಚರ್ಚೆ ನಡೆಸಲಿದೆ. ಗ್ರಾಮದ ಜನರ ಅಭಿಪ್ರಾಯಗಳನ್ನು ಆಲಿಸಲಿದೆ. ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯರು ಬಿಜೆಪಿ-ಜೆಡಿಎಸ್‌ನವರು ಇಳಿಯಬಾರದು” ಎಂದು ಹೇಳಿದ್ದಾರೆ.