ಬೆಳಗಾವಿಯ ವಂಟಮೂರಿಯಲ್ಲಿ ಪ್ರೀತಿಸಿದ್ದ ಜೋಡಿಗಳು ಊರು ತೊರೆದಿದ್ದಕ್ಕೆ ಯುವಕನ ತಾಯಿಯನ್ನು ಯುವತಿಯ ಕುಟುಂಬಸ್ಥರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದರು. ಪ್ರಕರಣದ ಸಂತ್ರಸ್ತೆಯ ಮಗ ಮತ್ತು ಆತನ ಪ್ರೇಯಸಿ ಮಂಗಳವಾರ ತಮ್ಮ ವಿವಾಹ ನೋಂದಣಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಪ್ರೇಮಿಗಳು 2023ರ ಡಿಸೆಂಬರ್ 11ರಂದು ಊರು ತೊರೆದು ಹೋಗಿದ್ದರು. ಅವರು ಊರು ತೊರೆದಿದ್ದಕ್ಕೆ ಅಂದು ರಾತ್ರಿ ಯುವಕನ ಮನೆಗೆ ನುಗ್ಗಿದ್ದ ಯುವತಿಯ ಕುಟುಂಬದ ಗುಂಪು, ಯುವಕನ ತಾಯಿಯನ್ನು ಎಳೆದೊಯ್ದು, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿತ್ತು. ಪ್ರಕರಣ ಸಂಬಂಧ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ಸಂತ್ರಸ್ತೆಗೆ ಪರಿಹಾರ ನೀಡುವಂತೆ ಆದೇಶಿಸಿತ್ತು.
ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಡಿಸೆಂಬರ್ 11ರಂದು ದೇವಸ್ಥಾನದಲ್ಲಿ ವಿವಾಹವಾಗಿದ್ದ ಪ್ರೇಮಿಗಳು, ಜನವರಿ 30ರ ಮಂಗಳವಾರ ಬೆಳಗಾವಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ವಿವಾಹ ನೋಂದಣಿ ಮಾಡಿಸಿದ್ದಾರೆ.