ಐಪಿಎಲ್ 16ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲಿನ ಪಯಣ ಮುಂದುವರಿದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ, ಡೆಲ್ಲಿ ತಂಡವನ್ನು 23 ರನ್‌ಗಳ ಅಂತರದಲ್ಲಿ ಮಣಿಸಿದೆ.
ಆ ಮೂಲಕ ಕಳೆದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯದ ಹಾದಿಗೆ ಮರಳಿದೆ. ಆದರೆ ಮತ್ತೊಂದೆಡೆ ಡೇವಿಡ್ ವಾರ್ನರ್ ಸಾರಥ್ಯದ ಡೆಲ್ಲಿ ಟೂರ್ನಿಯಲ್ಲಿ ಆಡಿದ 5ನೇ ಪಂದ್ಯದಲ್ಲೂ ಮುಗ್ಗರಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ, ವಿರಟ್ ಕೊಹ್ಲಿ ಗಳಿಸಿದ ಅರ್ಧ ಶತಕದ ನೆರವಿನಿಂದ 6 ವಿಕೆಟ್ ನಷ್ಟದಲ್ಲಿ 174 ರನ್ ಗಳಿಸಿತ್ತು.
ಚೇಸಿಂಗ್ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭದಲ್ಲಿ 2 ರನ್ ಗಳಿಸುವಷ್ಟರಲ್ಲೇ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್ ಸೇರಿದ್ದರು.
5ನೇ ಕ್ರಮಾಂಕದಲ್ಲಿ ಬಂದ ಮನೀಷ್ ಪಾಂಡೆ ಅರ್ಧಶತಕ ಗಳಿಸುವ ಮೂಲಕ ತಂಡವನ್ನು ತೀವ್ರ ಕುಸಿತದಿಂದ ಪಾರು ಮಾಡಿದರು.
ಡೇವಿಡ್ ವಾರ್ನರ್ (19 ರನ್), ಅಕ್ಷರ್ ಪಟೇಲ್ 21 ಮತ್ತು ಅಮಾನ್ ಹಕೀಮ್ ಖಾನ್ 18 ರನ್ ಗಳಿಸಿದರು.