ಎನ್‌ಡಿಎ ಶ್ವೇತಪತ್ರ | ಹತ್ತು ವರ್ಷಗಳ ಆರ್ಥಿಕ ಸಂಕಷ್ಟಕ್ಕೆ ‘ಯುಪಿಎ’ ರಕ್ಷಣಾ ಕವಚದ ಹೊದಿಕೆ

Date:

ಎನ್‌ಡಿಎ ಸರ್ಕಾರದ ಆರ್ಥಿಕ ಸಂಕಷ್ಟಗಳು ಸುಭದ್ರ ಭವಿಷ್ಯಕ್ಕೆ ಕಠಿಣ ನಿರ್ಧಾರಗಳ ತಳಹದಿ ಎಂದು ಗುರುವಾರ ಬಿಡುಗಡೆ ಮಾಡಲಾದ ಅರ್ಥವ್ಯವಸ್ಥೆಯ ಶ್ವೇತಪತ್ರ ವ್ಯಾಖ್ಯಾನಿಸಿದೆ

ಸಂಸತ್ತಿನಲ್ಲಿ ಶ್ವೇತಪತ್ರ ಬಿಡುಗಡೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಯುಪಿಎ ಸರ್ಕಾರ ಬಿಟ್ಟು ಹೋಗಿದ್ದ ಸವಾಲುಗಳನ್ನು ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿ ಅರ್ಥವ್ಯವಸ್ಥೆಯನ್ನು ಅತ್ಯುತ್ತಮ ಪ್ರಗತಿಯ ಹಾದಿಯಲ್ಲಿ ತಂದಿದೆ ಎಂದು ಗುರುವಾರ (ಫೆಬ್ರವರಿ 8) ಹೊರಡಿಸಿದ ಅರ್ಥವ್ಯವಸ್ಥೆಯ ಶ್ವೇತಪತ್ರ ಹೇಳಿದೆ.

ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತೆಗೆದುಕೊಂಡ ಆರ್ಥಿಕ ನಿರ್ಧಾರಗಳು ಹಲವಾರು ಅರ್ಥಶಾಸ್ತ್ರಜ್ಞರಿಂದ ಟೀಕೆಗೆ ಒಳಗಾಗಿದ್ದವು. ಆದರೆ ಈ ನಿರ್ಧಾರಗಳನ್ನು ಶ್ವೇತಪತ್ರದಲ್ಲಿ ಆರ್ಥಿಕ ಸುಧಾರಣೆಗಾಗಿ ತೆಗೆದುಕೊಂಡ ಕಠಿಣ ನಿರ್ಧಾರಗಳು ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.

”ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಂಡು ಯಶಸ್ವಿಯಾಗಿ ಈ ಸವಾಲುಗಳನ್ನು ನಿಭಾಯಿಸಿದೆ” ಎಂದು ಅರ್ಥವ್ಯವಸ್ಥೆಯ ಮೇಲಿನ ಶ್ವೇತಪತ್ರ ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹತ್ತು ವರ್ಷಗಳಲ್ಲಿ ನೋಟು ಅಮಾನ್ಯೀಕರಣದಿಂದ ದೇಶದ ಅರ್ಥವ್ಯವಸ್ಥೆ ಎದುರಿಸಿರುವ ಸಂಕಷ್ಟ, ಜಿಎಸ್‌ಟಿ ಅನುಷ್ಠಾನದ ವಿಚಾರದಲ್ಲಿ ಎದುರಿಸಿದ ಟೀಕೆಗಳಿಗೂ ಕಠಿಣ ನಿರ್ಧಾರವೆಂದು ವ್ಯಾಖ್ಯಾನಿಸಿ, ಯುಪಿಎ ಅವಧಿಯ ಭ್ರಷ್ಟಾಚಾರ ಮತ್ತು ಅಸಂಘಟಿತ ವಲಯದ ಅರ್ಥವ್ಯವಸ್ಥೆಯ ಗೋಜಲುಗಳನ್ನೇ ತನ್ನ ರಕ್ಷಣಾಕವಚವಾಗಿಸಿ ಶ್ವೇತಪತ್ರದಲ್ಲಿ ಬರೆಯಲಾಗಿದೆ. 

ಇದನ್ನೂ ಓದಿ: ಶ್ವೇತಪತ್ರಕ್ಕೆ ಕಾಳಪತ್ರ | ಹತ್ತು ವರ್ಷದಲ್ಲಿ 411 ಶಾಸಕರ ಖರೀದಿ ಬಿಜೆಪಿಯ ಸಾಧನೆ: ಖರ್ಗೆ

