ಗುಜರಾತ್ನ ರಾಜ್ಕೋಟ್ನಲ್ಲಿರುವ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ. ಆರಂಭಿಕ ಆಟಗಾರ ಬೆನ್ ಡಕೆಟ್ ಅಮೋಘ ಆಟವಾಡಿ, ಭರ್ಜರಿ ಶತಕ ಸಿಡಿಸಿದ್ದಾರೆ.
ಸದ್ಯ 133 ರನ್ ಗಳಿಸಿರುವ ಬೆನ್ ಡಕೆಟ್ ಅವರು, ಆಕರ್ಷಕ 21 ಬೌಂಡರಿ ಹಾಗೂ ಎರಡು ಸಿಕ್ಸರ್ಗಳು ಕೂಡ ಸೇರಿದ್ದವು. 9 ರನ್ ಗಳಿಸಿರುವ ಜೋ ರೋಟ್ ಜೊತೆಗೆ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
That’s Stumps on Day 2 in Rajkot!
England move to 207/2, trail by 238 runs.
Scorecard ▶️ https://t.co/FM0hVG5pje#TeamIndia | #INDvENG | @IDFCFIRSTBank pic.twitter.com/qZgkVvcNg7
— BCCI (@BCCI) February 16, 2024
ಝಾಕ್ ಕ್ರಾಲಿ 15, ಓಲಿ ಪೋಪ್ 39 ರನ್ ಗಳಿಸಿ ಔಟಾದರು. ಟೀಮ್ ಇಂಡಿಯಾ ಪರ ಸಿರಾಜ್ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಗೆ ಆಲೌಟಾಗಿತ್ತು. ಜಡೇಜ 112ಕ್ಕೆ ಔಟಾದರೆ, ಕುಲದೀಪ್ ಯಾದವ್ 4 ರನ್ ಗಳಿಸುವಷ್ಟರಲ್ಲಿ ಔಟಾಗಿ ಪೆವಿಲಿಯನ್ಗೆ ಮರಳಿದರು. ಆ ಬಳಿಕ ಧ್ರುವ್ ಜುರೆಲ್ 46, ಅಶ್ವಿನ್ 37, ಬುಮ್ರಾ 26 ರನ್ ಗಳಿಸಿ ಔಟಾದರು. ಸಿರಾಜ್ 3 ರನ್ ಗಳಿಸಿ ಔಟಾಗದೆ ಉಳಿದರು.
5⃣0⃣0⃣ reasons to celebrate 👏👏
Way to go, @ashwinravi99! 🙌#TeamIndia | #INDvENG | @IDFCFIRSTBank pic.twitter.com/LTTwphmY8q
— BCCI (@BCCI) February 16, 2024
ಇಂಗ್ಲೆಂಡ್ ಪರ ಮಾರ್ಕ್ ವುಡ್ 4 ವಿಕೆಟ್ ಪಡೆದರು. ರೆಹಾನ್ ಅಹ್ಮದ್ 2 ವಿಕೆಟ್, ಜೇಮ್ಸ್ ಆಂಡರ್ಸನ್, ಟಾಮ್ ಹಾರ್ಟ್ಲಿ, ರೂಟ್ ತಲಾ ಒಂದು ವಿಕೆಟ್ ಪಡೆದರು.
500 ವಿಕೆಟ್ಗಳ ಸರದಾರನಾದ ರವಿಚಂದ್ರನ್ ಅಶ್ವಿನ್
ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಆಫ್ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮೊದಲ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳ ಸರದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಟೆಸ್ಟ್ ಕ್ರಿಕೆಟ್ನಲ್ಲಿ ‘500 ವಿಕೆಟ್ಗಳ ಸರದಾರ’ನಾದ ಆಫ್ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್
ಎರಡನೇ ದಿನದಾಟದ ಪಂದ್ಯದಲ್ಲಿ ಇಂಗ್ಲೆಂಡ್ನ ಆರಂಭಿಕ ಆಟಗಾರ ಝಾಕ್ ಕ್ರಾಲಿ ಅವರನ್ನು ತನ್ನ ಸ್ಪಿನ್ ಮಾಂತ್ರಿಕತೆಗೆ ಬೀಳಿಸಿದ ತಮಿಳುನಾಡಿನ ರವಿಚಂದ್ರನ್ ಅಶ್ವಿನ್, ಈ ಸಾಧನೆಯನ್ನು ಮಾಡಿದ್ದಾರೆ.
ಅಶ್ವಿನ್ ಎಸೆದ ಎಸೆತವನ್ನು ಎದುರಿಸಿದ ಕ್ರಾಲಿ, ಸ್ವೀಪ್ ಮಾಡುವ ಮೂಲಕ ಬೌಂಡರಿಗೆ ಯತ್ನಿಸಿದರು. ಆದರೆ ವಿಫಲವಾಗಿ ಅದು ಟಾಪ್ ಎಡ್ಜ್ ಆದ್ದರಿಂದ ರಜತ್ ಪಾಟೀದಾರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಆ ಮೂಲಕ ರವಿಚಂದ್ರನ್ ಅಶ್ವಿನ್ 500ನೇ ವಿಕೆಟ್ ಪಡೆದರು.