ಅಂದು ಬ್ರಾಹ್ಮಣ ಹೆಣ್ಣುಮಕ್ಕಳಿಗೆಂದೇ ಮಂಗಳೂರಿನಲ್ಲಿ ಶಾಲೆ ತೆರೆದಿದ್ದ ಮಿಷನರಿಗಳು

Date:

Advertisements
ಹಣ, ಅಧಿಕಾರದ ಅಮಲು ತಲೆಗೆ ಅಡರಿದಾಗ ತಮ್ಮದೇ ಅಜ್ಜಿ, ಮುತ್ತಜ್ಜಿಯಂದಿರು ಹೇಗೆ ಓದಿದರು. ಹೇಗೆ ಶಾಲೆಯ ಮೆಟ್ಟೀಲೇರಿದರು ಎಂಬ ಇತಿಹಾಸವನ್ನು ಕೆಲವರು ಮರೆತಿರಬಹುದು. ಆದರೆ ಚರಿತ್ರೆಯ ಸಾಕ್ಷಿ ನುಡಿಯುವ ಪುಟಗಳು ಮತ್ತು ಪಟಗಳು ನಮ್ಮ‌ ನಿಮ್ಮ ಮುಂದಿವೆ. ಯಾರೂ ನಿರಾಕರಿಸಲೂ ಸಾಧ್ಯವಿಲ್ಲದ ಸಾಕ್ಷ್ಯಗಳು ಇವು.

 

ಇವತ್ತಿಗೆ 188 ವರ್ಷಗಳ ಹಿಂದೆ, ಅಂದರೆ 1836 ರಲ್ಲಿ ಮಂಗಳೂರಿನಲ್ಲಿ ಮೊತ್ತ ಮೊದಲ ಶಾಲೆ ಆರಂಭವಾಗುತ್ತದೆ. ಆ ಶಾಲೆಯನ್ನು ಜರ್ಮನ್‌ನಿಂದ ಬಂದ ಬಾಸೆಲ್ ಮಿಷನರಿ ಪಾದ್ರಿಗಳು ಮಂಗಳೂರಿನ ನಿರೇಶ್ವಾಲ್ಯದಲ್ಲಿ (ಮಂಗಳೂರು ದಕ್ಕೆ ಬಂದರು ಪ್ರದೇಶ) ಆರಂಭಿಸುತ್ತಾರೆ. ಬಾಸೆಲ್ ಮಿಶನರಿ ಪಾದ್ರಿ ಸ್ಯಾಮುವೆಲ್ ಹೆಬಿಕ್ ಅವರು ತುಳುನಾಡಿನ ಈ ಪ್ರಥಮ ಶಾಲೆಯ ಸ್ಥಾಪಕರು.

ಇದು ಸರ್ವರಿಗೂ ಸಮಾನ ಶಿಕ್ಷಣ ನೀಡುವ ಶಾಲೆಯಾಗಿತ್ತು. ಆ ದಿನಗಳಲ್ಲಿ ಶಾಲೆಗೆ ಗಂಡು ಮಕ್ಕಳು ಮಾತ್ರ ಬರುತ್ತಿದ್ದರು. ಜನರ ಬಳಿಗೆ ತೆರಳಿದ ಪಾದ್ರಿಗಳು ಹೆಣ್ಣು ಮಕ್ಕಳನ್ನು ಕೂಡ ಓದಿಸುವಂತೆ ಮನವೊಲಿಸುತ್ತಾರೆ. ಮೊದ ಮೊದಲು ಯಾರೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿರುವುದಿಲ್ಲ. ಆ ಕಾಲಕ್ಕೆ ಪಾದ್ರಿಗಳು ಮನೆ ಮನೆಗೆ ಹೋಗಿ ಹಿರಿಯರ ಮನವೊಲಿಸಿ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆ ತರುತ್ತಾರೆ. ಅಷ್ಟೊತ್ತಿಗೆ ಶಾಲೆ ಆರಂಭವಾಗಿ 6 ವರ್ಷವಾಗಿತ್ತು. ಹುಡುಗರು ಮಾತ್ರ ಓದುತ್ತಿದ್ದ ಶಾಲೆಯಲ್ಲಿ 1842ರಲ್ಲಿ ಹೆಣ್ಣು ಮಕ್ಕಳಿಗೆ ಕೂಡ ಪ್ರವೇಶ ಆರಂಭಗೊಂಡಿತು. ಈ ರೀತಿಯಲ್ಲಿ ಸಹ ಶಿಕ್ಷಣ (ಕೋ ಎಜ್ಯುಕೇಶನ್) ಆರಂಭಗೊಂಡದ್ದು ಇವತ್ತಿಗೆ 182 ವರ್ಷಗಳ ಹಿಂದೆ. ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಮುಂದೆ ಈ ಶಾಲೆಗೆ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಯಿತು. ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು(ಜಿ.ಎಸ್.ಬಿ) ಬಂಟರು, ಬಿಲ್ಲವರು, ಮೊಗವೀರರು, ದಲಿತರು ಒಂದೇ ತರಗತಿಯಲ್ಲಿ ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಓದುತ್ತಿದ್ದರು.

