ಮಾರತಹಳ್ಳಿ ಹೊರವರ್ತುಲ ರಸ್ತೆಯಲ್ಲಿ ಜನದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಎಚ್ಎಎಲ್ ಸಂಚಾರ ಪೊಲೀಸರು ಸರ್ವಿಸ್ ರಸ್ತೆಯಲ್ಲಿ ಭಾರೀ ಸರಕು ಸಾಗಣೆ ವಾಹನಗಳು, ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರವನ್ನು ನಿಷೇಧಿಸಿದ್ದಾರೆ.
ಬೆಂಗಳೂರು ನಗರ ಎಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ವರ್ತೂರು ರಸ್ತೆ ಮತ್ತು ಹೊರವರ್ತುಲ ರಸ್ತೆಯಲ್ಲಿರುವ ಮಾರತಹಳ್ಳಿ ಬ್ರಿಡ್ಜ್ ಮೇಲೆ ಸಾರ್ವಜನಿಕರ ವಾಹನಗಳ ಸುಗಮ ಸಂಚಾರ ಮಾಡುವ ನಿಟ್ಟಿನಲ್ಲಿ ಮಾರತಹಳ್ಳಿ ಹೊರವರ್ತುಲ ರಸ್ತೆಯ ಕೆ.ಎಲ್.ಎಮ್ ಮಾಲ್ ಸರ್ವೀಸ್ ರಸ್ತೆಯಲ್ಲಿ ಎಲ್.ಜಿ.ವಿ, ಹೆಚ್.ಜಿ.ವಿ, ಹೆಚ್.ಟಿ.ವಿ ಮತ್ತು ಬಸ್‌ಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸದರಿ ವಾಹನಗಳು ಕಾರ್ತಿಕ್ ನಗರ-ಇಸ್ರೋ ಜಂಕ್ಷನ್‌ನಲ್ಲಿ ತಿರುವು ಪಡೆದು ಐ.ಟಿ.ಪಿ.ಎಲ್, ಕಾಡುಗೋಡಿ, ವರ್ತೂರು ಕೋಡಿ ಕಡೆಗೆ ಚಲಿಸಬಹುದಾಗಿದೆ. ಹಾಗೇಯೇ, ಬೆಂಗಳೂರು ನಗರದೊಳಗೆ ಚಲಿಸಲು ಇಸ್ರೋ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ದೊಡ್ಡನಕ್ಕುಂದಿ ಗ್ರಾಮದ ರಸ್ತೆಯ ಮೂಲಕ ಹಳೆ ಏರ್‌ಪೋರ್ಟ್ ರಸ್ತೆ ಮೂಲಕ ಚಲಿಸಬಹುದಾಗಿದೆ.
To alleviate congestion on Marathahalli bridge, we’re implementing a traffic advisory: Heavy Goods Vehicles (HGVs), Light Goods Vehicles (LGVs), and BMTC buses are prohibited from making left turns near KLM Mall from the Outer Ring Road 1/2. pic.twitter.com/P4P4k7ccl2
— HAL AIRPORT TRAFFIC BTP (@halairporttrfps) February 8, 2024
ಲಘು ವಾಹನ ಮತ್ತು ಶಾಲಾ ವಾಹನಗಳು ಮಾತ್ರ ಕೆ.ಎಲ್.ಎಮ್ ಮಾಲ್ ಸರ್ವೀಸ್ ರಸ್ತೆ ಮೂಲಕ ಮಾರತಹಳ್ಳಿ ಬ್ರಿಡ್ ಮೂಲಕ ಕುಂದಲಹಳ್ಳಿ ಗೇಟ್ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸಲು ಅನುವು ಮಾಡಿಕೊಟ್ಟಿದೆ.
ಈ ಸುದ್ದಿ ಓದಿದ್ದೀರಾ? ಏಪ್ರಿಲ್ ಬಳಿಕವೇ ಇಂದಿರಾ ಕ್ಯಾಂಟೀನ್‌ನಲ್ಲಿ ‘ಮುದ್ದೆ ಭಾಗ್ಯ’
ಸಾರ್ವಜನಿಕರ ವಾಹನಗಳ ಸುಗಮ ಸಂಚಾರದ ಉದ್ದೇಶದಿಂದ ತಾತ್ಕಾಲಿಕ ಸಂಚಾರ ಮಾರ್ಪಾಟು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದೆ.