ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇದೀಗ, ಕುಮಾರಸ್ವಾಮಿ ಅವರ ಹೆಸರು ಹೇಳದೆ, ಅವರ ವಿರುದ್ಧ ವ್ಯಂಗ್ಯವಾಡಿರುವ ಸಿಚವ ಚಲುವರಾಯಸ್ವಾಮಿ, ‘ದೇಶದಲ್ಲಿ ಮಹಾತ್ಮ ಗಾಂಧಿ ಬಿಟ್ಟರೆ, ಅರವೇ (ಕುಮಾರಸ್ವಾಮಿ) ಸತ್ಯವಂತ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಅವರ ಟೀಕೆಯ ಬಗ್ಗೆ ಪತ್ರಕರ್ತರ ಪತ್ರಕರ್ತರ ಪ್ರಶ್ನೆಗೆ ಉತ್ತಿರಿಸಿದ ಸಚಿವ, “ಅವರು ಭಾರೀ ಸತ್ಯವಂತರು. ನಮ್ಮ ದೇಶದಲ್ಲಿ ಮಹಾತ್ಮಾ ಗಾಂಧಿಯವರ ನಂತರ ಯಾರಾದರೂ ಸತ್ಯವಂತರಿದ್ದರೆ, ಅದು ಅವರು ಮಾತ್ರ” ಎಂದು ಹೇಳಿದ್ದಾರೆ.
“ಅವರು ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ಬಗ್ಗೆ ಏನೇನು ಮಾತಾಡಿದ್ದಾರೋ, ಈಗಲೂ ಅದನ್ನೇ ಮಾತಾಡುತ್ತಿದ್ದಾರೆ. ಅವರಿಗೆ ಯಾರ ಮಾರ್ಗದರ್ಶನವೂ ಬೇಕಿಲ್ಲ, ಅವರೊಬ್ಬರೇ ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.