ಆದರೆ… ಶೂದ್ರರು, ದಲಿತರು ಒಟ್ಟಾಗಿ ಕುಳಿತು ಓದುವಲ್ಲಿಗೆ ನಮ್ಮ ಹೆಣ್ಣು ಮಕ್ಕಳನ್ನು ಕಳುಹಿಸಿಕೊಡುವುದಿಲ್ಲ ಎಂಬ ತಕರಾರೊಂದನ್ನು ಆವತ್ತಿನ ಸಂದರ್ಭದಲ್ಲಿ ಬ್ರಾಹ್ಮಣರು ಶಾಲೆಯ ಪಾದ್ರಿಗಳ ಮುಂದಿಟ್ಟರು. (ಅಂದರೆ ಅವರೇನೂ ಶಾಲೆಯ ಗೇಟಿನ ಹೊರಗಡೆ ನಿಂತು ಬೀದಿ ರಂಪ ಮಾಡಿದ್ದಲ್ಲ).

Advertisements

ಈ ಬೇಡಿಕೆಗೆ ಪಾದ್ರಿಯವರು ಮರು ಮಾತನಾಡಲಿಲ್ಲ.‌ ನಿಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೆ ಶಾಲೆ ತೆರೆಯುತ್ತೇವೆ ಎಂದು ಭರವಸೆ ನೀಡಿದರು. ಬ್ರಾಹ್ಮಣರು ಒಪ್ಪಿಕೊಂಡರು. ಇದರ ಫಲವಾಗಿ 1855ರಲ್ಲಿ, ಅಂದರೆ 169 ವರ್ಷಗಳ ಹಿಂದೆ ಕರಾವಳಿಯ ಮೊದಲ ಬ್ರಾಹ್ಮಣ ಹೆಣ್ಣು ಮಕ್ಕಳ ಶಾಲೆ ಆರಂಭಗೊಂಡಿತು. ಹೊಸದಾಗಿ ಆರಂಭಗೊಂಡ ಯು.ಬಿ.ಎಂ.ಸಿ ಬ್ರಾಹ್ಮಣ ಹೆಣ್ಮಕ್ಕಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಮತಿ ಲೆನ್ಹರ್ ಮತ್ತು ಶ್ರೀಮತಿ ಗ್ರೆನರ್ ಮೊದಲ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಾರೆ.‌ ಇವರು ಪಾದ್ರಿ ಹೆಬಿಕ್ ಅವರ ಜೊತೆಯಲ್ಲಿ ಬಂದಿದ್ದ ಮಿಷನರಿಗಳ ಧರ್ಮಪತ್ನಿಯರು. ಮುಂದೆ ಯು.ಬಿ.ಎಂ.ಸಿ ಬ್ರಾಹ್ಮೀಣ್ ಹೆಣ್ಮಕ್ಕಳ ಶಾಲೆಯಲ್ಲಿ ಶ್ರೀಮತಿಯರಾದ ಹೋಕ್, ಬ್ಹೂರರ್, ಡೀಸ್, ಫ್ಲೈಡರರ್ ಮೊದಲಾದ ಶಿಕ್ಷಕಿಯರು ಸೇವೆ ಸಲ್ಲಿಸುತ್ತಾರೆ.

ಸಿಸ್ಟರ್‌ ಜೊತೆ ವಿದ್ಯಾರ್ಥಿನಿಯರು e1707979737610
ಚಿತ್ರ ವಿವರಣೆ : ಬ್ರಾಹ್ಮಣರ ಹೆಣ್ಣುಮಕ್ಕಳ ಶಾಲೆಯಲ್ಲಿ ಸಿಸ್ಟರ್ ಜೊತೆಗೆ ಆ ಕಾಲದ ಹೆಣ್ಣುಮಕ್ಕಳ

