“ಇದು ಆಮೆ ನಡಿಗೆಯ ಸರ್ಕಾರವೂ ಅಲ್ಲ, ನಿಂತ ನೀರಿನ ಸರ್ಕಾರ ಎಂಬುದನ್ನು ಕುಂತಲ್ಲೇ ಕೂತು ದೂಳು ತಿನ್ನುತ್ತಿರುವ 1.37 ಲಕ್ಷ ಕಡತಗಳು ಸಾಕ್ಷಿ ನುಡಿಯುತ್ತಿವೆ” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಇಡುವ ಮಾತು ಹಾಗಿರಲಿ ಜನರ ಕಷ್ಟ, ನಿವೇದನೆಗಳಿಗೆ ನಿತ್ಯ ಸ್ಪಂದಿಸಬೇಕಿದ್ದ ಕಡತಗಳೂ ಚಲನ ಶೀಲತೆ ಕಳೆದುಕೊಂಡಿವೆ ಎಂದರೆ ಈ ಸರ್ಕಾರ ಸ್ವಾಧೀನ ಕಳೆದುಕೊಂಡಿದೆ ಎಂದೇ ಅರ್ಥೈಸಬೇಕಾಗಿದೆ” ಎಂದಿದ್ದಾರೆ.
“ಸರ್ಕಾರದ ಮಂತ್ರಿಗಳು ಜವಾಬ್ದಾರಿ ಮರೆತರೆ ಅಧಿಕಾರಿಗಳು ನಿಷ್ಕ್ರೀಯರಾಗುತ್ತಾರೆ ಆಗ ಆಡಳಿತ ಯಂತ್ರವೂ ನಿಯಂತ್ರಣ ಕಳೆದುಕೊಳ್ಳುತ್ತದೆ,ಇದರ ಪರಿಣಾಮದ ಬಿಸಿ ಅನುಭವಿಸುವವರು ಜನರು ಮಾತ್ರ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ. ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲಿ. ಈ ನಿಟ್ಟಿನಲ್ಲಿ ಈಗಷ್ಟೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿಗಳು ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸಲು ಹೊರಟಿದ್ದಾರೆ” ಎಂದು ಕುಟುಕಿದ್ದಾರೆ.
ವಿಜಯೇಂದ್ರ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಹುತೇಕ ಮಂದಿ “ಇದು ನಿಮ್ಮ ಸರ್ಕಾರದ ಕೊಡುಗೆ” ಎಂದು ಕಾಲೆಳೆದಿದ್ದಾರೆ.
ಇದು ಆಮೆ ನಡಿಗೆಯ ಸರ್ಕಾರವೂ ಅಲ್ಲ
ನಿಂತ ನೀರಿನ ಸರ್ಕಾರ ಎಂಬುದನ್ನು
ಕುಂತಲ್ಲೇ ಕೂತು ಧೂಳು ತಿನ್ನುತ್ತಿರುವ
1.37 ಲಕ್ಷ ಕಡತಗಳು ಸಾಕ್ಷಿ ನುಡಿಯುತ್ತಿವೆ.ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಇಡುವ ಮಾತು ಹಾಗಿರಲಿ ಜನರ ಕಷ್ಟ, ನಿವೇದನೆಗಳಿಗೆ ನಿತ್ಯ ಸ್ಪಂದಿಸಬೇಕಿದ್ದ ಕಡತಗಳೂ
ಚಲನ ಶೀಲತೆ ಕಳೆದು ಕೊಂಡಿವೆ ಎಂದರೆ… pic.twitter.com/7kRVV1Vf3O— Vijayendra Yediyurappa (@BYVijayendra) February 5, 2024
ನಲವತ್ತು ಪರ್ಸೆಂಟ್ ಕಮಿಷನ್ ಹೇಸಿ ಸಂಪ್ರದಾಯ ಹಾಕಿ ಹೋಗಿರುವಿರಿ,,,ಅದೇ ಬೃಷ್ಠ ಅಧಿಕಾರಿಗಳು ಹಿಡಿದಿಟ್ಟುಕೊಂಡು ಕುಂತಿರುತ್ತಾರೆ,,, ಅಥವಾ ಹಳೆ ನಿಮ್ಮಗಳ ಹಗರಣಗಳ ಕಡತ ಇರಬಹುದು