ಸ್ಮಶಾನಕ್ಕೆ ಹೋಗುವ ದಾರಿಯನ್ನು ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಿ, ದಾರಿಯನ್ನು ಹದ್ದುಬಸ್ತು ಮಾಡಬೇಕಂದು ಒತ್ತಾಯಿಸಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಆದಿ ಜಾಂಬವ ಸಾವಾ ಟ್ರಸ್ಟ್ ಒತ್ತಾಯಿಸಿದೆ. ಕೂಡಗಾನೂರ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ತಾಲೂಕಿನ ಕಾರಗನೂರ್ ಗ್ರಾಮದಲ್ಲಿ ಮಾದರ ಸಮುದಾಯಕ್ಕಾಗಿ ನೀಡಿರುವ ಸ್ಮಾಶಾನಕ್ಕೆ ಹೋಗುವ ದಾರಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಹಿಂದೆ ತಹಶೀಲ್ದಾರ್ ಮತ್ತು ಉಪ ವಿಭಾಗ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿಲ್ಲ. ಈಗ, ಮುಂದಿನ 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಾರೆ, ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಟ್ರಸ್ಟ್‌ನ ಹಿರಿಯರಾದ ಯಮನಪ್ಪ ಕೊಡಗಾನೂರು, ಬಸ್ಸು ಈ ಕಟ್ಟಿಮನಿ,
ಶಿವು ವನಹಳ್ಳಿ, ಯಮನಪ್ಪ ನಾಯ್ಕೋಡಿ, ಗೋಪಾಲ್ ಕಟ್ಟಿಮನಿ, ಶಿವಪ್ಪ ಮಾದರ್, ಶೇಕಪ್ಪ ಕಾರನೂರ ಸೇರಿದಂತೆ ಹಲವರು ಇದ್ದರು.