ರಾಜ್ಯ ವಿಧಾನಸಭಾ ಅಧಿವೇಶನ ಫೆ.12ರಿಂದ 23ರವರೆಗೆ ನಡೆಯಲಿದ್ದು, ಫೆ.16ರಂದು ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಫೆ.12ರಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಫೆ.15ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. 16ರಂದು ಬಜೆಟ್ ಮಂಡನೆಯಾಗಲಿದೆ ಬಳಿಕ 23ರವರೆಗೂ ಬಜೆಟ್ ಮೇಲೆ ಚರ್ಚೆ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ಫೆ.9ರಂದು ಶಾಸಕರಿಗೆ ಹಾಗೂ ಪತ್ರಕರ್ತರಿಗೂ ಬಜೆಟ್ ಕುರಿತಾಗಿ ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್‌ನಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಟ್ರೈನಿಂಗ್‌ನಲ್ಲಿ ಬಜೆಟ್ ಅಂದ್ರೆ ಏನು? ಯಾವ ರೀತಿಯಾಗಿ ಅನುದಾನವನ್ನ ಹಂಚಿಕೆಯಾಗುತ್ತದೆ, ಅದರ ಮಹತ್ವ ಏನು ಎನ್ನುವುದು ಸೇರಿದಂತೆ ಎಲ್ಲಾವನ್ನು ತರಬೇತಿಯಲ್ಲಿ ನೀಡಲಾಗುತ್ತದೆ. ನೂತನವಾದ ಶಾಸಕರಿಗೂ ಮಾಹಿತಿ ದೊರೆಲಿದೆ, ಶಾಸಕರು ಭಾಗವಹಿಸಬಹುದಾಗಿದೆ ಜೊತೆಗೆ ಪತ್ರಕರ್ತರು ಸಹ ಟ್ರೈನಿಂಗ್ ಅದೇ ದಿನದಂದು ನೀಡಲಾಗುವುದು ಎಂದು ತಿಳಿಸಿದರು.
ದೆಹಲಿಯಲ್ಲಿ ಅನುದಾನ ವಿಚಾರವಾಗಿ, ದಿಲ್ಲಿ ಚಲೋ ಪ್ರತಿಭಟನೆ ಕುರಿತಾಗಿ ಪ್ರೆಶ್ನೆಗೆ, ನಾನು ಸಭಾಪತಿಯಾಗಿರುವ, ವಿಧಾನಸಭಾ ಒಳಗಿನ ವಿಚಾರವನ್ನ ಮಾತ್ರ ಮಾತನಾಡುತ್ತೇನೆ, ಅದರ ಹೊರಗಿನ ವಿಚಾರ ಬಗ್ಗೆ ನಾನು ಹೇಳಲ್ಲ, ಒಳಗೆ ಚೆನ್ನಾಗಿ ಇರಬೇಕು, ಹೊರಗಡೆ ಸಹ ಸೌಹಾರ್ದಯುತವಾಗಿ ಇರಬೇಕು ಎಂದರು.
ವಿಧಾನಸಭೆ ನಡೆಯುವಾಗ ಎಲ್ಲಾ ಶಾಸಕರು ಭಾಗವಹಿಸಬೇಕು. ಜನಸಾಮಾನ್ಯರು ಮತಕೊಟ್ಟು ಅವರನ್ನ ವಿಧಾನಸಭೆಗೆ ಕಳುಹಿಸುತ್ತಾರೆ. ಅವರು ಅದನ್ನ ಅರ್ಥ ಮಾಡಿಕೊಳ್ಳಬೇಕು. ಅಧಿವೇಶನ ನಡೆಯುವಾಗ ಸಮಯಕ್ಕೆ ಸರಿಯಾಗೆ ಬಂದು ಬೆಳ್ಳಗಿನಿಂದ ಸಂಜೆವರೆಗೂ ಭಾಗವಹಿಸಬೇಕು. ಯಾವುದೇ ಕೆಲಸವಿರಲಿ ಅಥವಾ ಎಷ್ಟೆ ಕೆಲಸವಿದ್ದರೂ ಬದಿಗಿಟ್ಟು ವಿಧಾನಸಭೆಯಲ್ಲಿ ಹಾಜರಾಗಬೇಕು.
