ಮುಖ್ಯಶಿಕ್ಷಕನೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೀದರ್ ನಗರದ ಹೊರವಲಯದ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದಿದೆ.
ಶಾಲೆಯ ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ 50 ಸಾವಿರ ರೂ. ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
2020 ರಲ್ಲಿ ನಿವೃತ ಹೊಂದಿದ್ದ ಶಾಲೆಯ ವಿಜ್ಞಾನ ಶಿಕ್ಷಕಿ ಶಶಿಕಲಾ ಧನ್ನೂಕರ್ ಎಂಬುವರು ಸರ್ಕಾರದಿಂದ ಸಿಗಬೇಕಿದ್ದ ಪಿಂಚಣಿ ಸೇರಿದಂತೆ ಇತರ ಸೌಲಭ್ಯದ ಪ್ರಕ್ರಿಯೆಗಾಗಿ ಕಡತ ಸಿದ್ದಪಡಿಸಿ ಸಲ್ಲಿಸಲು ಮುಖ್ಯಶಿಕ್ಷಕರ ಬಳಿ ಕೋರಿದ್ದರು. ಆದರೆ ಕಡತ ಪ್ರಕ್ರಿಯೆಗಾಗಿ ತುಕಾರಾಂ ಕಾಂಬಳೆ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಇದೀಗ 1 ಲಕ್ಷದ ಚೆಕ್ ಹಾಗೂ 50 ಸಾವಿರ ರೂ. ನಗದು ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ
ಲೋಕಾಯುಕ್ತ ಡಿವೈಎಸ್‌ಪಿ ಎನ್.ಎಮ್.ಓಲೇಕಾರ್ ಮಾಗದರ್ಶನದಲ್ಲಿ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿ ಮುಖ್ಯಶಿಕ್ಷಕನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.