ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್: ಆನ್​ಲೈನ್​ನಲ್ಲಿ ನಕಲಿ ‘ಕ್ಯೂಆರ್ ಕೋಡ್’​ ಬಳಸಲಾಗುತ್ತಿದೆ, ಎಚ್ಚರ

Date:

Advertisements

ವಾಹನಗಳಿಗೆ ಹೆಚ್ಚಿನ ಭದ್ರತೆ ನೀಡುವ ಹಿನ್ನೆಲೆ, ಹೆಚ್‌ಎಸ್‌ಆರ್‌ಪಿ ನಂಬರ್ ಫ್ಲೇಟ್‌ ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ, ನಂಬರ್ ಫ್ಲೇಟ್‌ ಅಳವಡಿಸಲು ಮೇ 31ರವರೆಗೆ ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಈ ನಡುವೆ, ಕೆಲ ಕಿಡಿಗೇಡಿಗಳು ಆನ್​ಲೈನ್​ನಲ್ಲಿ ನಕಲಿ ಕ್ಯೂ ಆರ್ ಕೋಡ್ ಹಾಕಿ ಸೈಬರ್ ವಂಚನೆ ಮಾಡಲು ಮುಂದಾಗಿದ್ದಾರೆ.

ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಎಲ್ಲ ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ರಿಜಿಸ್ಟ್ರೇಷನ್ ಮಾಡಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ, ಸಾಕಷ್ಟು ಜನ ನೂತನ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗೆ ಬದಲಾಗಿದ್ದರೆ, ಇನ್ನೂ ಹಲವಾರು ವಾಹನ ಸವಾರರಿಗೆ ಇದನ್ನು ಹೇಗೆ ಪಡೆಯಬೇಕು ಎನ್ನುವ ವಿಚಾರ ತಿಳಿದಿಲ್ಲ. ಇದನ್ನೇ, ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ನಕಲಿ ಕ್ಯೂ ಆರ್ ಕೋಡ್ ಲಿಂಕ್​ಗಳನ್ನು ಆನ್‌ಲೈನ್​ನಲ್ಲಿ ಹಾಕಿ ಜನರಿಗೆ ಮೋಸ ಮಾಡಲು ಬಲೆ ಬೀಸಿದ್ದಾರೆ.

ಕೆಲವು ಸ್ಕ್ಯಾಮರ್‌ಗಳು ನಕಲಿ ವೆಬ್‌ಸೈಟ್‌ ಬಳಕೆ ಮಾಡಿಕೊಂಡು ಹಣ ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್​ಗೆ ಅಪ್ಲೈ ಮಾಡುವ ಮುನ್ನ ಎಚ್ಚರ ಇರಲಿ. ಆನ್‌ಲೈನ್​ನಲ್ಲಿ ನಕಲಿ ಕ್ಯೂಆರ್ ಕೋಡ್ ಲಿಂಕ್​ಗಳ ಹಾವಳಿ ಹೆಚ್ಚಾಗಿದೆ. ಜನ ನಕಲಿ ಕ್ಯೂಆರ್ ಕೋಡ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಖಾತೆಯಲ್ಲಿರುವ ಎಲ್ಲ ಹಣ ಮಾಯವಾಗುತ್ತದೆ.

Advertisements

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ಸೈಬರ್ ಕ್ರೈಂ ನಡೆಯುತ್ತಿದೆ. ನಕಲಿ ಲಿಂಕ್ ಹರಿಬಿಟ್ಟು ಕೆಲ ಕಿಡಿಗೇಡಿಗಳು ದುಡ್ಡು ಮಾಡಲು ಹೊರಟಿದ್ದಾರೆ. ನೋಂದಣಿ ಬಳಿಕ ಸಿಗುವ ಕ್ಯೂಆರ್ ಕೋಡ್​ಗಳನ್ನು ನಕಲಿ ಮಾಡುತ್ತಿದ್ದಾರೆ. ಕ್ಯೂಆರ್ ಕೋಡ್ ಟಚ್ ಮಾಡುತ್ತಿದ್ದಂತೆ ಅಪರಿಚಿತರ ಖಾತೆಗೆ ಲಿಂಕ್ ಹೋಗುತ್ತಿದ್ದು, ನಿಮ್ಮ ಖಾತೆಯಲ್ಲಿದ್ದ ಹಣ ಖದೀಮರ ಪಾಲಾಗುತ್ತದೆ.

