ಚಾಮರಾಜನಗರ | ಸ್ವಂತ ಹಣದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಿದ ಮುಸ್ಲಿಂ ಮಹಿಳೆ

Date:

Advertisements

ದಕ್ಷಿಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಚಾಮರಾಜನಗರವೂ ಒಂದು. ರಾಜ್ಯದಲ್ಲಿಯೇ ಹೆಚ್ಚು ಬರ ಪೀಡಿತ ಪ್ರದೇಶ, ಮೂಲಭೂತ ಸೌಕರ್ಯ ವಂಚಿತ ನಗರ ಅನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಹಿಂದೆ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಕಾಲಾನಂತರದಲ್ಲಿ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿದೆ. ಆದರೂ, ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಂಡಿಲ್ಲ.

ಇಂತಹ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ತನ್ನ ಸ್ವಂತ ಹಣದಿಂದ ಅಂಗನವಾಡಿ ತೆಗೆದು ನಡೆಸುತ್ತಿದ್ದಾರೆ. ಚಾಮರಾಜನಗರದ ಗಾಳಿಪುರದಲ್ಲಿ ಸರಿಸುಮಾರು 30 ವರ್ಷಗಳ ಹಿಂದೆ ಶಾಹಿದ ಭಾನು ಎಂಬ ಮುಸ್ಲಿಂ ಮಹಿಳೆ ಅಂಗನವಾಡಿ ಕೇಂದ್ರಕ್ಕಾಗಿ ಕಚೇರಿಗಳಿಗೆ, ಜನಪ್ರತಿನಿಧಿಗಳ ಬಳಿ ಅಲೆದಾಡಿದ್ದರು. ಆದರೆ, ಯಾರೊಬ್ಬರೂ ಅವರ ಮನವಿಗೆ ಕಿವಿಗೊಡಲಿಲ್ಲ. ಅವರೆಲ್ಲರೂ, ಸ್ವಂತ ಕಟ್ಟಡವಿದ್ದರೆ, ನೆರವು ನೀಡಲು ಸಾಧ್ಯವೆಂಬ ಹಾರಿಕೆ ಉತ್ತರ ನೀಡುತ್ತಿದ್ದರು.

ಆಳುವವರ ನಿರ್ಲಕ್ಷ್ಯದಿಂದ ಬೇಸತ್ತ ಶಾಹಿದ ಭಾನು ಲೆಕ್ಕವಿರದಷ್ಟು ಬಾಡಿಗೆ ಮನೆ, ಮರದ ಕೆಳಗೆ, ಜೋಪಡಿಯಲ್ಲಿಯು ಸಹ ಮಕ್ಕಳಿಗೆ ಪಾಠ ಮಾಡಿದ್ದಾರೆ. ಮಕ್ಕಳ ಕಿರಿಕಿರಿ ಸಹಿಸದ ಜನ ಅದೆಷ್ಟೋ ಬಾರಿ ಹೊರ ಹಾಕಿದ್ದಾರೆ. ಆದರೂ, ಕಡೆಗೂ ಹಠ ಬಿಡದೆ ಅಂಗನವಾಡಿ ಕೇಂದ್ರ ಕಟ್ಟಲೇಬೇಕು ಅನ್ನುವ ಕನಸು ಹೊತ್ತಿದ್ದ ಶಾಹಿದ ಭಾನು ಟೈಲರ್ ವೃತ್ತಿ ಮಾಡುತ್ತಿದ್ದ ತನ್ನ ಪತಿಯ ನೆರವಿನಲ್ಲಿ 4 ಲಕ್ಷ ರೂ. ಕೊಟ್ಟು, ಖಾಲಿ ನಿವೇಶನ ಖರೀದಿಸಿ, 10 ಲಕ್ಷ ಸಾಲ ಮಾಡಿ ಸುಸರ್ಜಿತವಾದ ಅಂಗನವಾಡಿ ಕೇಂದ್ರ ಕಟ್ಟಿದ್ದಾರೆ. ನಗರದ ಹಲವಾರು ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುತ್ತಿದ್ದಾರೆ.

Advertisements

ಕಟ್ಟಡ ತಲೆ ಎತ್ತಿದ ಬಳಿಕ ಅದನ್ನು ಸರ್ಕಾರದ ವ್ಯಾಪ್ತಿಗೆ ಒಳಪಡಿಸಿದ್ದಾರೆ. ಈಗ ಸರ್ಕಾರದ ಅನುದಾನದ ಮೂಲಕ ಮಕ್ಕಳಿಗೆ, ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ಪದಾರ್ಥ ನೆರವನ್ನು ಪಡೆದು ಯಾವ ಖಾಸಗಿ ಶಾಲೆಗೂ ಕಡಿಮೆ ಇರದಂತೆ ನಡೆಸುತ್ತಿದ್ದಾರೆ.