ಶಾಲೆ ಚೆನ್ನಾಗಿ ಮುಂದೆ ಸಾಗುತ್ತಿತ್ತು. ಈ ಬ್ರಾಹ್ಮಣರ ಹೆಣ್ಣು ಮಕ್ಕಳ ಶಾಲೆಗೆ ಅಡ್ಮಿಶನ್ ಜಾಸ್ತಿಯಾಗಲಾರಂಭಿಸಿತು. ನಂತರದ ದಿನದಲ್ಲಿ ಈ ಶಾಲೆಯನ್ನು ಹಂಪನಕಟ್ಟೆಯ ಈಗಿನ ಗಣಪತಿ ಶಾಲೆಯ ಎದುರಿನ ರಸ್ತೆಗೆ ಸ್ಥಳಾಂತರಿಸಲಾಗುತ್ತದೆ. ಅಷ್ಟಾಗುವಾಗ ಮತ್ತೆ ಪಾದ್ರಿಗಳಲ್ಲಿ ಬ್ರಾಹ್ಮಣರು ಹೊಸ ಬೇಡಿಕೆ ಇರಿಸಿದರು. ನಮ್ಮ ಬ್ರಾಹ್ಮಣರ ಹೆಣ್ಣು ಮಕ್ಕಳಿಗಾಗಿ ಮೂಡಬಿದಿರೆ ಮತ್ತು ಉಡುಪಿಯಲ್ಲಿ ಶಾಲೆಯನ್ನು ಆರಂಭಿಸಬಹುದೇ ಎಂದು ಕೇಳಿಕೊಂಡರು. (ಆವಾಗಲೂ ಅವರು ಶಾಲೆಯ ಗೇಟಿನ ಎದುರು ನಿಂತು ಹೊಸ ಶಾಲೆಗಾಗಿ ತಕರಾರು ಮಾಡಿರಲಿಲ್ಲ…) ಮೂಡುಬಿದಿರೆ, ಉಡುಪಿಯಲ್ಲಿ ಅದಾಗಲೇ ಬಾಸೆಲ್ ಮಿಶನ್ ನವರು ಜನರಲ್ ಶಾಲೆಗಳನ್ನು ಆರಂಭಿಸಿ, ಶಾಲೆ ಚೆನ್ನಾಗಿ ನಡೆಯುತ್ತಿದ್ದರೂ ಕೂಡ ಬ್ರಾಹ್ಮಣರ ಹೆಣ್ಣು ಮಕ್ಕಳು ಓದಲಿ ಎಂಬ ಉದಾತ್ತ ಕಾರಣಕ್ಕಾಗಿ ಮೂಡಬಿದ್ರೆ ಮತ್ತು ಉಡುಪಿಯಲ್ಲಿ ಹೊಸದಾಗಿ ಬ್ರಾಹ್ಮಣರ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಆರಂಭಿಸುತ್ತಾರೆ. ಯು.ಬಿ.ಎಂ.ಸಿ.ಬ್ರಾಹ್ಮಿಣ್ ಹೆಣ್ಮಕ್ಕಳ ಹಿರಿಯ ಪ್ರಾಥಮಿಕ‌ ಶಾಲೆ ಎಂಬ ಹೆಸರಲ್ಲಿ ಈ ಶಾಲೆ ನೂರಾರು ಬ್ರಾಹ್ಮಣ ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸಿತ್ತು.‌ ಈ ಹಳೆಯ ಶಾಲೆಗಳೆಲ್ಲ ಇದೀಗ ಇಪ್ಪತ್ತೈದು ಮೂವತ್ತು ವರ್ಷಗಳ ಈಚೆಗಷ್ಟೇ ಮುಚ್ಚಲ್ಪಟ್ಟಿತು.

ಹೌದು… ಹಣ, ಅಧಿಕಾರದ ಅಮಲು ತಲೆಗೆ ಅಡರಿದಾಗ ತಮ್ಮದೇ ಅಜ್ಜಿ, ಮುತ್ತಜ್ಜಿಯಂದಿರು ಹೇಗೆ ಓದಿದರು, ಹೇಗೆ ಶಾಲೆಯ ಮೆಟ್ಟೀಲೇರಿದರು ಎಂಬ ಇತಿಹಾಸವನ್ನು ಕೆಲವರು ಮರೆತಿರಬಹುದು. ಆದರೆ ಚರಿತ್ರೆಯ ಸಾಕ್ಷಿ ನುಡಿಯುವ ಪುಟಗಳು ಮತ್ತು ಪಟಗಳು ನಮ್ಮ‌ ನಿಮ್ಮ ಮುಂದಿವೆ. ಯಾರೂ ನಿರಾಕರಿಸಲೂ ಸಾಧ್ಯವಿಲ್ಲದ ಸಾಕ್ಷ್ಯಗಳು ಇವೆ.

“ಓದಿನ ಮತ್ತು ಅನ್ನದ‌ ಋಣ ಮರೆತವರು ನೈಜ ಹಿಂದೂ ಆಗಿರಲಾರರೂ” ಎಂಬ ಸ್ವಾಮಿ ವಿವೇಕಾನಂದರ ಮಾತು ಶಾಲೆಯ ಗೇಟಿನ ಮುಂದೆ ಗದ್ದಲಕ್ಕೆ ನಿಂತವರಿಗೆ ಮರೆತು ಹೋಯಿತೇ?