ಈ ಬಗ್ಗೆ ಓರ್ವ ವ್ಯಕ್ತಿ ಎಕ್ಸ್‌ ಮೂಲಕ ಬೆಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದು, “ನನ್ನ ಹೆಚ್‌ಎಸ್‌ಆರ್‌ಪಿ ಪ್ಲೇಟ್ ನೋಂದಣಿ ಪಡೆಯಲು ನಾನು ಆನ್‌ಲೈನ್‌ಗೆ ಹೋಗಿ ಮೊದಲ ಲಿಂಕ್ ಅನ್ನು ಕ್ಲಿಕ್ ಮಾಡಿದೆ. ವಿವರಗಳನ್ನು ತುಂಬಿದೆ. ಆ ಲಿಂಕ್ ನನ್ನನ್ನು ಕ್ಯೂಆರ್‌ ಕೋಡ್‌ಗೆ ಕರೆದುಕೊಂಡು ಹೋಯಿತು. ಆಗ ಅಲ್ಲಿ ಹಣ ಪಾವತಿಸಲು ಮೊಹಮ್ಮದ್ ಆಸಿಫ್ ಎಂಬ ವ್ಯಕ್ತಿಯ ಹೆಸರು ಮತ್ತು ಕ್ಯೂಆರ್‌ ಕೋಡ್‌ ಇತ್ತು. ಜನರು ಈ ಕ್ಯೂ ಆರ್‌ ನೋಡಿ ಮೋಸ ಹೋಗಬಾರದು ಹಾಗಾಗಿ, ಈ ಕ್ಯೂ ಆರ್‌ ಕೋಡ್‌ ಫೋಟೋವನ್ನು ಇಲ್ಲಿ ಹಂಚಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಸರ್ಕಾರ ಇದೀಗ ನಂಬರ್ ಫ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡಿದೆ. ಟೆಕ್ನಿಕಲ್ ಸಮಸ್ಯೆಗಳಿಂದ ನಂಬರ್ ಫ್ಲೇಟ್ ಹಾಕಿಸಿಕೊಳ್ಳಲು ಜನರು ಹೈರಾಣಾಗಿದ್ದಾರೆ. ಶುಲ್ಕ ಪಾವತಿ ಮಾಡಿದ ನಂತರ ಪೋರ್ಟಲ್‌ಗಳು ಕೈಕೊಡುತ್ತಿವೆ.

ಮಾಲೀಕರು ಈ ಪೋರ್ಟಲ್‌ಗಳ ಮೂಲಕ ನೋಂದಣಿಗೆ ಪ್ರಯತ್ನಿಸಿದಾಗ ಹಲವರಿಗೆ ಕಂಪನಿ ಹೆಸರು, ವಾಹನದ ಮಾದರಿ ಇನ್ನಿತರ ವಿವರಗಳು ಹೊಂದಾಣಿಕೆಯಾಗುತ್ತಿಲ್ಲ. ಮತ್ತೆ ಕೆಲವರು ವಾಹನದ ನೋಂದಣಿ ಸಂಖ್ಯೆ, ಎಂಜಿನ್‌ ಸಂಖ್ಯೆ, ಚಾರ್ಸಿ ಸಂಖ್ಯೆಯ ವಿವರ ಹಾಕಿದರೆ ಅಂತಹ ವಾಹನವೇ ಇಲ್ಲವೆಂದು ಪೋರ್ಟಲ್‌ಗಳು ತೋರಿಸುತ್ತಿವೆ. ಹಲವು ವಾಹನಗಳ ಮಾಲೀಕರ ಮತ್ತು ಕಂಪನಿಯ ಹೆಸರು ಕೂಡ ಬದಲಾಗುತ್ತಿದೆ ಎಂದು ತಿಳಿದುಬಂದಿದೆ. ಜನರು ಹೆಚ್‌ಎಸ್‌ಆರ್‌ಪಿ ನಂಬರ್ ಫ್ಲೇಟ್ ನೋಂದಣಿಗೆ ಪರದಾಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕನ್ನಡ ನಾಮಫಲಕ ಬಳಸದ 18 ಉದ್ದಿಮೆಗಳು ತಾತ್ಕಾಲಿಕ ಬಂದ್

