ರಾಜ್ಯದಲ್ಲಿ ಬರಘೋಷಣೆ ಮಾಡಿದ್ದರು ಬೆಳೆ ನಷ್ಟ ಪರಿಹಾರ ನೀಡದೇ ಇರುವದನ್ನು ವಿರೋಧಿಸಿ ಫೆ. 12ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನರಸಿಂಹನಾಯಕ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಸಂಕಷ್ಟಕ್ಕೆ ನೆರವಾಗುತ್ತಿಲ್ಲ. ಕೇಂದ್ರ ಅನುದಾನವೇ ನೀಡಿಲ್ಲ. ರಾಜ್ಯ ಸರ್ಕಾರ 2ಸಾವಿರ ರೂ. ಹಣ ನೀಡುವದಾಗಿ ಹೇಳುತ್ತಿದೆ. ಎಲ್ಲ ರೈತರಿಗೂ ತಲುಪುತ್ತಿಲ್ಲ. ರೈತ ಆತ್ಮಹತ್ಯೆಗಳು ಮುಂದುವರಿದಿವೆ. ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಒತ್ತಾಯದಿಂದ ಸಾಲ ವಸೂಲಿ ಮಾಡುತ್ತಿವೆ.
ಕೂಡಲೇ ರಾಷ್ಟ್ರೀಯ ಫಸಲ್ ಭೀಮಾ ಯೋಜನೆ ಬೆಳೆ ನಷ್ಟ ಪರಿಹಾರ ಹಣ ಬಿಡುಗಡೆಗೊಳಿಸಬೇಕು. ರೈತರ ಸಾಲ ಮನ್ನಾ ಮಾಡುವದು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆನಡೆಯಲಿದೆ. ಜಿಲ್ಲೆಗಳಿಂದ ನೂರಾರು ರೈತರು ಬೆಂಗಳೂರಿಗೆ ತೆರಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಡಿ. ಸತ್ಯಾರೆಡ್ಡಿ, ಧರ್ಮರೆಡ್ಡಿ, ಸಂಗಮೇಶ ಉಪಸ್ಥಿತರಿದ್ದರು.