1600x960 1174498 taranath
ತಾರಾನಾಥ್‌ ಗಟ್ಟಿ ಕಾಪಿಕಾಡ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

22 COMMENTS

  1. ಪ್ರಸ್ತುತ ಮಂಗಳೂರಿನಲ್ಲಿ ಶಾಲೆಯ ಎದುರುಗಡೆ ನಡೆದ ಗಲಾಟೆ ‌ಗದ್ದಲಕ್ಕೆ …ಈ ಇತಿಹಾಸ …ಪಾದ್ರಿಗಳು ಶಾಲೆ ತೆರೆದು ಈ ನೆಲದ ಹೆಣ್ಣು ಗಂಡುಗಳಿಗೆ ನೀಡಿದ ಅನ್ನ ಮತ್ತು‌ ಶಿಕ್ಷಣದ ಋಣ ನೆನಪಿಸಿದ್ದಕ್ಕೆ ಧನ್ಯವಾದಗಳು

  2. “ಧರ್ಮ – ಜಾತಿ – ಪಕ್ಷ” ಎಂಬ ವಿಷ ಬೀಜವನ್ನು ಮಕ್ಕಳಲ್ಲಿ ಯಾರೂ ಬಿತ್ತಬಾರದು. ಪ್ರೀತಿ – ಸ್ನೇಹ – ಸೌಹಾರ್ದತೆ ಮತ್ತು ಸಮಾನತೆಯೆಂಬ ಅಮೃತವನ್ನು ಮಕ್ಕಳಲ್ಲಿ ಎಲ್ಲರೂ ಬಿತ್ತಬೇಕು.

  3. ಅಪ್ಪ ಗಟ್ಟಿ ಕೈಯಲ್ಲಿ ಪೆನ್ನಿದೆ ಅಂತಹ ಯಾವುದೇ ಅಧ್ಯಯನ ಮಾಡದೇ ಸುಮ್ಮನೆ ಬರೆಯಬಾರದು, ಬ್ರಿಟಿಷ್ರರು ಶಾಲೆ ಪ್ರಾರಂಭಿಸಿದ್ದು ನೀವು ಉದ್ದಾರ ಆಗಬೇಕೆಂದು ಅಲ್ಲ, ಅವರ ಆಡಳಿತ ಸುಸೂತ್ರವಾಗಿ ನಡೆಯಬೇಕೆಂದು, ಆಗಲೂ, ಈಗಲೂ ನೆಲದ ಸಂಸ್ಕೃತಿ ನಾಶದ ಪ್ರಯತ್ನ ಆಗುತ್ತಲೇ. ಗೇಟು ಬಳಿ ಎಂದು ಪ್ರತಿ ಸಲ ಹೇಳುವ ಅಗತ್ಯ ಇಲ್ಲ. ಅಂತಹ ಸಂಸ್ಕೃತಿ ನಾಶ ಆಗುವಾಗ ಪ್ರತಿಭಟನೆ ಮಾಡಿದ್ದು ನೂರಕ್ಕೆ ನೂರು ಸರಿ ಹೊರತಾಗಿ ಆದರ ವಿರುದ್ದ ಕೆಲವು ಹಿಂದೂ ವಿರೋಧಿಗಳು, ಹೇಡಿಗಳು ದೂರು ನೀಡಿದರ ವಿರುದ್ದ ಬರೆಯಿರಿ.

