ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಾಗೆರಾ ಗ್ರಾಮದಲ್ಲಿ ಗ್ರಾಮೀಣ ಆಶ್ರಯ ಯೋಜನೆ ಅಡಿಯಲ್ಲಿ ಬರುವ ಜಮೀನು ಖರೀದಿಸಲಾಗಿದ್ದು, ಅದನ್ನು ಅಭಿವೃದ್ಧಿಪಡಿಸಿ ದಲಿತ ಕುಟುಂಬಗಳ ಫಲಾನುಭವಿಗಳಿಗೆ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಬೇಕು ಎಂದು ನಗರದ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
“ಕುಷ್ಟಗಿ ತಾಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಬರುವ ತಾಳುವಗೇರಾ ಗ್ರಾಮದ ಸರ್ವೆ ನಂ.218/2, ಸರ್ವೆ ನಂ. 1 ಎಕರೆ 19 ಗುಂಟೆ ಜಮೀನು ಮ್ಯುಟೇಶನ್ ಆಗಿರುತ್ತದೆ. ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಸೇರಿ ಸಂಬಂಧಪಟ್ಟ ಫಲಾನುಭವಿಗಳಿಗೆ ವಿತರಣೆ ಮಾಡಲು ವಿಳಂಬ ಮಾಡುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ನಿವೇಶನ ಜಮೀನ್ ನಂಬರ್ ಎಂಆರ್‌ಎಚ್ 25/18-19 ಸದರಿ ಜಮೀನನ್ನು ತಳುವಾಗೇರಾ ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳ 37 ಫಲಾನುಭವಿಗಳಿಗೆ ನಿವೇಶನಗಳನ್ನು ಅಭಿವೃದ್ಧಿಪಡಿಸಿ ವಿತರಿಸಲು ಮಂಜೂರಿ ಹಿಂದೆಯೇ ನೀಡಲಾಗಿರುತ್ತದೆ. ಆದರೆ ಈವರೆಗೂ ಹಕ್ಕುಪತ್ರ ಸಿಕ್ಕಿಲ್ಲ” ಎಂದು ಆಕ್ರೋಶ ಹೊರಹಾಕಿದರು .
“ಮೇಲಧಿಕಾರಿಗಳು ತನಿಖೆ ಮಾಡಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಮೇಲಿನ ಪರಿಶಿಷ್ಟ ಜಾತಿಯ 37 ಫಲಾನುಭವಿಗಳಿಗೆ ನಿವೇಶನಗಳ ಹಕ್ಕು ಪತ್ರಗಳನ್ನು ಶೀಘ್ರದಲ್ಲೇ ವಿತರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮರಗಳ ಬೆಳವಣಿಗೆಗೆ ಅಡ್ಡಿಯಾಗಿರುವ ರಕ್ಷಾ ಕವಚ ತೆರವಿಗೆ ಆಗ್ರಹ
ಕರ್ನಾಟಕ ದಲಿತ ಸಂಘದ ಸದಸ್ಯ ಬಸವರಾಜ್ ಸಾಲಮರಿ, ಕಲಬುರಗಿ ವಿಭಾಗೀಯ ಅಧ್ಯಕ್ಷ ಶಂಕರ್ ಕಲ್ಲಬಾವಿ, ಕಲಬುರಗಿ ವಿಭಾಗಿಯ ಪ್ರಧಾನ ಕಾರ್ಯದರ್ಶಿ ಮರಿಸ್ವಾಮಿ ಮದಲಗಟ್ಟಿ, ಜಿಲ್ಲಾಧ್ಯಕ್ಷ ಬಸವರಾಜ್ ಬೇವಿನಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ದೋಟಿಹಾಳ, ಜಿಲ್ಲಾ ಕಾರ್ಯದರ್ಶಿ ಯಮನೂರ ಮೇಲಿನಮನಿ ಸೇರಿದಂತೆ ಇತರರು ಇದ್ದರು.