18,32,787 ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ

ಸದ್ಯ ರಾಜ್ಯದಲ್ಲಿ 2023ರ ಆಗಸ್ಟ್ 18 ರಿಂದ- 2024ರ ಫೆಬ್ರವರಿ 12ರ ವರೆಗೆ 18,32,787 ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.

“ಕೇಂದ್ರ ಸರ್ಕಾರದ ಆದೇಶದಂತೆ, ಎಲ್ಲ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿದೆ. ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದ್ದು, ಸುಮಾರು 2 ಕೋಟಿ ವಾಹನಗಳು ಅಸ್ತಿತ್ವದಲ್ಲಿವೆ ಹಾಗೂ ಇಲ್ಲಿಯವರೆಗೆ ಶೇ.9.16% ಪ್ರಮಾಣದ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ” ಎಂದು ಹೇಳಿದರು.

“ನಿಗದಿತ ದಿನಾಂಕದೊಳಗೆ ಹೆಚ್‌ಎಸ್‌ಆರ್‌ಪಿ ಅಳವಡಿಸದಿದ್ದಲ್ಲಿ, ಮೊದಲನೇ ಅಪರಾಧಕ್ಕೆ ₹500 ಹಾಗೂ ಎರಡನೇ ಮತ್ತು ನಂತರದ ಅಪರಾಧಗಳಿಗೆ ₹1000 ದಂತೆ ಹಾಗೂ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶದಂತೆ ದಂಡವನ್ನು ವಿಧಿಸಲಾಗುವುದು” ಎಂದು ತಿಳಿಸಿದರು.

ಯಾರೆಲ್ಲಾ ನಂಬರ್‌ ಪ್ಲೇಟ್‌ ಅಳವಡಿಸಬೇಕಿದೆ?

ಈ ಪ್ಲೇಟ್‌ ಅನ್ನು ಕಡ್ಡಾಯವಾಗಿ 1 ಏಪ್ರಿಲ್‌ 2019 ಕ್ಕಿಂತ ಮುನ್ನ ನೋಂದಣಿಯಾದ ವಾಹನಗಳಿಗೆ 90 ದಿನಗಳಲ್ಲಿ ಅಳವಡಿಸುವಂತೆ ಸೂಚಿಸಲಾಗಿದೆ. ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿ ಹಿನ್ನೆಲೆ, ಮೋಟಾರು ವಾಹನ ಕಾಯ್ದೆ 1989 ಸೆಕ್ಷನ್‌ 50 ಹಾಗೂ 51 ಅನ್ವಯ ಈ ನಿಯಮ ಜಾರಿ ಮಾಡಲಾಗಿದೆ. ಇದು ಹೆಚ್ಚಿನ ಭದ್ರತೆಯ ನಂಬರ್‌ ಪ್ಲೇಟ್ ಆಗಿದ್ದು, ಈ ಪ್ಲೇಟ್‌ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಕೊಡಲಾವುದಿಲ್ಲ ಎಂದು ಎಚ್ಚರಿಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕರ್ನಾಟಕದಲ್ಲಿ HSRP(ಎಚ್.ಎಸ್.ಆರ್.ಪಿ) ನಂಬರ್ ಪ್ಲೇಟನ್ನು ಅಳವಡಿಸ ಬಯಸುವವರು ಹೆಚ್ಚಿನ ಮಾಹಿತಿಗಾಗಿ SIAM- Society of Indian Automobile Manufacturers ರವರ ವೆಬ್ಸೈಟ್ ಅನ್ನು ಸಂಪರ್ಕಿಸಬಹುದು. ಲಿಂಕ್:https://www.siam.in/hrspsubmit.aspx?mpgid=91&pgidtrail=91

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X