ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಮೈತ್ರಿ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಒಂದೊಂದು ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಂಕಷ್ಟ ತಂದೊಡ್ಡುತ್ತಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಮಧ್ಯಪ್ರದೇಶದಲ್ಲೂ ಕೂಡ ಹೊಸ ಬೆಳವಣಿಗೆ ನಡೆಯುತ್ತಿದ್ದು, ಹಿರಿಯ ಕಾಂಗ್ರೆಸ್ ಮುಖಂಡ ಕಮಲ್‌ನಾಥ್ ಹಾಗೂ ಪುತ್ರ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಿಷ್ಠಾವಂತ ನಾಯಕ ಕಮಲ್‌ನಾಥ್ ಪುತ್ರ ಸಂಸದ ನಕುಲ್ ಕಮಲ್ ನಾಥ್ ಬಿಜೆಪಿ ಸೇರ್ಪಡೆ ಸಾಧ್ಯತೆ ಇದೆ. ಬಿಜೆಪಿಯ ಮುಖಂಡರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
#WATCH | Former Madhya Pradesh CM and Congress leader Kamal Nath arrives at Delhi airport. pic.twitter.com/RsJ02JU2bw
— ANI (@ANI) February 17, 2024
ಚಿಂದ್ವಾರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದನಾಗಿರುವ ನಕುಲ್ ಕಮಲ್ ನಾಥ್ ಇದೀಗ ಬಿಜೆಪಿ ಸೇರಲು ಆಸಕ್ತಿ ತೋರಿರುವುದಾಗಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ನಕುಲ್ ಕಮಲ್ ನಾಥ್ ಸಾಮಾಜಿಕ ಮಾಧ್ಯಮಗಳ ಖಾತೆಯಿಂದ ಕಾಂಗ್ರೆಸ್ ಪಕ್ಷದ ಚಿಹ್ನೆ, ಹೆಸರು ಮಾಯವಾಗಿದೆ. ಚಿಂದ್ವಾರ ಸಂಸದ ಅನ್ನುವ ಮಾಹಿತಿ ಮಾತ್ರ ಹಾಕಿದ್ದಾರೆ.
ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಮಧ್ಯಪ್ರದೇಶ ಪ್ರವೇಶ ಪಡೆಯುತ್ತಿದ್ದಂತೆ ನಕುಲ್ ಕಮಲ್ ನಾಥ್ ಬಿಜೆಪಿ ಸೇರಿಕೊಳ್ಳಲಿದ್ದಾರೆ. ಆ ಮೂಲಕ ಕಾಂಗ್ರೆಸ್‌ಗೆ ಶಾಕ್ ನೀಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಮಲ್‌ನಾಥ್ ಸಂಪರ್ಕಿಸದೆ ಗ್ವಾಲಿಯರ್ ಚಂಪಾಲ್ ನಾಯಕ ಅಶೋಕ್ ಸಿಂಗ್‌ಗೆ ಟಿಕೆಟ್ ನೀಡಿದ್ದಾರೆ. ಇದರಿಂದ ಕಮಲನಾಥ್ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಕಮಲ್ ನಾಥ್ ಕೂಡ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
#WATCH | On being asked if he is joining the BJP, former Madhya Pradesh CM and Congress leader Kamal Nath says “Why are you all getting excited? It is not about denying. I will inform you all if there is something like that…” pic.twitter.com/REDoRcaWuH
— ANI (@ANI) February 17, 2024
ಬಿಜೆಪಿ ಸೇರುವ ಊಹಾಪೋಹಗಳ ನಡುವೆ ಕಮಲ್‌ನಾಥ್ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನೀವು(ಮಾಧ್ಯಮದವರು) ಯಾಕೆ ಇಷ್ಟೊಂದು ಭಾವೋದ್ವೇಗಕ್ಕೆ ಒಳಗಾಗುತ್ತೀರಾ? ಒಂದು ವೇಳೆ ಅಂಥದ್ದೇನಾದರೂ ಇದ್ದರೆ ಮೊದಲು ನಾನೇ ನಿಮಗೆ ಹೇಳುತ್ತೇನ” ಎಂದು ಹೇಳಿದ್ದಾರೆ.
VIDEO | “If I were to take a decision in this regard, I will inform you (the media) first,” says ex-Madhya Pradesh CM and senior Congress leader Kamal Nath on reports of him joining the BJP.
STORY | Kamal Nath arrives in Delhi amid speculation over switch to BJP
READ:… pic.twitter.com/57PXzNRpal
— Press Trust of India (@PTI_News) February 17, 2024
ಈ ನಡುವೆ ಮಧ್ಯಪ್ರದೇಶದ ಬಿಜೆಪಿ ಮುಖಂಡ ನರೇಂದ್ರ ಸಲುಜಾ ಟ್ವಿಟರ್‌ನಲ್ಲಿ ಕಮಲ್‌ನಾಥ್ ಹಾಗೂ ನಕುಲ್ ಕಮಲ್‌ನಾಥ್ ಅವರ ಫೋಟೋ ಹಂಚಿಕೊಂಡು, ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
जय श्री राम…. pic.twitter.com/x8tf3f4BbJ
— Narendra Saluja (@NarendraSaluja) February 17, 2024
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಧ್ಯಪ್ರದೇಶದಲ್ಲಿ ಬಿಜೆಪಿ 28 ಸ್ಥಾನಗಳನ್ನು ಗೆದ್ದಿತ್ತು. ಛಿಂದವಾಡ ಕ್ಷೇತ್ರದಿಂದ ಪ್ರಭಾವ ಬೀರಿದ್ದ ನಕುಲ್ ಅವರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಏಕೈಕ ಸಂಸದರಾಗಿದ್ದಾರೆ.
ಕಮಲ ನಾಥ್ ಅವರು ಬಿಜೆಪಿಗೆ ಹೋಗುತ್ತಾರೆ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು “ನಾನು ನಿನ್ನೆ ರಾತ್ರಿ 10.30 ಕ್ಕೆ ಕಮಲ್ ನಾಥ್ ಅವರೊಂದಿಗೆ ಮಾತನಾಡಿದ್ದೇನೆ, ಅವರು ಭಿಂದ್ವಾರಾದಲ್ಲಿದ್ದಾರೆ. ಗಾಂಧಿ ನೆಹರೂ ಕುಟುಂಬಕ್ಕೆ ನಿಷ್ಠೆ ಹೊಂದಿರುವ ಅವರು ಪಕ್ಷ ತೊರೆಯುವುದಿಲ್ಲ” ಎಂದು ಹೇಳಿದ್ದಾರೆ.