  4. – ಬಾಸೆಲ್ ಮಿಷನ್ ಮಂಗಳೂರು, ಮೂಡುಬಿದಿರೆ ಮತ್ತು ಉಡುಪಿಯಲ್ಲಿ ಬ್ರಾಹ್ಮಣ ಹೆಣ್ಣುಮಕ್ಕಳ ಮೊದಲ ಶಾಲೆಗಳನ್ನು ಆರಂಭಿಸಿದೆ ಎಂಬ ಹೇಳಿಕೆ ಭಾಗಶಃ ಸತ್ಯ**. 1976 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಪ್ರಕಟಿಸಿದ ಡಾ.ಕೆ. ಆರ್. ಶೆಟ್ಟಿ ಅವರ “ದಿ ಬಾಸೆಲ್ ಮಿಷನ್ ಇನ್ ಸೌತ್ ಕೆನರಾ: ಎ ಸ್ಟಡಿ ಆಫ್ ಇಟ್ಸ್ ಎಜುಕೇಷನಲ್ ಅಂಡ್ ಸೋಶಿಯಲ್ ವರ್ಕ್” ಎಂಬ ಪುಸ್ತಕದ ಪ್ರಕಾರ, ಬಾಸೆಲ್ ಮಿಷನ್ ಈ ಸ್ಥಳಗಳಲ್ಲಿ ಬ್ರಾಹ್ಮಣರು ಸೇರಿದಂತೆ ವಿವಿಧ ಜಾತಿಗಳ ಬಾಲಕಿಯರಿಗಾಗಿ ಶಾಲೆಗಳನ್ನು ಸ್ಥಾಪಿಸಿತು. ಆದಾಗ್ಯೂ, ಬಾಸೆಲ್ ಮಿಷನ್ ಆಗಮಿಸುವ ಮೊದಲು ಬ್ರಾಹ್ಮಣ ಕುಟುಂಬಗಳು ಅಥವಾ ಸಂಘಗಳು ನಡೆಸುವ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಇರುವುದರಿಂದ ಇವುಗಳು ಈ ಪ್ರದೇಶದಲ್ಲಿ ಬ್ರಾಹ್ಮಣ ಹುಡುಗಿಯರಿಗೆ ಮೊದಲ ಶಾಲೆಗಳಾಗಿರಲಿಲ್ಲ. ಬಾಸೆಲ್ ಮಿಷನ್ ಶಾಲೆಗಳು ಬ್ರಾಹ್ಮಣ ಹುಡುಗಿಯರಿಗೆ ಸಹ-ಶಿಕ್ಷಣ ಮತ್ತು ಔಪಚಾರಿಕ ಪಠ್ಯಕ್ರಮವನ್ನು ನೀಡಿದ ಮೊದಲನೆಯದು, ಮತ್ತು ತಮ್ಮ ಹೆಣ್ಣುಮಕ್ಕಳು ಕಡಿಮೆ ಜಾತಿಗಳೊಂದಿಗೆ ಬೆರೆಯಲು ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಬಯಸದ ಕೆಲವು ಸಂಪ್ರದಾಯವಾದಿ ಬ್ರಾಹ್ಮಣರಿಂದ ಅವರು ವಿರೋಧವನ್ನು ಎದುರಿಸಿದರು. ಬಾಸೆಲ್ ಮಿಷನ್ ಶಾಲೆಗಳಲ್ಲಿ ಅಧ್ಯಯನ ಮಾಡಿದ ಕೆಲವು ಬ್ರಾಹ್ಮಣ ಹುಡುಗಿಯರು ನಂತರ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ರುಕ್ಮಿಣಿ ಲಕ್ಷ್ಮಿಪತಿಯಂತಹ ಪ್ರಮುಖ ಸಾಮಾಜಿಕ ಸುಧಾರಕರಾದರು ಎಂದು ಪುಸ್ತಕ ಉಲ್ಲೇಖಿಸುತ್ತದೆ.
    – ಸ್ವಾಮಿ ವಿವೇಕಾನಂದರು ಹೇಳಿದ ಉಲ್ಲೇಖ * * ಸುಳ್ಳು**. ಸ್ವಾಮಿ ವಿವೇಕಾನಂದರು ಎಂದಿಗೂ ಇಂತಹ ಹೇಳಿಕೆ ನೀಡಿಲ್ಲ ಅಥವಾ ಬರೆದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಾಸ್ತವವಾಗಿ, ಸ್ವಾಮಿ ವಿವೇಕಾನಂದರು ಭಾರತದಲ್ಲಿನ ಮಿಷನರಿ ಚಟುವಟಿಕೆಗಳನ್ನು ಟೀಕಿಸಿದರು ಮತ್ತು ನಿಜವಾದ ಸಹಾನುಭೂತಿಗಿಂತ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳಿಂದ ಪ್ರೇರೇಪಿಸಲ್ಪಟ್ಟಿದ್ದಾರೆ ಎಂದು ಆರೋಪಿಸಿದರು. ಹಿಂದೂ ಸಂಸ್ಕೃತಿ ಮತ್ತು ಶಿಕ್ಷಣದ ಪುನರುಜ್ಜೀವನಕ್ಕಾಗಿ ಅವರು ಪ್ರತಿಪಾದಿಸಿದರು ಮತ್ತು ಭಾರತೀಯ ಜನರ ಮೇಲೆ ಪಾಶ್ಚಿಮಾತ್ಯ ಮೌಲ್ಯಗಳು ಮತ್ತು ನಂಬಿಕೆಗಳನ್ನು ಹೇರುವುದನ್ನು ವಿರೋಧಿಸಿದರು. ವಿಜ್ಞಾನ, ತಂತ್ರಜ್ಞಾನ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಂತಹ ಪಾಶ್ಚಿಮಾತ್ಯ ನಾಗರಿಕತೆಯ ಸಕಾರಾತ್ಮಕ ಅಂಶಗಳನ್ನು ಅವರು ಅಂಗೀಕರಿಸಿದರು ಮತ್ತು ಭಾರತೀಯರು ಅವರಿಂದ ಕಲಿಯಬೇಕು ಮತ್ತು ಅವುಗಳನ್ನು ತಮ್ಮದೇ ಆದ ಸನ್ನಿವೇಶದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಅವರು ಇತರ ಧರ್ಮಗಳನ್ನು ಗೌರವಿಸಿದರು ಮತ್ತು ಅಂತರಧರ್ಮದ ಸಂಭಾಷಣೆ ಮತ್ತು ಸಾಮರಸ್ಯವನ್ನು ಉತ್ತೇಜಿಸಿದರು. ಆದಾಗ್ಯೂ, ಅವರು ಭಾರತದಲ್ಲಿ ತಮ್ಮ ಶೈಕ್ಷಣಿಕ ಅಥವಾ ಸಾಮಾಜಿಕ ಕಾರ್ಯಕ್ಕಾಗಿ ಮಿಷನರಿಗಳಿಗೆ ಕೃತಜ್ಞತೆ ಅಥವಾ ಋಣಭಾರವನ್ನು ಎಂದಿಗೂ ವ್ಯಕ್ತಪಡಿಸಲಿಲ್ಲ. ಇದಕ್ಕೆ ವಿರುದ್ಧವಾಗಿ, ಅವರು ತಮ್ಮ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಸಾಬೀತುಪಡಿಸಲು ಸವಾಲು ಹಾಕಿದರು

