ರಾಯಚೂರು | ಕೇಂದ್ರ ಸರ್ಕಾರ 29 ರೂ.ಗೆ ಕೆಜಿ ʼಭಾರತ್‌ ಅಕ್ಕಿʼ ಜನರಿಗೆ ಅನುಕೂಲವಾಗಲಿದೆ: ಸಂಸದ ರಾಜಾ ಅಮರೇಶ್ವರ ನಾಯಕ

Date:

Advertisements

ಗುಣಮಟ್ಟದ ಆಹಾರ ಸಾಮಾನ್ಯ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗುಣಮಟ್ಟದ ಅಕ್ಕಿಯನ್ನು 29 ರೂ.ಗೆ ಕೆಜಿ ʼಭಾರತ್‌ ಅಕ್ಕಿʼಯನ್ನು ನೀಡುತ್ತಿದ್ದು, ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಜನ ಸಾಮಾನ್ಯರು ಪಡೆದುಕೊಳ್ಳಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ರಾಯಚೂರಿನ ಎಪಿಎಂಸಿ ಅವರಣದಲ್ಲಿ ಕೇಂದ್ರ ಸರ್ಕಾರ ಭಾರತ್‌ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಬಲೂನ್ ಹಾರಿಸಿ ಉದ್ಘಾಟಿಸಿದ ಅವರು ನಂತರ ಮಾತನಾಡಿದರು. “ಕೇಂದ್ರ ಸರ್ಕಾರ ಈಗಾಗಲೇ ಗರೀಬ್ ಕಲ್ಯಾಣ ಯೋಜನೆಯಡಿ ದೇಶದಾದ್ಯಂತವಾಗಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಐದು ಕೆಜಿ ಅಕ್ಕಿ ವಿತರಣೆ ಮಾಡುತ್ತಿದೆ. ಬಡ ಜನರಿಗೆ ಗುಣಮಟ್ಟದ ಅಕ್ಕಿಯನ್ನು ನೀಡುವ ಮೂಲಕ ದೇಶದಲ್ಲಿ ಯಾರೂ ಹಸಿವಿನಿಂದ ಇರದೇ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ” ಎಂದರು.

ಇದೀಗ ಭಾರತ ಅಕ್ಕಿ ಯೋಜನೆಯಡಿ ಜಾರಿಗೊಳಿಸಿದ್ದು, ಯಾವ ಪ್ರದೇಶದಲ್ಲಿ ಆಹಾರ ಧಾನ್ಯ ಹೆಚ್ಚಾಗಿ ಬೆಳೆಯುವುದು ಮತ್ತು ಬಳಕೆ ಮಾಡುವುದು ಮಾಡುತ್ತಾರೆ ಆ ಭಾಗದಲ್ಲಿ ಅತ್ಯಂತ ಕಡಿಮೆ ಧರದಲ್ಲಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾದರಿಯಾಗಿದ್ದಾರೆ ಎಂದರು.

Advertisements

ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲೆಗೆ ತರುವ ಮೂಲಕ ಅಭಿವೃದ್ಧಿಗೆ ಆಧ್ಯತೆ ನೀಡಿದೆ, ಚತುಷ್ಪಥ ರಸ್ತೆ, 6 ವೇ ಲೈನ್ ರಸ್ತೆ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ, ರಾಯಚೂರು ಸುತ್ತಲೂ ರಸ್ತೆ ನಿರ್ಮಾಣದಿಂದ ಜಿಲ್ಲೆ ಅಭಿವೃದ್ಧಿಯಾಗಲಿದೆ, ಏಮ್ಸ್ ರಾಯಚೂರಿನಲ್ಲಿ ಸ್ಥಾಪನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದರ ಜೊತೆಗೆ ನಿಯೋಗ ಭೇಟಿಯಾಗಿದೆ ಎಂದರು.

ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಶಿಫಾರಸು ಪತ್ರ ಹೋಗಿದ್ದು, ಅದನ್ನು ಪರಿಗಣ ಸಿಲ್ಲ, ಇದೀಗ ಕಾಂಗ್ರೆಸ್ ಸರ್ಕಾರವಿದ್ದು, ಏಮ್ಸ್ ರಾಯಚೂರಿನಲ್ಲಿ ಸ್ಥಾಪನೆಗೆ ಪತ್ರ ಬರೆದಿದೆ, ನಾವು ಕೇಂದ್ರಕ್ಕೆ ಪತ್ರ ಬರೆದು ಮಾತನಾಡಿದ್ದೇವೆ, ಎಂದು ತಿಳಿಸಿದರು.

ಕೇಂದ್ರದಿಂದ ತಂಡ ಕಳುಹಿಸಲು ಒಪ್ಪಿಗೆ ಸೂಚಿಸಿದ್ದು ತಂಡವು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಭೂಮಿ ವೀಕ್ಷಣೆ ನೀರಿನ ಲಭ್ಯತೆ ಹಾಗೂ ವಿದ್ಯುತ್ ಸರಬರಾಜು ಬಗ್ಗೆ ಕೇಂದ್ರಕ್ಕೆ ವರದಿ ನೀಡಲಿದೆ ಎಂದು ತಿಳಿಸಿದರು.

