ಗದಗ ನಗರಸಭೆಯಲ್ಲಿ ಬಿಜೆಪಿ ಸದಸ್ಯರು ಪರಸ್ಪರ ಕಿತ್ತಾಡಿರುವ ಘಟನೆ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರಸಭೆ ಕಚೇರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಅಬ್ಬಿಗೇರಿ ಅವರ ಕಚೇರಿಯಲ್ಲಿ ಜಗಳ ನಡೆದಿದೆ. ಅಬ್ಬಿಗೇರಿ ಮತ್ತು ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಅವರ ಪತಿ ಶಶಿಧರ್ ದಿಂಡೂರ ನಡುವೆ ಗಲಾಟೆ ನಡೆಸಿದ್ದು, ಇಬ್ಬರೂ ಪರಸ್ಪರ ಏಕವಚನದಲ್ಲಿ ನಿಂದಿಸಿದ್ದಾರೆ.
ಕಚೇರಿಯಲ್ಲಿ ಸಾರ್ವಜನಿಕರ ಎದುರೇ ಜಗಳ ಮಾಡಿ, ಬೇಜವಾಬ್ದಾರಿತನ ಮರೆದಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.