ಬೀಗ ಹಾಕಿದ ಮನೆಗಳ ಮೇಲೆ ಗಸ್ತು ಸಿಬ್ಬಂದಿ ನಿಗಾ ಇಡಲು ಬೀದರ ಜಿಲ್ಲಾ ಪೊಲೀಸ್ ವತಿಯಿಂದ ವಿನೂತನವಾದ ‘ನಿಮ್ಮ ಮನೆ ನಮ್ಮ ನಿಗರಾಣಿ’ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಮನೆ ಕಳ್ಳತನ ಪ್ರಕರಣಗಳು ಈ ಯೋಜನೆಯಿಂದ ಜಿಲ್ಲೆಯಲ್ಲಿ ಕಡಿಮೆಯಾಗಲಿವೆ. ರಾಜ್ಯದಲ್ಲಿ ವಿನೂತನ ಯೋಜನೆ ಇದಾಗಿದ್ದು ಇದನ್ನು ಮೊದಲಿಗೆ ತಾಲೂಕು ಕೇಂದ್ರಗಳಲ್ಲಿ ಜಾರಿಗೆ ತರಲಾಗುತ್ತಿದೆ. ಸಾರ್ವಜನಿಕರಿಗಾಗಿ ವ್ಯಾಟ್ಸಪ್ ನಂಬರ್ ಶೇರ್ ಮಾಡಲಾಗುವುದು” ಎಂದರು.
“ಮನೆ ಬೀಗ ಹಾಕಿ ಹೊರಗಡೆ ಹೋದಲ್ಲಿ 8277975068 ನಂಬರ್‌ಗೆ ವ್ಯಾಟ್ಸಪ್ ಗೆ ತಮ್ಮ ಹೆಸರು, ಮೊಬೈಲ್ ನಂಬರ್ ಠಾಣೆಯ ವ್ಯಾಪ್ತಿ, ಯಾವ ದಿನಾಂಕದಿಂದ ಎಲ್ಲಿಯವರೆಗೆ ತಾವು ಮನೆಯಲ್ಲಿ ಇರುವುದಿಲ್ಲ ಎಂಬ ಮಾಹಿತಿ ನೀಡಿದರೆ ನಿಮ್ಮ ಮನೆಗಳ ಮೇಲೆ ನಮ್ಮ ಪೊಲೀಸ್ ಸಿಬ್ಬಂದಿಗಳು ನಿಗರಾಣಿ ಮಾಡುವರು ಎಂದು ಹೇಳಿದರು. ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಂದ ನೆರೆಮನೆ ನಿಗರಾಣಿ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್‌ಗೆ ರೆಡ್ ಕಾರ್ಪೆಟ್, ರೈತರಿಗೆ ಮುಳ್ಳಿನ ಬೇಲಿ- ಇದು ಮೋದಿ ಶೈಲಿ
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಹೇಶ ಮೇಘಣ್ಣವರ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಜೆ.ಎಸ್.ನ್ಯಾಮೇಗೌಡ, ಸಿಪಿಐ ಹನುಮರೆಡ್ಡಿ, ಪಿಎಸ್‌ಐ ಸೇರಿದಂತೆ ಇತರರು
ಉಪಸ್ಥಿತರಿದ್ದರು.