ಶಾಸಕ ಶಿವರಾಜ ಪಾಟೀಲ್ ಮಾತನಾಡಿ, ಜಗತ್ತಿನ ಯಾವುದೆ ದೇಶದಲ್ಲಿ ಈ ವ್ಯವಸ್ಥೆ ಇಲ್ಲ, ಇಂತಹ ವ್ಯವಸ್ಥೆ ದೇಶದಲ್ಲಿ ಮಾತ್ರ ಕಾಣಬಹುದು, ದೇಶವು ಅಭಿವೃದ್ಧಿಯತ್ತ ಸಾಗುತಿದ್ದು, ಐದನೇ ಸ್ಥಾನದಲ್ಲಿದೆ. ದೇಶದಲ್ಲಿನ ಅತ್ಯಂತ ಕಡು ಬಡವರಿಗೆ ಗುಣಮಟ್ಟದ ಅಕ್ಕಿಯನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮಾದರಿಯಾಗಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ಕೆಜಿ ಅಕ್ಕಿ ಕೊಡಲು ಆಗದೇ ಖಾತೆಗೆ ಹಣ ಜಮಾ ಮಾಡುತ್ತಿದ್ದಾರೆ, ಅದೂ ಸಹ ಕೆಲವರಿಗೆ ಬಂದಿದೆ ಇನ್ನು ಕೆಲವರಿಗೆ ಬಂದಿಲ್ಲ, ಗೃಹಿಣ ಯರಿಗೆ 2 ಸಾವಿರ ಖಾತೆಗೆ ಜಮಾ ಮಾಡುತ್ತೇವೆ ಎಂದು ಹೇಳಿದ್ದು, ಅದೂ ಸಹ ಎಲ್ಲಿಗೂ ತಲುಪುತ್ತಿಲ್ಲ, ಉಚಿತ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದು ಯಾರಿಗೆ ಬರುತ್ತಿದೆ ಎಂದು ಕೇಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹರವಿ ನಾಗನಗೌಡ, ವರ್ತಕ ಲಕ್ಷ್ಮಿ ನಾರಾಯಣ, ಸುಂದರ್, ರಾಮಕಿಶೋರ್, ಶ್ರೀನಿವಾಸರೆಡ್ಡಿ, ನಾಗರಾಜ, ರವಿಂದ್ರ ಜಲ್ದಾರ್, ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ಮುಕ್ತಿಯಾರ್ ಸೇರಿದಂತೆ ಅನೇಕರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಸಂಸದ ಶ್ರೀ ರಾಜಾ ಅಮರೇಶ್ವರ ನಾಯಕ ಅವರೇ ,
    ನಮಸ್ಕಾರಗಳು ತಮಗೆ.
    ತಾವು ಇಂದು ರಾಯಚೂರಿನ ಎಪಿಎಂಸಿ ಆವರಣದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಶ್ನೆ ಎತ್ತಿದಿರಿ. ಯೋಜನೆಯ ಫಲ ಎಷ್ಟು ಜನರಿಗೆ ಸಿಕ್ಕಿದೆ ಎಂದು ಅಲ್ಲೇ ಸೇರಿದ ಜನರ ಮುಂದೆ ಪ್ರಶ್ನಿಸಿದಿರಿ. ಸಂತೋಷದ ವಿಷಯ. ಜನರ ಬಗ್ಗೆ ನಿಮಗಿರುವ ಕಾಳಜಿ ನಿಜಕ್ಕೂ ಶ್ಲಾಘನೀಯ.
    ಮಾನ್ಯ ಸಂಸದರೇ , ತಮ್ಮಲ್ಲೊಂದು ಸಣ್ಣ ಭಿನ್ನಹ. ಇಸವಿ 2014 ರ ಚುನಾವಣೆಯ ಸಂದರ್ಭದಲ್ಲಿ ಇಂದಿನ ಪ್ರಧಾನಿ , ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಾನು ಅಧಿಕಾರಕ್ಕೆ ಬಂದರೆ ಬಂದ ಕೂಡಲೇ ವಿದೇಶದಲ್ಲಿರುವ ಎಲ್ಲ ಕಪ್ಪು ಹಣವನ್ನು ಭಾರತಕ್ಕೆ ತಂದೇ ತರುತ್ತೇನೆ ಎಂದು ಘಂಟಾಘೋಷವಾಗಿ ಘೋಷಿಸಿದ್ದರು. ಅಧಿಕಾರಕ್ಕೆ ಬಂದು ಹತ್ತು ವರ್ಷಗಳು ಉರುಳಿದುವು. ಇನ್ನೂ ಮೋದಿ ಅವರಿಗೆ ವಿದೇಶದಲ್ಲಿರುವ ಕಪ್ಪು ಹಣವನ್ನು ತರಲು ಸಾಧ್ಯವಾಗಲಿಲ್ಲ. ಆಡಿದ ಮಾತು , ನೀಡಿದ ಆಶ್ವಾಸನೆ ಈಡೇರಿಸಲು ಅಸಮರ್ಥರಾದ ಮೋದಿಯನ್ನು ಒಮ್ಮೆಯಾದರೂ ನೀವು ಪ್ರಶ್ನಿಸಿದಿರಾ ; ಮುಂದಾದರೂ ಪ್ರಶ್ನಿಸುವ ಧೈರ್ಯ ಮಾಡುವಿರಾ ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X