    ಆದ್ದರಿಂದ, ಲೇಖನವು ಇತಿಹಾಸದ ವಿಕೃತ ಆವೃತ್ತಿಯನ್ನು ಪ್ರಸ್ತುತಪಡಿಸುತ್ತದೆ ಮತ್ತು ಅದರ ಕಾರ್ಯಸೂಚಿಯನ್ನು ಬೆಂಬಲಿಸಲು ಪ್ರಸಿದ್ಧ ಹಿಂದೂ ನಾಯಕನನ್ನು ತಪ್ಪಾಗಿ ಉಲ್ಲೇಖಿಸುತ್ತದೆ. ಇದು ಭಾರತೀಯ ಸಮಾಜದ ಸಂಕೀರ್ಣ ಮತ್ತು ವೈವಿಧ್ಯಮಯ ವಾಸ್ತವಗಳನ್ನು ಮತ್ತು ಅದರಲ್ಲಿ ಶಿಕ್ಷಣ ಮತ್ತು ಧರ್ಮದ ಪಾತ್ರವನ್ನು ನಿರ್ಲಕ್ಷಿಸುತ್ತದೆ.

    • ನಿಮ್ಮ ಮಾತು ನೂರಕ್ಕೆ ನೂರು ನಿಜ. ಕ್ರೈಸ್ತ ಸಂಸ್ಕೃತಿ ತಮ್ಮ ಮತಾಂತರ ಕಾರ್ಯಕ್ಕೆ ಅಡಿಪಾಯ ಹಾಕಿದ್ದೆ ಇದೆ ಶಿಕ್ಷಣ ಹಾಗೂ ಆರೋಗ್ಯ ಸೇವೆಯ ಹೆಸರನಲ್ಲಿ.

  5. Nimma prakara …awru education kottidaare …adakke Hinduism bittu Christianity ge convert aagi antha na?… Awrige school indha yenu upayoga aaglilwa? Haagadre Mangalore alli iro christians Jerusalem indha bandhavra? Or converted? Convert Yaar maadidru?

  6. ಮಿಷನರಿಗಳ ಪ್ರತಿಯೊಂದು ಸೇವೆಗಳ ಹಿಂದಿನ ಉದ್ದೇಶ ಹಿಂದೂಗಳನ್ನು ಮತಾಂತರಿಸುವುದು ಮಾತ್ರವೇ ಆಗಿತ್ತು. ಆರೋಗ್ಯ, ಶಿಕ್ಷಣ ಎಲ್ಲ ಮತಾಂತರದ ಹಿಂದಿನ ಮುಖವಾಡಗಳು.

  7. Since 1996 waregu Nanage gotero hage obba abdula , antony Anthony edda kaladli 2024 sumaru 500 abdula 500 antony hege aithu anode questions…. Adre veparyasa 100 rama agedu maribardu….

  8. First girl school in london was opened in 1850 only…so the above claim might be a lie…
    Even if it’s true, the evil intentions behind opening school for brahmin girls is just to break the Hindu culture by teaching women that western Gods and culture was superior to Indian culture…because for most of children mother is the first teacher.

