ಬಸವಣ್ಣನವರನ್ನ ಆದ್ಯತ್ಮಕ್ಕೆ ಸೀಮಿತವಾಗಿಸಿದ್ದೇವೆ. ಆದರೆ, ಆರ್ಥಿಕ ತಜ್ಞ ಎಂದು ಮರೆತಿದ್ದೀವಿ. ಕಾಯಕ ತತ್ವ, ದುಡಿ, ದುಡಿದದ್ದನ್ನು ಹಂಚು ಎನ್ನುವ ತತ್ವ ಅಡಗಿದೆ. ಕಾಯಕ ದಾಸೋಹದ ಆರ್ಥಿಕ ನೀತಿಯನ್ನು ಭೋಧಿಸಿದ ಬಸವಣ್ಣನವರನ್ನು ನೆನಪಿಸಿಕೊಳ್ಳಬೇಕು ಎಂದು ಎಚ್.ಕೆ. ಪಾಟೀಲ್ ಹೇಳಿದರು.
ಗದಗ ಪಟ್ಟಣದ ಜಿಲ್ಲಾಡಳಿತ ಕಛೇರಿಯ ಆಡಿಟೋರಿಯಂನಲ್ಲಿ ʼಸಾಂಸ್ಕೃತಿಕ ನಾಯಕʼ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿದರು.
ಮಾನವತಾವಾದಿ ಬಸವಣ್ಣನವರನ್ನು ಇತ್ತೀಚಿಗೆ ಸಾಂಸ್ಕೃತಿಕ ನಾಯಕ ಎಂದು ಗೌರವಿಸಿ, ಅಧಿಕೃತವಾಗಿ ಒಪ್ಪಿಕೊಂಡಿದ್ದೇವೆ. ಸಂವಿಧಾನ ರಚನೆ ಮಾಡುವಾಗ ನಾವೇಲ್ಲರೂ ಒಂದೇ ಎನ್ನುವ ಹಾಗೆ ಜಗಜ್ಯೋತಿ ಬಸವೇಶ್ವರರು ಮಾನವ ಕುಲಕ್ಕೆ ಮಾರ್ಗದರ್ಶನ. ಅವರ ನಡತೆಯ ಮೂಲಕ ಅವರ ಕಾಲದ ವಿಶೇಷತೆಯನ್ನು ಜಗತ್ತಿಗೆ ತೋರಿಸಿದ್ದರಿಂದ ನಾವೆಲ್ಲರು ಇವತ್ತು ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಒಪ್ಪಿಕೊಂಡಿದ್ದೇವೆ.
ಎಲ್ಲ ಕಚೇರಿಗಳಲ್ಲಿ ಸಂವಿಧಾನ ಪೂರ್ವ ಪೀಠಿಕೆ ಹಾಕಲಾಗಿದೆ ಹಾಗೇ ಬಸವಣ್ಣನವರ ಭಾವಚಿತ್ರ ಇರುತ್ತದೆ. ಕಛೇರಿಗಳಿಗೆ ಬರುವರನ್ನು ಇವ ನಮ್ಮವ ಎಂದು ಬರಮಾಡಿಕೊಳ್ಳಬೇಕು. ʼಬಸವಣ್ಣನವರ ಪೋಟೋ ಹಾಕಿದೆ ಎಂದರೆ, ಬಾರಕೋಲು ಹಾಕಿಕೊಂಡು ನಿಂತಂಗ,ʼ ಹಾಗಾಗಿ ಬಸವಣ್ಣನವರ ನೀತಿ, ಸಂದೇಶದ ಭಯ ಇರಬೇಕು. ಎಲ್ಲರನ್ನು ಎಚ್ಚರಿಸುವುದಕ್ಕೆ ಗುರು ಬಸವಣ್ಣನವರು ನಿಂತಿದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದರು.
ಹನ್ನೆರಡನೇ ಶತಮಾನದಿಂದ ಇಲ್ಲಿವರೆಗೂ ಗೌರವದಿಂದ ಕಾಣುತ್ತಾ ಪೂಜೆ ಮಾಡುವುದರ ಜೊತೆಗೆ ಎಡಕ್ಕ ಬರ್ರಿ, ಬಲಕ್ಕ ಬರ್ರಿ ಎಂದು ಹೇಳುತ್ತಿವಿ. ಬಸವಣ್ಣನವರ ವಚನಗಳು ಕೇವಲ ಭಾಷಣಕ್ಕೆ ಅಷ್ಟೇ ಸೀಮಿತವಾಗಿ ಬಿಟ್ಟಿವಿ. ಅವರು ವಚನಗಳ ಮೂಲಕ ಅವರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಎಲ್ಲ ಕಛೇರಿಗಳಲ್ಲಿ ಈ ಭಾವಚಿತ್ರ ಬಂದ ಮೇಲೆ ಬದಲಾವಣೆ ಆಗಬೇಕು. ಸರ್ಕಾರಿ ಕಛೇರಿಗಳಿಗೆ ಬಡವರು, ಶ್ರಮ ಜೀವಿಗಳು ಬಂದಾಗ ಕಛೇರಿಯಲ್ಲಿ ಗೌರವಿಸದೇ ಇದ್ದರೆ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರನ್ನು ಅವಮಾನಿಸದ ಹಾಗೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಮ್.ಎನ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಮುಖಂಡರು ಎಸ್.ಎನ್. ಬಳ್ಳಾರಿ, ಬಸವರಾಜ ಕಡೆಮನಿ, ಅಧಿಕಾರಿಗಳು, ಬಸವಣ್ಣನವರ ಅನುಯಾಯಿಗಳು ಉಪಸ್ಥಿತರಿದ್ದರು.