”ಮೋದಿ ಸರ್ಕಾರ ಅಧಿಕಾರವಹಿಸಿಕೊಂಡಾಗ ಅರ್ಥವ್ಯವಸ್ಥೆ ದುರ್ಬಲವಾಗಿತ್ತು ಮತ್ತು ಕೆಟ್ಟ ಸ್ವರೂಪದಲ್ಲಿತ್ತು. ಆರ್ಥಿಕ ದುರುಪಯೋಗ, ಹಣಕಾಸು ಅಶಿಸ್ತು ಹಾಗೂ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಬಿಕ್ಕಟ್ಟಿನ ಸ್ಥಿತಿಯಲ್ಲಿ ಅಧಿಕಾರವಹಿಸಿಕೊಂಡ ಬಿಜೆಪಿ ಸರ್ಕಾರ ವ್ಯವಸ್ಥೆಯನ್ನು ಹಂತ ಹಂತವಾಗಿ ಸುಧಾರಿಸಿದೆ. ಯುಪಿಎ ಸರ್ಕಾರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಬದಲಾಗಿ ಕಪ್ಪುಹಣದ ಅರ್ಥವ್ಯವಸ್ಥೆಯನ್ನು ಪ್ರೋತ್ಸಾಹಿಸಿತ್ತು. ರಾಜಕೀಯ ಮತ್ತು ನೀತಿಯ ಸ್ಥಿರತೆಯೊಂದಿಗೆ ಮೋದಿ ಸರ್ಕಾರ ಗರಿಷ್ಠ ಆರ್ಥಿಕ ಸುಧಾರಣೆಗಾಗಿ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ” ಎಂದು ಶ್ವೇತಪತ್ರದಲ್ಲಿ ಹತ್ತು ವರ್ಷಗಳ ಬಿಜೆಪಿ ಅವಧಿಯ ಆರ್ಥಿಕ ನಿರ್ಧಾರಗಳು ಮತ್ತು ಅದರ ಫಲಿತಾಂಶವನ್ನು ಮೋದಿ ಸರ್ಕಾರ ಸಮರ್ಥಿಸಿಕೊಂಡಿದೆ.

ಪ್ರಸ್ತುತ ಸನ್ನಿವೇಶದಲ್ಲಿ ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳತ್ತ ಹೆಚ್ಚು ಗಮನ ನೀಡದ ಎನ್‌ಡಿಎ ಸರ್ಕಾರದ ಶ್ವೇತಪತ್ರ, ಭವಿಷ್ಯದಲ್ಲಿ ಸುಧಾರಿತ ಅರ್ಥವ್ಯವಸ್ಥೆಯಾಗಿ ರೂಪುಗೊಳ್ಳಲು ತಳಹದಿಯಾಗಿ ಕಳೆದ ಹತ್ತು ವರ್ಷಗಳನ್ನು ಬಣ್ಣಿಸಿಕೊಂಡಿದೆ.

ಸುಧಾರಿತ ಅರ್ಥವ್ಯವಸ್ಥೆಗೆ ಎನ್‌ಡಿಎ ಸರ್ಕಾರ ಶಂಕುಸ್ಥಾಪನೆ ಮಾಡಿದೆ. ಹತ್ತು ವರ್ಷಗಳ ಸಾಧನೆ ತೃಪ್ತಿ ತಂದಿದೆ. ಆದರೆ ಇನ್ನೂ ಬಹುದೂರ ಸಾಗಬೇಕಿದೆ ಮತ್ತು 2047ರ ಅವಧಿಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಇದು ನಮ್ಮ ಕರ್ತವ್ಯಕಾಲ ಎಂದು ಶ್ವೇತಪತ್ರದಲ್ಲಿ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಗೌರವದೊಂದಿಗೆ ನೆರವೇರಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅಂತಿಮ ಸಂಸ್ಕಾರ: ಸಿಎಂ ಭಾಗಿ

ನಿನ್ನೆ(ಫೆ.25) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ...

ಜೈಲು ಸೇರಿದ ಬಜರಂಗದಳ ಕಾರ್ಯಕರ್ತರನ್ನು ಭೇಟಿಯಾದ ಶೋಭಾ ಕರಂದ್ಲಾಜೆ

ಲವ್ ಜಿಹಾದ್​ ಪ್ರಕರಣದಲ್ಲಿ ​ಹಲ್ಲೆ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಸೇರಿರುವ...

ಕರಂದ್ಲಾಜೆ ವಿರುದ್ದ ಷಡ್ಯಂತ್ರ ನಡೀತಿದೆ ಎಂದ ಬಿಎಸ್‌ವೈ; ಬಾಸ್ ಈಸ್ ಆಲ್ವೇಸ್ ರೈಟ್ ಎಂದ ಸಿ ಟಿ ರವಿ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಕೇಳಿಲ್ಲ. ಈ ಬಗ್ಗೆ ಈಗಾಗಲೇ...

ಶೇಖ್ ಶಹಜಹಾನ್ ಬಂಧಿಸಿ ಎಂದ ಹೈಕೋರ್ಟ್; ವಾರದಲ್ಲಿ ಬಂಧಿಸುತ್ತೇವೆ ಎಂದ ಟಿಎಂಸಿ

ಸಂದೇಶ್ ಖಾಲಿಯ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿ ತೃಣಮೂಲ...