ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2023-24ನೇ ಸಾಲಿನಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಆರಂಭವಾಗಿದೆ. ಉನ್ನತ ಶಿಕ್ಷಣ ಪಡೆಯಸುವವರು ಅರ್ಜಿ ಸಲ್ಲಿಸಬಹುದು ಎಂದು ಸಂಯೋಜನಾಧಿಕಾರಿ ನಾಗರಾಜ ಹಚ್.ಎನ್ ತಿಳಸಿದ್ದಾರೆ.
ಧಾರವಾಡದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ವಿಶ್ವವಿದ್ಯಾಲಯದಲ್ಲಿ ಯುಜಿಸಿ ಹೊಸ ನಿಯಮದಂತೆ ಕಲಿಕಾರ್ಥಿಗಳು ಏಕಕಾಲದಲ್ಲಿ ಎರಡು ಕೋರ್ಸಗಳಿಗೆ (ಒಂದು ಭೌತಿಕ ಮತ್ತು ಒಂದು ದೂರ ಶಿಕ್ಷಣ ಅಥವಾ ಎರದೂ ದೂರ ಶಿಕ್ಷಣದ ಮೂಲಕ) ಪ್ರವೇಶಾತಿ ಪಡೆಯಬಹುದು” ಎಂದು ಹೇಳಿದರು.
“ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಲು ಕಲಿಕಾರ್ಥಿಗಳಿಗೆ ರೆಗ್ಯುಲರ್ ಶಿಕ್ಷಣಕ್ಕೆ ಸರಿಸಮನವಾದ ಉನ್ನತ ಶಿಕ್ಷಣವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಪಡೆಯಲು ಧಾರವಾಡದಲ್ಲಿ ಸಹಾಯ ಕೇಂದ್ರ ಹಾಗೂ ಪರೀಕ್ಷಾ ಕೇಂದ್ರವಿದೆ. ವಿಶ್ವವಿದ್ಯಾನಿಲಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕೋರ್ಸಗಳ ಪ್ರವೇಶಾತಿಗೆ ಅವಕಾಶವಿದೆ” ಎಂದು ತಿಳಿಸಿದರು.
“ವಿಶ್ವವಿದ್ಯಾಲಯದಲ್ಲಿ ಕೋರ್ಸಗಳಿಗೆ ಪ್ರವೇಶಾತಿ ಪಡೆಯ ಬಯಸುವ ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಅಂಕಪಟ್ಟಿಗಳು ಹಾಗೂ ಆಧಾರ್ ಕಾರ್ಟ್‌ಗಳ 3 ಸೆಟ್ ಜೆರಾಕ್ಸ್ ಹಾಗೂ ಇತ್ತೀಚಿನ 8 ಪೋಟೋಗಳನ್ನು ಸಲ್ಲಿಸಬೇಕು. ದಾಖಲಾತಿ ಪಡೆಯುವಾಗ ಮೂಲ ಅಂಕಪಟ್ಟಿಗಳನ್ನು ಒದಗಿಸಬೇಕು” ಎಂದು ವಿವರಿಸಿದರು.
“ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೌಲಭ್ಯವನ್ನು ಸಮಾಜಕಲ್ಯಾಣ ಇಲಾಖೆಯಿಂದ ಪಡೆಯಲು ಅವಕಾಶವಿದೆ. ವಿಶೇಷವಾಗಿ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅವಕಾಶವಿದೆ” ಎಂದು ತಿಳಿಸಿದರು.
“ಪ್ರವೇಶಾತಿ ಪಡೆಯಲು 2024ರ ಫೆಬ್ರವರಿ 29ರವರೆಗೆ ಅವಕಾಶವಿದೆ. ಈ ದಿನಾಂಕದೊಳಗೆ ಪ್ರವೇಶಾತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 9480062375 / 9480043794 ಕರೆ ಮಾಡಬಹುದು” ಎಂದು ಹೇಳಿದರು.
About courses
And fees
Second year admition start agideya sir/nam
I wanted to join Post graduation in Sociologly, kindly guid me how to go through about it.
Regards
Debashree Chakraborty