ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ತುರ್ತಾಗಿ ನೀರು ಹರಿಸಲು ಕ್ರಮ ಜರುಗಿಸಲು ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಮುದೋಳ ತಹಸೀಲ್ದಾರ ಕಛೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿ ತಹಸೀಲ್ದಾರರಗೆ ಮನವಿ ಸಲ್ಲಿಸಿದರು.
ಘಟಪ್ರಭಾ ನದಿಯು ಮುಧೋಳ ತಾಲೂಕಿನ ವ್ಯಾಪ್ತಿಯಲ್ಲಿ 20ರಿಂದ 25ದಿನಗಳಲ್ಲಿ ನೀರು ಖಾಲಿಯಾಗಿರುತ್ತದೆ. ಇದರಿಂದ ಮುಧೋಳ ಪಟ್ಟಣ ಒಳಗೊಂಡಂತೆ 30ಹಳ್ಳಿಗಳ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕೃಷಿ ಚಟುವಟಿಕೆಗಳಿಗೂ ನೀರು ಇಲ್ಲದ ಕಾರಣ ಇತರೆ ಬೆಳೆಗಳು ಸಂಪೂರ್ಣ ಒಣಗುತ್ತಿವೆ.
ಇದಕ್ಕಾಗಿ ಡಿಸೆಂಬರ್ 11ರ ಸಲಹಾ ಮಂಡಳಿ ಸಭೆಯ ನಿರ್ಣಯದಂತೆ, ಪ್ರತೀ ತಿಂಗಳು ಎರಡು ಟಿಎಮ್‌ಸಿ ನೀರು ಬೀಡುಗಡೆ ಆಗಬೇಕಾಗಿತ್ತು. ಆದರೆ, ಜನವರಿ ತಿಂಗಳ ನೀರು ಬಿಟ್ಟಿರುವುದಿಲ್ಲ ಆದ್ದರಿಂದ 29, ಜನವರಿ 2024ರಂದು ತಾಲೂಕು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕೊಟ್ಟಿದ್ದೇವೆ. ಆದರೆ, ಇಲ್ಲಿಯವರೆಗೂ ಘಟಪ್ರಭಾ ನದಿಗೆ ನೀರು ಬಂದಿಲ್ಲ ಎಂದು ರೈತರು ಹೇಳಿದ್ದಾರೆ.
ಕಾರಣ ಪ್ರಸಕ್ತ ವರ್ಷವೂ ಹಿಡಕಲ್ ಜಲಾಶಯದಲ್ಲಿ ಈವರೆಗೆ ದಿನಾಂಕ 08/02/2024ರಂದು 31 ಟಿಎಂಸಿ ನೀರು ಸಂಗ್ರಹವಿದೆ ನಮ್ಮ ಜಿಲ್ಲೆಗೆ ಪ್ರತೀ ತಿಂಗಳು 2 ಟಿಎಂಸಿ ನೀರು ಬರಬೇಕಾದಂತಹ ಘಟಪ್ರಭಾ ನದಿಗೆ ನೀರು ಬಂದಿಲ್ಲ. ಕೂಡಲೇ ಘಟಪ್ರಭಾ ನದಿಗೆ ಎರಡು ಟಿಎಂಸಿ ನೀರನ್ನು ಹರಿಸಬೇಕೆಂದು ರೈತರು ಆಗ್ರಹಿಸಿದರು.
ಇಲ್ಲದೇ ಇದ್ದರೆ ತಹಸೀಲ್ದಾರ್ ಕಚೇರಿ, ತಾಲೂಕಾ ಆಡಳಿತ ಭವನ ಮುಧೋಳದಲ್ಲಿ ಈಗಿನಿಂದಲೇ ಆಮರಣ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದು ಎಚ್ಚರಿಸಿ, ದಯವಿಟ್ಟು ತುರ್ತುಕ್ರಮ ಕೈಗೊಂಡು ನೀರು ಬಿಡುಗಡೆಗೆ ಕ್ರಮ ವಹಿಸಬೇಕೆಂದು ರೈತರು ಮನವಿಯಲ್ಲಿ ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ರೈತ ಮುಖಂಡರು ವೆಂಕಪ್ಪ ನಾಯಕ್, ಪಿ.ಎಲ್. ಹೂಗಾರ, ಎಮ್.ಎಸ್. ಹಳೆಮನಿ, ಎಮ್.ಬಿ. ಮುರಗೋಳ ಹಾಗೂ ರೈತರು ಉಪಸ್ಥಿತರಿದ್ದರು.