ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ತೆರಿಗೆ ಹಂಚಿಕೆ ನೀತಿಯ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ಸಂಸದರು ಸಂಸತ್ತಿನ ಹೊರಗೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೇಂದ್ರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪಿಸಿದ ಬಿಜೆಪಿ ನಾಯಕರು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
“ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಸರ್ಕಾರವನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ತಮ್ಮ ಆಂತರಿಕ ಸಮಸ್ಯೆಗಳಿಗಾಗಿ ಅವರು ದೆಹಲಿಗೆ ಬಂದಿದ್ದು,ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಡಿ ಕೆ ಶಿವಕುಮಾರ್ ಅವರು ಸಿಎಂ ಆಗಲಿಲ್ಲವಾದ ಕಾರಣ ಆಂತರಿಕ ಸಮಸ್ಯೆಗಳಿಂದ ತಮ್ಮ ಹೈಕಮಾಂಡ್ ನಾಯಕರ ವಿರುದ್ಧ ಪ್ರತಿಭಟಿಸಲು ಇಲ್ಲಿಗೆ ಬಂದಿದ್ದಾರೆ” ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹೇಳಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕರ್ನಾಟಕ ಸರ್ಕಾರ ಸುಳ್ಳುಗಳ ಸರ್ಕಾರವಾಗಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಕಾಂಗ್ರೆಸ್ನವರು ಭಾರತ್ ತೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ
ಬೆಂಗಳೂರಿನಲ್ಲಿಯೂ ಸಹ ರಾಜ್ಯ ಬಿಜೆಪಿ ನಾಯಕರು ನಗರದಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ತೆರಿಗೆ ಬಾಕಿ ಕಾರಣದಿಂದ ಕೇಂದ್ರದ ವಿರುದ್ಧ ಸುಳ್ಳು ನೆಪ ಹೇಳಿಕೊಂಡು ಕಾಂಗ್ರೆಸ್ ಸರ್ಕಾರ ಅನ್ಯಾಯದ ಪ್ರಚಾರ ನಡೆಸುತ್ತಿದೆ. ಸುಳ್ಳು ಮಾಹಿತಿ ಒದಗಿಸುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವುದು ಕೂಡ ವಿಶ್ವಾಸಘಾತಕ ಹಾಗೂ ಅನ್ಯಾಯದ ಇನ್ನೊಂದು ಮುಖವಾಗಿದೆ.ರಾಜ್ಯ ಬಿಜೆಪಿ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಶೀಘ್ರದಲ್ಲಿಯೇ ಆಧಾರಗಳೊಂದಿಗೆ ಕಾಂಗ್ರೆಸ್ ಸರ್ಕಾರದ ಬಣ್ಣವನ್ನು ಬಯಲಿಗೆಳೆಯುತ್ತೇವೆ” ಎಂದು ಹೇಳಿದರು.
ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಕರ್ನಾಟಕದ ಸಚಿವ, ಶಾಸಕ ಹಾಗೂ ಸಂಸದರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ತೆರಿಗೆ ಹಂಚಿಕೆ ಹಾಗೂ ಅನುದಾನ ನೀಡಿಕೆ ಅನ್ಯಾಯದ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಚಲೋ ದಿಲ್ಲಿ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡಿದ ಪರಿಣಾಮ ರಾಜ್ಯಕ್ಕೆ ಶೇ.4.72 ರಿಂದ ಶೇ.3.64 ರಷ್ಟು ಇಳಿಕೆಯಾಗಿದೆ. ಇದರಿಂದ ಕರ್ನಾಟಕಕ್ಕೆ 62,098 ಕೋಟಿ ರೂ. ನಷ್ಟವಾಗಿದೆ. ಬರ ಪರಿಹಾರಕ್ಕೆ 18,177 ಕೋಟಿ ಬೇಡಿಕೆಯಿಟ್ಟರೂ ಹಣಕಾಸು ಆಯೋಗವು 5495 ಕೋಟಿ ಮಾತ್ರ ನೀಡಲು ಶಿಫಾರಸ್ಸು ಮಾಡಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.
ರಾಜ್ಯದಿಂದ ಆಯ್ಕೆ ಆಗಿ ಹೋಗಿ ರಾಜ್ಯದ ಹಿತರಕ್ಷಣೆ ಮಾಡುವುದು ಬಿಟ್ಟು,, ಬಾಸ್ ನನ್ನು ಮೆಚ್ಚಿಸಲು ರಾಜ್ಯದ ಜನರ ಹಿತಾಸಕ್ತಿ ವಿರುದ್ಧ ಪ್ರತಿಭಟನೆ ಮಾಡುವ ಬೇಜವಾಬ್ದಾರಿ ಸಂಸದರು,,, ಇವರು ಏನಿದ್ದರೂ ಧ್ವಜ ಹಲಾಲ್ ಜಟಕಾ ಹಿಂದೂ ಮುಸ್ಲಿಂ, ಬಿಟ್ಟರೆ ಯಾವುದಕ್ಕೂ ಯೋಗ್ಯ ಇಲ್ಲ ಅನ್ನುವುದನ್ನು ಪದೆ ಪದೇ ಸಾಬೀತು ಮಾಡಿದ್ದಾರೆ,,, ಎಂಟು ತಿಂಗಳ ಹಿಂದೆ ತಮ್ಮದೇ ಸರ್ಕಾರ ಇರುವಾಗಲೂ ದಿಲ್ಲಿ ಬಾದಶಾ ನ ಎದುರಿಗೆ ನಿಂತು ಮಾತಾಡುವ ಧೈರ್ಯ ತೋರಿಸಲೇಯಿಲ್ಲ,, ರಾಜ್ಯದ ಸ್ವಾಭಿಮಾನವನ್ನು ಕಾಯಲಾಗದವರು ಕನ್ನಡ ನಾಡಿನ ದ್ರೋಹಿಗಳು,,,