ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ತನ್ನ ದೇಹದೊಳಗೆ ಬರೊಬ್ಬರಿ ₹9.2 ಕೋಟಿ ಮೌಲ್ಯದ ಕೊಕೇನ್ ಅನ್ನು ಮರೆಮಾಚಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದನು. ಸದ್ಯ ಆತನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ.
ವೆನೆಜುವೆಲಾದ ಪ್ರಯಾಣಿಕ ದುಬೈನಿಂದ ಬೆಂಗಳೂರಿಗೆ ಬಂದಿದ್ದನು. ಆತ ತನ್ನ ದೇಹದೊಳಗೆ ಕೊಕೇನ್ ಮರೆ ಮಾಡಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದನು.
ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ವೇಳೆ, ಅನುಮಾನಗೊಂಡ ಡಿಆರ್‌ಐ ಅಧಿಕಾರಿಗಳು ಆರೋಪಿಯನ್ನು ತಪಾಸಣೆ ಮಾಡಿ, ಬಳಿಕ ಸ್ಕ್ಯಾನಿಂಗ್ ಮಾಡಿಸಿದ್ದರು.
ಸ್ಕ್ಯಾನಿಂಗ್ ಸಮಯದಲ್ಲಿ ಪ್ರಯಾಣಿಕನ ದೇಹದಲ್ಲಿ ಬರೊಬ್ಬರಿ ₹9.2 ಕೋಟಿ ಮೌಲ್ಯದ 920 ಗ್ರಾಂ ನಾರ್ಕೋಟಿಕ್ ಕ್ಯಾಪ್ಸುಲ್ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಲ್ಲೆಗೊಳಗಾದ ಕೇರಳದ ಇಬ್ಬರು ಮಾದಕ ವಸ್ತು ಮಾರಾಟಗಾರರು
ಸದ್ಯ ಕ್ಯಾಪ್ಸುಲ್‌ಗಳನ್ನು ಡಿಆರ್‌ಐ ಅಧಿಕಾರಿಗಳು ಹೊರ ತೆಗೆಸಿದ್ದಾರೆ. ಈ ಬಗ್ಗೆ ಎನ್‌ಡಿಪಿಎಸ್ ಕಾಯ್ದೆ 1985ರ ಅಡಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಾಗಿದೆ.