ಉತ್ತರ ಪ್ರದೇಶದ ಮೀರತ್‌ನಲ್ಲಿ ಭಯೋತ್ಪಾದನಾ ವಿರೋಧಿ ಪಡೆ(ಎಟಿಎಸ್) ಪಾಕಿಸ್ತಾನದ ಐಎಸ್‌ಐ ಏಜೆಂಟ್ ಒಬ್ಬನನ್ನು ಬಂಧಿಸಿದೆ. ಬಂಧಿತ ಮಾಸ್ಕೋದಲ್ಲಿರುವ ರಾಯಭಾರಿ ಕಚೇರಿಯಲ್ಲಿ ಈ ಮೊದಲು ಗೂಢಾಚಾರಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಬಂಧಿತ ಸತ್ಯೇಂದ್ರ ಸಿವಾಲ್ 2021ರಿಂದ ಮಾಸ್ಕೋದ ರಾಯಭಾರ ಗೂಢಚಾರಿ ಕೆಲಸಕ್ಕೆ ನೇಮಕಗೊಂಡಿದ್ದ. ಈತ ಭಾರತೀಯ ಮೂಲದ ಕಚೇರಿಯಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮೂಲಗಳ ಪ್ರಕಾರ ಭಯೋತ್ಪಾದನಾ ವಿರೋಧಿ ನಿಗ್ರಹ ಪಡೆ ಮಾಸ್ಕೋದಲ್ಲಿರುವ ರಾಯಭಾರಿ ಕಚೇರಿಯಿಂದ ಗೂಢಚಾರಿ ಕೆಲಸ ನಿರ್ವಹಿಸುತ್ತಿರುವುದ ಬಗ್ಗೆ ಸುಳಿವು ಪಡೆದು ಬಂಧಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?
ಆರೋಪಿಯನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ ವಿಚಾರಣೆಗೊಳಪಡಿಸಿದಾಗ ಆರಂಭದಲ್ಲಿ ಸರಿಯಾದ ಉತ್ತರ ನೀಡಲಿಲ್ಲ. ಆದಾಗ್ಯೂ, ನಂತರದಲ್ಲಿ ತಾನು ಗೂಢಾಚಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಒಪ್ಪಿಕೊಂಡ ಎಂದು ತಿಳಿದುಬಂದಿದೆ.
ಆರೋಪಿ ಸತ್ಯೇಂದ್ರ ಸಿವಾಲ್ ಭಾರತೀಯ ಅಧಿಕಾರಿಗಳಿಗೆ ಹಣ ನೀಡಿ ಭಾರತೀಯ ಸೇನೆ ಹಾಗೂ ಅಲ್ಲಿನ ದಿನ ನಿತ್ಯದ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ. ಅಲ್ಲದೆ ಭಾರತೀಯ ರಾಯಭಾರಿ, ವಿದೇಶಾಂಗ ಇಲಾಖೆಯ ಅತ್ಯಂತ ಮುಖ್ಯವಾದ ಹಾಗೂ ಗೌಪ್ಯ ಮಾಹಿತಿಗಳನ್ನು ಪಡೆದುಕೊಂಡು ಐಎಸ್‌ಐಗೆ ರವಾನಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ವಿರುದ್ಧ ಉತ್ತರ ಪ್ರದೇಶದ ಎಟಿಎಸ್ ಐಪಿಸಿ ಸೆಕ್ಷನ್ 121ಎ ಅಡಿಯಲ್ಲಿ ದೇಶ ವಿರೋಧಿ ಚಟುವಟಿಕೆ ಹಾಗೂ ದೇಶದ ರಹಸ್ಯಗಳನ್ನು ಸೋರಿಕೆ ಮಾಡಿರುವುದರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಸತ್ಯೇಂದ್ರ ಸಿವಾಲ ಅನ್ಯಕೋಮಿನ ಅಧಿಕಾರಿ ಅಲ್ಲ,,,ಮೇಲಾಗಿ ಈತ ಉತ್ತರ ಪ್ರದೇಶದವನು,,,ನಕಲಿ ರಾಷ್ಟ್ರವಾದಿಗಳು ಬಹುಶಃ ಇಂಥಾ ವಿಷಯದ ಬಗ್ಗೆ ತುಟಿ ಬಿಚ್ಚೋದಿಲ್ಲ