ಕ್ಷೇತ್ರದ ಜನರು ಒಂದೇ ಬಾರಿ ಶಾಸಕರಾಗಿ ಜೊತೆಗೆ ಮುಂದೆ ಮಂತ್ರಿಯಾಗಬೇಕು ಮುಂದೆ ಬೆಳೆಯಬೇಕು ಎನ್ನುವ ಕಾರ್ಯಕರ್ತರು, ಜನರು ಆಶಯ ಇರುತ್ತದೆ, ಅದರಂತೆ ಶಾಸಕರು ಭಾಗವಹಿಸಬೇಕು, ಬಹಳಷ್ಟು ಜನ ಬಂದಿದ್ದರೆ, ಹೋಗಿದ್ದರೆ, ಅಲ್ಲದೆ ಬೆಳದಿದ್ದರೆ, ಅಧಿವೇಶನದ ವೇಳೆ ಎಷ್ಟು ಚರ್ಚೆ ಭಾಗವಹಿಸಿದರೆ, ವಿಷಯ ಕೇಳುತ್ತಾರೆ, ಅಂತಹವರಲ್ಲಿ ಯಶಸ್ವಿ ನಾಯಕರು ಆಗುತ್ತಾರೆ ಎಂದರು.
ವಿಧಾನಸಭಾ ಜನಸಾಮನ್ಯ ಹತ್ತಿರ ತೆಗೆದುಕೊಂಡಬೇಕು, ಅದನ್ನ ಜನಸಾಮಾನ್ಯರಿಂದ ದೂರವಾಗಬಾರದು, ಸಮಾಜದ ಕಟ್ಟ ಕಡೆಯ ವ್ಯಕ್ತಿ ಸಿಗುವಂತಹದು ಆಗಬೇಕು, ಅದನ್ನ ನನ್ನಿಂದ ದೂರವಾಗಿದೆ ಎಂದು ಮನಸಿಗೆ ಬರಬಾರದು, ಯಾರಿಗೆ ಬೇಕು ಅವರಿಗೆ ಬರುವಂತಹ ಕೆಲಸ ಮಾಡುತ್ತೇವೆ, ಬರುವವರು ಹೋಗುವವರು, ಸಮಯ, ಡೇಟಾ ಸಹಯಿದ್ದು, ಸಿಸಿ ಕ್ಯಾಮರ್‌ಗಳನ್ನ ಆಳವಡಿಸಲು ವ್ಯವಸ್ಥೆಯನ್ನ ಮಾಡಲಾಗಿದೆ ಅದನ್ನ ಸೂಚಿಸಲಾಗಿದೆ.
ಒಂದು ಚಿಂತನೆ ನಡೆದಿದ್ದು, ದೀನ ತಳಮಟ್ಟದ ಕೂಲಿ ಕಾರ್ಮಿಕರಿಗೆ ವಿಶೇಷ ಮಹತ್ವ , ಒಂದು ದಿನ ಮಹಿಳೆಯರಿಗೆ, ಒಂದು ದಿನ ವಿದ್ಯಾರ್ಥಿಗಳಿಗೆ, ಒಂದು ದಿನ ಕ್ರೀಡಾಪಟುಗಳಿಗೆ, ಒಂದು ದಿನ ಪೌರಕಾರ್ಮಿಕರಿಗೆ ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೆ ಒಂದೊಂದು ದಿನ ವಿಶೇಷತೆ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಅವರಿಗೆ ವಿಕ್ಷೇಣೆಗೆ ಅವಕಾಶ ಮಾಡಿಕೊಂಡುವಂತ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಜ್ಯದ ಎಲ್ಲಾ ವರ್ಗದವರಿಗೆ ವಿಧಾನಸೌಧವರಿಗೆ ಆಗಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದು ತಿಳಿಸಿದರು. ಯಾವುದೇ ಸರ್ಕಾರವಿರಲಿ, ಕೇಂದ್ರ ಸರ್ಕಾರವಿರಲಿ ಎಲ್ಲರಿಗೂ ನ್ಯಾಯ ಕೊಡಿಸುವಂತಹ ಕೆಲಸ ಆಗಬೇಕು, ಅದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದಲ್ಲಿ ದೊಡ್ಡ ಆಶಯ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಷೀರುದ್ದೀನ್, ಮಹ್ಮದ್ ಶಾಲಂ, ರವಿ ಪಾಟೀಲ್, ಶ್ರೀದೇವಿ ನಾಯಕ, ಅಮ್ಜದ್ ಹುಸೇನ್ ಸೇಠ್, ಹಮ್‌ರಾಜ್ ಫಿರೋಜ್ ಸೇರಿದಂತೆ ಅನೇಕರಿದ್ದರು.