ಈ ಹಿಂದೆ ಬಿಜೆಪಿ ಮೇಲೆ ಕಾಂಗ್ರೆಸ್ ಆಧಾರ ರಹಿತ ಶೇ.40 ಕಮಿಷನ್ ಆರೋಪ ಮಾಡಿತ್ತು. ಈಗ ಅದೇ ಕಾಂಗ್ರೆಸ್ ಸರ್ಕಾರದಲ್ಲಿ ಅದಕ್ಕೂ ಮೀರಿಸಿದಂತೆ ಕಮಿಷನ್ ದಂಧೆ ನಡೆಯುತ್ತಿದೆ ಎನ್ನುವುದನ್ನು ಕಾಂಗ್ರೆಸ್ ಮುಖಂಡ ಬಿ. ಶಿವರಾಂ ಬಯಲು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಾಗಿಲು ತೆರೆದು ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಪರ್ಸೆಂಟೇಜ್ ವ್ಯವಹಾರವನ್ನು ಮಾಜಿ ಸಚಿವರೂ ಆದ ಕಾಂಗ್ರೆಸ್ ಮುಖಂಡ ಬಿ. ಶಿವರಾಂ ಬಯಲು ಮಾಡಿದ್ದಾರೆ” ಎಂದಿದ್ದಾರೆ.
“ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರು ಕಮಿಷನ್ ದಂಧೆ ಬಗ್ಗೆ ಸ್ವತಃ ಕಾಂಗ್ರೆಸ್ಸಿಗರೇ ಈ ಮಟ್ಟದಲ್ಲಿ ರೋಸಿ ಹೋಗಿದ್ದಾರೆಂದರೆ ಸಿದ್ದರಾಮಯ್ಯ ಅವರ ಸರ್ಕಾರ ಕಡು ಭ್ರಷ್ಟತೆಗೆ ಹೊಸ ಇತಿಹಾಸ ಬರೆಯಲು ಹೊರಟಂತಿದೆ” ಎಂದು ಟೀಕಿಸಿದ್ದಾರೆ.
“ಅಭಿವೃದ್ಧಿ, ಜನಕಲ್ಯಾಣ ಕಾರ್ಯಗಳನ್ನು ಸಂಪೂರ್ಣವಾಗಿ ಮರೆತಿರುವ ಕಾಂಗ್ರೆಸ್ ಸರ್ಕಾರ ಎಲ್ಲೆಂದರಲ್ಲಿ ಭ್ರಷ್ಟಾಚಾರದ ಅಂಗಡಿಗಳನ್ನು ತೆರೆಯುವುದರ ಜತೆಗೇ ಹೆಜ್ಜೆ ಹೆಜ್ಜೆಗೂ ಎಟಿಎಂ ಮಾದರಿ ಕಮೀಷನ್ ಕೌಂಟರ್ ಗಳನ್ನೂ ತೆರೆದು ಕುಳಿತಿದೆ. ಈ ಸರ್ಕಾರವನ್ನು ಕಿತ್ತೊಗೆಯುವುದೊಂದೇ ಜನರಿಗಿರುವ ಮಾರ್ಗವಾಗಿದೆ” ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಾಗಿಲು ತೆರೆದು ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಪರ್ಸೆಂಟೇಜ್ ವ್ಯವಹಾರವನ್ನು ಮಾಜಿ ಸಚಿವರೂ ಆದ ಕಾಂಗ್ರೆಸ್ ಮುಖಂಡ ಬಿ. ಶಿವರಾಂ ಬಯಲು ಮಾಡಿದ್ದಾರೆ.
ಈ ಹಿಂದೆ ಬಿಜೆಪಿ ಮೇಲೆ ಹೊರಿಸಿದ್ದ ಆಧಾರ ರಹಿತ 40% ಆರೋಪ ಅದಕ್ಕೆ ಮೀರಿಸಿದಂತೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದೆ…
— Vijayendra Yediyurappa (@BYVijayendra) February 2, 2024
ರಾಜ್ಯಾಧ್ಯಕ್ಷರು ಎಂಟು ತಿಂಗಳ ಹಿಂದೆ ತಮ್ಮದೇ ಸರ್ಕಾರದಲ್ಲಿ ನಲವತ್ತು ಪರ್ಸೆಂಟ್ ಕಮಿಷನ್ ಆಪಾದನೆಯನ್ನು ತಮ್ಮ ಪಕ್ಷದ ಯತ್ನಾಳ್ ಬಹಿರಂಗವಾಗಿ ಹೇಳಿಕೊಂಡು ಓಡಾಡಿದರು,,
ಕೆಲಸ ಇಲ್ಲದ ಹಜಾಮ ಬೆಕ್ಕಿನ ಮೀಸೆ ಕಟ್ ಮಾಡಿದ್ದನಂತೆ.