  9. We are not slaves to missionaries, Tharanatha Gatti should understand why people are protesting in front of the school.When they are showing disrespect to our culture, tradition and places of worship we must give them fitting reply

  10. ಇವರ ಮಂಡೆಯಲ್ಲಿ ಹಿಂದುತ್ವದ ಬೂತ ತುಂಬಿದೆ ನೀವು ಅಲ್ಲ ದೇವರು ಬಂದು ಹೇಳಿದರೂ ಇವರ ತಲೆಗೆ ಹೋಗುವುದಿಲ್ಲ. ಮತಾಂತರ ಮತಾಂತರ ಹೇಳ್ತೀರಾ ಮತ್ತೆ ಯಾಕೆ ಕ್ರಿಚ್ಚನ್ಸ್ ಕಮ್ಮಿಯಾಗುತ್ತ ಬಂದಿದೆ ಭಾರತದಲ್ಲಿ ? ಯಾರು ಮತಾಂತರ ಮತಾಂತರ ಹೇಳ್ತರಾ ಅವರು ಡಿಎನ್ಎ ಚೆಕ್ ಮಾಡಿಸಿಕೊಳ್ಳಿ ಆಗಾ ಗೊತ್ತಾಗುತ್ತೆ ನೀವು ಭಾರತೀಯರ ಇಲ್ಲ ಹೊರಗಿನ ಅರ್ಯರಾ ಎಂದು

    • ಬಾಯಿಗೆ ಬಂದ ಹಾಗೆ ಬೊಗಳಬೇಡ… ನಿಮಗೆ ಇತಿಹಾಸ ಗೊತ್ತಿರೋದು ಬ್ರಿಟಿಷರು ಬರೆದ ಪುಸ್ತಕದಿಂದ ಮಾತ್ರ ವಿನಃ ನಿಜವಾದ ಇತಿಹಾಸ ಅಲ್ಲ

  11. Now you cannot find teachers like that! Did they interfere with hindu dharma then? And who are teaching in Getosa or any Christian school are converted Hindus, who hate Hindus!

  12. ಪಾಠ ಮಾಡುವುದು ಬಿಟ್ಟು ಮಕ್ಕಳಿಗೆ ಇಲ್ಲ ಸಲ್ಲದ್ದನ್ನು ಹೇಳಿಕೊಡುವ ಟೀಚರ್ನ ಪರವಾಗಿ ಇದನ್ನು ಬರೆದಿದ್ದೀರಿ. ಶಾಲೆಯ ವಿರುದ್ಧ ಯಾರೂ ಕೂಡ ಇದುವರಿಗೂ ಮಾತಾಡಿಲ್ಲ. ವಿರೋಧವೇನಿದ್ದರೂ ಮಕ್ಕಳ ತಲೆಗೆ ಕೆಟ್ಟದನ್ನು ತುಂಬಿಸುತ್ತಿರುವ ಆ ಅಧ್ಯಪಕಿಯ ಮೇಲೆ. ಗೇಟಿನ ಮುಂದೆ ಹೋಗಿ ಹೋರಾಟ ಮಾಡದಿದ್ದರೆ ಈ ಕೃತ್ಯ ಮುಂದುವರಿಯುತ್ತಲೇ ಇತ್ತು. ದೊಡ್ಡ ತಪ್ಪು ಮಾಡಿರುವ ಆಕೆಯನ್ನು ಬಿಟ್ಟು ಮುಂದಿನ ಪೀಳಿಗೆಯ ಮಕ್ಕಳಿಗೋಸ್ಕರ ಹೋರಾಡಿದ ಹೋರಾಟಗಾರರ ವಿರುದ್ಧ ಮಾತಾಡುವ ಕೆಲವರಿಗೆ ಧಿಕ್ಕಾರ. ಮಕ್ಕಳ ತಲೆಗೆ ವಿಷವನ್ನು ತುಂಬುವ ಆಕೆಗೆ ಶಿಕ್ಷೆಯ ಜೊತೆಗೆ ಪಶ್ಚತ್ತಾಪ ಕೂಡ ಆಗಬೇಕು. ಒಂದುವೇಳೆ ಅವರ ಧರ್ಮದ ಮಕ್ಕಳು ನಮ್ಮ ಶಾಲೆಯಲ್ಲಿ ಓದುತಿದ್ದು, ನಮ್ಮವರು ಅವರಿಗೆ ನಿಮ್ಮದು ಮೂಢ ನಂಬಿಕೆ, ನಿಮ್ಮ ದೇವರನ್ನು ಯಾರು ನೋಡಿದ್ದಾರೆ, ದೇವರಾಗಿದ್ದರೆ ಅಷ್ಟು ಕಷ್ಟ ಹಾಗೂ ಪೆಟ್ಟುಗಳನ್ನು ಯಾಕೆ ಸಹಿಸಿಕೊಳ್ಳುತಿದ್ದರು, ಆ ಬಂಧನದಿಂದ ಹೊರ ಬರಬಹುದಲ್ಲವೇ????? ಎಂದೆಲ್ಲ ಹೇಳಿದ್ದರೆ…… ಇಷ್ಟು ಹೊತ್ತಿಗೆ ದೊಡ್ಡ ಹೋರಾಟವಲ್ಲ ಕೆಟ್ಟ ಹೋರಾಟ ನಡೆಯುತಿತ್ತು. ನನ್ನ ಪ್ರಕಾರ ಸಂಪೂರ್ಣ ತಪ್ಪು ಆ ಹೆಂಗಸಿನದ್ದು.