ಅಂಡನವಾಡಿ ಕಟ್ಟಿದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಶಾಹಿದ ಭಾನು, “ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಒಂದೊಳ್ಳೆಯ ಶಾಲೆ ಮಾಡಿ ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡಬೇಕು ಅನ್ನುವ ಕನಸು ನನ್ನದು. ಇದಕ್ಕಾಗಿ 30 ವರ್ಷ ಶ್ರಮ ಪಟ್ಟಿದ್ದೀನಿ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಟ್ಟಡ ಕಟ್ಟಿಸಿದೆ. ಇವತ್ತು ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರ್ತಿದ್ದಾರೆ. ಚಾಮರಾಜನಗರಕ್ಕೆ ಇದೆ ಮೊದಲ ಅಂಗನವಾಡಿ ಕೇಂದ್ರ. ಈಗ ಹಸೀನಾ ಭಾನು ಅವರು ಕೂಡ ಕರಿಮಾರಮ್ಮ ದೇವಸ್ಥಾನ ಹತ್ತಿರ 7ನೇ ಅಂಗನವಾಡಿ ಕೇಂದ್ರ ತೆರೆದಿದ್ದಾರೆ” ಎಂದು ಹೇಳಿದ್ದಾರೆ.

“ನಾನು ಅಂಗನವಾಡಿ ಕೇಂದ್ರ ಕಟ್ಟಿಸಿದೆ ಅನ್ನುವುದು ಮುಖ್ಯವಲ್ಲ. ಮುಂದೆ ಬರುವವರು ಸಹ ಇದೆ ರೀತಿ ನಡೆಸಿಕೊಂಡು ಹೋಗಬೇಕು. ಈಗ ಸರ್ಕಾರದ ವ್ಯಾಪ್ತಿಯಲ್ಲಿ ಇದೆ ಇಲ್ಲಿವರೆಗೂ 30 ವರ್ಷಗಳಿಂದ ಮಕ್ಕಳು ಅಂಗನವಾಡಿ ಸದುಪಯೋಗ ಪಡಿಸಿಕೊಂಡಿದ್ದಾರೆ.ಮುಂದೆಯೂ ಸಹ ಮಕ್ಕಳಿಗೆ ನೆರವಾಗಬೇಕು” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ?: ʼಗೋದಿ ಮೀಡಿಯಾʼ ಅಂದ್ರೇನು? ಇಲ್ಲಿದೆ ನೋಡಿ

ಅಂಗನವಾಡಿಗೆ ತೆರಳುವ ಮಗುವಿನ ಪೋಷಕಿ ನೇತ್ರ ಮಾತನಾಡಿ, “ಮಕ್ಕಳನ್ನು ಯಾವ ‘ಬೇಬಿ ಸಿಟ್ಟಿಂಗ್’ ಕಳಿಸಿದರು ಇಂತಹ ವ್ಯವಸ್ಥೆ ಸಿಗುವುದಿಲ್ಲ. ಮಕ್ಕಳಿಗೆ ಈಗಲೇ ಅಗತ್ಯವಾದ ಕಲಿಕೆ, ಉತ್ತಮವಾದ ಆಹಾರ,
ಮಲಗಲು ವ್ಯವಸ್ಥೆ, ಮಕ್ಕಳನ್ನು ಜಾಗರೂಕತೆಯಿಂದ ಸಲಹಲು ಸಹಾಯಕಿಯರು ಅಂಗನವಾಡಿಯಲ್ಲಿದ್ದಾರೆ. ಇಂತಹ ವ್ಯವಸ್ಥೆ ಎಲ್ಲ ಅಂಗನವಾಡಿ ಕೇಂದ್ರದಲ್ಲಿ ಸಿಕ್ಕರೆ, ಖಾಸಗಿ ಕೇಂದ್ರಗಳಿಗೆ ಕಳಿಸುವ ಅಗತ್ಯ ಬರುವುದೇ ಇಲ್ಲ. ಇಂತಹ ಅಂಗನವಾಡಿ ಕೇಂದ್ರ ನಿರ್ಮಿಸಿ ಶಾಹಿದ ಭಾನು ಮಾದರಿಯಾಗಿದ್ದಾರೆ” ಎಂದರು.

ಹಸೀನಾ ಭಾನು ಮಾತನಾಡಿ, “ವರದರಾಜಪುರ (ಗಾಳಿಪುರ) 2ನೇ ವಾರ್ಡ್ ಇದು. ಇಲ್ಲಿ ಓಡಾಡಲು ಆಗದೆ ಇರುವ ಪರಿಸ್ಥಿತಿ ಇದೆ. ಎಲ್ಲಿ ನೋಡಿದರೂ ಕುರುಚಲ ಜಾಲಿ ಗುತ್ತಿ. ಇಲ್ಲಿ ಶಾಲೆಯಲ್ಲ ಸಾಮಾನ್ಯ ಜನರು ಸಹ ಇರಲು ಕಷ್ಟದ ಪರಿಸ್ಥಿತಿ. ಇಂತಹ ಜಾಗದಲ್ಲಿ ಅಂಗನವಾಡಿ ಕೇಂದ್ರ ಮಾಡಲೇಬೇಕು ಅನ್ನುವ ಹಠ ತೊಟ್ಟು ಯಾವುದೇ ಸ್ವಾರ್ಥ ಇರದೆ ಒಳ್ಳೆಯ ಅಂಗನವಾಡಿ ಕೇಂದ್ರ ಕಟ್ಟಿಸಿದ್ದಾರೆ. ಇದರಿಂದ ನಾವು ಕೂಡ ಪ್ರೇರಿತರಾಗಿ ಇನ್ನೊಂದು ಅಂಗನವಾಡಿ ಸಹ ಮಾಡಿದ್ದೇವೆ” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X