ದಾವಣಗೆರೆ | ಜಿಲ್ಲಾ ಬಿಜೆಪಿ ಘಟಕದಲ್ಲಿ ಗುಂಪುಗಾರಿಕೆ, ಕಾರ್ಯಕರ್ತರ ಸರಣಿ ಸಭೆ

Date:

Advertisements

ದಾವಣಗೆರೆಯ ಬಿಜೆಪಿ ಘಟಕದಲ್ಲಿ ಇತ್ತೀಚಿನ ಕೆಲ ದಿನಗಳಿಂದ ನಡೆಯುತ್ತಿರುವ ಗುಂಪುಗಾರಿಕೆ ಹಾಗೂ ಕೆಲ ಮುಖಂಡರ ವರ್ತನೆಗೆ ದಾವಣಗೆರೆ ಜಿಲ್ಲೆಯ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಸರಣಿ ಸಭೆ ನಡೆಸಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಇದ್ದಾಗಲೇ ಕೆಲವರು ಹುಟ್ಟು ಹಾಕುತ್ತಿರುವ ಗೊಂದಲ, ಗದ್ದಲಗಳ ಬಗ್ಗೆ ಬಹುತೇಕ ಎಲ್ಲರಿಂದಲೂ ತೀವ್ರ ಅಸಮಾಧಾನ ವ್ಯಕ್ತವಾಯಿತಲ್ಲದೇ, ನಿಮ್ಮ ಇಂತಹ ಕೆಲಸ ಸಾವಿರಾರು ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದೆ ಎಂಬ ಎಚ್ಚರಿಕೆ ನೀಡಲಾಯಿತು ಎಂದು ಗೊತ್ತಾಗಿದೆ. ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಮಹಿಳಾ ಮುಖಂಡರು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಜಿ.ಮಲ್ಲಿಕಾರ್ಜುನಪ್ಪನವರು ಸ್ಪರ್ಧಿಸಿದಾಗಿನಿಂದ ತೀರಾ ಈಚಿನವರೆಗೂ ಸಂಸದ ಡಾ. ಜಿ.ಎಂ.ಸಿದ್ದೇಶ್ವರ ಇದೇ ಜಿಲ್ಲೆಯವರಾಗಿದ್ದರು.

ಆದರೆ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ಸಿನ ನಾಯಕರು, ಸಿಎಂ, ಡಿಸಿಎಂ, ಕೆಲ ಸಚಿವರು, ವಿಶೇಷವಾಗಿ ದಾವಣಗೆರೆ ಕಾಂಗ್ರೆಸ್ಸಿನ ನಾಯಕರ ಭೇಟಿ ಮಾಡಿ ಬಂದ ನಂತರವಂತೂ ಕಾಂಗ್ರೆಸ್ಸಿನವರ ಮಾತುಗಳು ರೇಣುಕಾಚಾರ್ಯ ಮತ್ತಿತರರ ಬಾಯಿಂದ ಬರುತ್ತಿವೆ. ಇದೆಲ್ಲದರ ಹಿಂದೆ ಯಾವ ಕಾಣದೆ ಕೈಗಳಿವೆ ಎಂಬ ನಮ್ಮ ಪ್ರಶ್ನೆಗೆ ಮುಖಂಡರೆನಿಸಿಕೊಂಡವರು ಉತ್ತರ ಕೊಡಲಿ ಎಂಬ ಒತ್ತಾಯ ಕೇಳಿ ಬಂದಿದೆ.

Advertisements

ವಿಧಾನಸಭೆ ಚುನಾವಣೆಗಳ ವೇಳೆ ಟಿಕೆಟ್ ವಿಚಾರಕ್ಕಾಗಲೀ, ಹಣದ ವಿಚಾರವೇ ಆಗಿರಲಿ ಎಲ್ಲದಲ್ಲೂ ಸಿದ್ದೇಶಪ್ಪ ಬೇಕು. ಈಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿನವರೇ ಬೆಚ್ಚಿ ಬೀಳುವಂತೆ ಬಿಜೆಪಿಯಲ್ಲಿರುವ ಕೆಲವರು ಕಾಂಗ್ರೆಸ್ಸಿನವರ ಮಾತುಗಳನ್ನಾಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಸತತವಾಗಿ 4 ಚುನಾವಣೆಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಭದ್ರ ನೆಲೆ ಮಾಡಿಕೊಟ್ಟವರು ಸಿದ್ದೇಶ್ವರ. ಒಟ್ಟು 6 ಸಲ ಬಿಜೆಪಿ ಗೆದ್ದಿದ್ದರೆ ಸಿದ್ದೇಶ್ವರರ ಕೊಡುಗೆ ಇದೆಯೆಂಬುದನ್ನು ಈಗ ವಿರೋಧಿಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕು. ಇದ್ದಕ್ಕಿದ್ದಂತೆ ಇಂತಹವರಿಗೆ ಸಿದ್ದೇಶಪ್ಪ ಬೇರೆ ಜಿಲ್ಲೆಯವರಾದರೆ ಎಂದು ಅವರು ಪ್ರಶ್ನಿಸಿದರೆನ್ನಲಾಗಿದೆ.

ಸಭೆಯಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಉತ್ತರ ಅಧ್ಯಕ್ಷ  ಬೇತೂರು ಸಂಗನಗೌಡ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ, ಮುಖಂಡರಾದ ಬಿ.ಎಸ್.ಜಗದೀಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ದೂಡಾ ಮಾಜಿ ಅಧ್ಯಕರಾದ ಯಶವಂತರಾವ್ ಜಾಧವ್, ಎ.ವೈ.ಪ್ರಕಾಶ, ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಕೊಂಡಜ್ಜಿ ಜಯಪ್ರಕಾಶ, ವಕೀಲ ರಾಘವೇಂದ್ರ ಮೊಹರೆ.

ಮಾಜಿ ಮೇಯರ್ ಗಳಾದ ಡಿ.ಎಸ್.ಉಮಾ ಪ್ರಕಾಶ, ಎಸ್.ಟಿ.ವೀರೇಶ, ಪಾಲಿಕೆ ಉಪ ಮೇಯರ್ ಯಶೋಧ ಯೋಗೇಶ, ವಿಪಕ್ಷ ನಾಯಕ ಕೆ.ಎಸ್.ಪ್ರಸನ್ನಕುಮಾರ, ಆ‌ರ್.ಎಲ್.ಶಿವಪ್ರಕಾಶ, ಆರ್.ಶಿವಾನಂದ, ಮಾಜಿ ಉಪ ಮೇಯರ್ ಪಿ.ಎಸ್. ಜಯಣ್ಣ, ಆನಂದರಾವ್ ಸಿಂಧೆ, ರಾಜು ನೀಲಗುಂದ, ಶಿವನಗೌಡ ಪಾಟೀಲ್‌, ಟಿಂಕರ್ ಮಂಜಣ್ಣ, ಪಿ.ಎಸ್.ಬಸವರಾಜ, ಕೆ.ಹೇಮಂತಕುಮಾರ, ಮುಕುಂದ, ಶಿವಾಜಿ ರಾವ್, ಸುರೇಶ  ಗಂಡಗಾಳೆ ಹಾಗೂ ಕಾರ್ಯಕರ್ತರು ಮುಖಂಡರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X