  13. Just because they started school doesn’t mean they can freely hate other religions. First of all, they whole purpose of starting a school was to spread their religion in India. Our ancestors were brave enough to stop these crooked techniques of conversions.
    This writer must be a boot licker of missionaries. Nobody is telling how come only Prabha is alleged hating Hindu religion. Everybody is busy in preaching philosophy to protesting Hindus and good that people are coming in numbers against these evil missionaries!

  14. The author seems to be biased. Watched some of his video programs also. There also he struggles to prove his biased thoughts with the similar ideology guests. These days people in the excitement of criticising their imagined opponents causing more dissonance in the society instead of taking it together. Hatred and propaganda against one particular community has reached a tipping point. It is being projected that for every evil in the society these people are the reasons.

  15. Brahmin bashing is a easy task . Even ministers , chief minister are nominated in the name of caste and religion other than Brahmin and it is more vocal in the name of caste after independence. All others have religion and caste but Brahmin has no caste . Very strange. Others can join together and make sangha but if Brahmin join together then it is sin. And Bhedha . Very ridiculous

  16. ” ಸುನಂದಾ ಶೆಟ್ಟಿ ” ಎನ್ನುವವರ ಹೆಸರಲ್ಲಿ, ಕ್ರಿಶ್ಚಿಯನ್ ಧರ್ಮ ಪ್ರಚಾರದ ಪತ್ರ ನನಗೆ ಬಂದಿತ್ತು. ಅದು ಮಂಗಳೂರು ಬಿಜೈ ಚರ್ಚಿನಿಂದ. ಶ್ರೀಮತಿ ಶೆಟ್ಟಿಯವರನ್ನು ( ಅವರ ಮೊಬೈಲ್ no. ಸಹ ಪತ್ರದಲ್ಲಿತ್ತು ) ಸಂಪರ್ಕಿಸಿದಾಗ, ಅವರು ಒಬ್ಬ ಕ್ಯಾನ್ಸರ್ ರೋಗಿ. ಅವರ ಹೆಸರಲ್ಲಿ ಪ್ರಚಾರ, ನನ್ನ ಮುಂಬೈ ವಿಳಾಸದಲ್ಲಿ. ( 2017 ಅಕ್ಟೋಬರ್ ನಲ್ಲಿ ) ಬಿಜೈ ಚರ್ಚಿನ ನಂಬರ್ ಪತ್ರ ದಲ್ಲಿತ್ತು. ಅವರ ಗುರುಗಳನ್ನು ಸಂಪರ್ಕಿಸಿದೆ. ಅವರು ಮೊದಲು, ಪ್ರಿಂಟಿಂಗ್ ಪ್ರೆಸ್ ನ ಕೆಲಸವೆಂದರು. ನಾನೆಂದೆ, ಪ್ರೆಸ್ ನವರು ಅವರ ಉದ್ಯೋಗ ವಿನಃ ಧರ್ಮಾಂತರ ಕೆಲಸಕ್ಕೇ ಯಾಕೆ ಬರುತ್ತಾರೆ. ನಂತರ ಅವರಿಗೆ, ಪ್ರತಿ ರವಿವಾರ ಮಾಸ್ ನಲ್ಲಿ ಇಂತಹ ಹೀನ ಕೆಲಸ ಮಾಡಬೇಡವೆಂದು ಸಲಹೆ ಕೊಟ್ಟೆ. ಪತ್ರ ನನ್ನಲಿ ಇನ್ನೂ ಇದೆ.

  17. ಬಹಳ ಅತ್ಯುತ್ತಮವಾದ ಇತಿಹಾಸವಿರುವ ದಾಖಲೆಯೊಂದಿಗಿರು ಸತ್ಯಾನ್ವೇಷಣೆಯ ಸುದ್ದಿಯನ್ನು ಓದಿ ಬಹಳ ಸಂತೋಷವಾಯಿತು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X