ಕೊಪ್ಪಳ | ಹಾಲವರ್ತಿ ಗ್ರಾಮದ ಅಸ್ಪೃಶ್ಯತೆ ಆಚರಣೆ ಪ್ರಕರಣ; ಅಧಿಕಾರಿಗಳಿಂದ ಸಂಧಾನ ಸಭೆ

Date:

ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ದಲಿತರನ್ನು ಕರೆದುಕೊಂಡು ದೇವಸ್ಥಾನ ಪ್ರವೇಶ ಮಾಡಿಸಿದ್ದಾರೆ.

ಹಾಲವರ್ತಿ ಗ್ರಾಮದಲ್ಲಿ ದಲಿತರು ಹೋಟೆಲ್‌ ಪ್ರವೇಶಿಸಿದರೆ ಹೋಟೆಲ್‌ ಬಂದ್‌ ಮಾಡಲಾಗುತ್ತಿತ್ತು. ಕ್ಷೌರದ ಅಂಗಡಿ, ದೇವಸ್ಥಾನ ಹಾಗೂ ಕೆರೆ ಪ್ರವೇಶಕ್ಕೆ ನಿರ್ಬಂಧವಿತ್ತು. ಮಾಧ್ಯಮಗಳಲ್ಲಿ ಈ ಕುರಿತು ಬುಧವಾರ ವರದಿ ಪ್ರಕಟವಾದ ಬಳಿಕ, ಜಾತಿ ದೌರ್ಜನ್ಯ ಎಸಗಿದ್ದ ಕ್ಷೌರದ ಅಂಗಡಿಯ ಯಂಕೋಬಾ ಹಡಪದ, ಅಂಜಿನಪ್ಪ ಮತ್ತು ಹೋಟೆಲ್‌ ಮಾಲೀಕ ಸಂಜೀವಪ್ಪ ಗುಳದಳ್ಳಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇವರಲ್ಲಿ ಯಂಕೋಬಾ ಹಾಗೂ ಸಂಜೀವಪ್ಪ ಅವರನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಾಲವರ್ತಿ ಗ್ರಾಮದಲ್ಲಿ ದಲಿತರಿಗೆ ಪ್ರವೇಶ ನಿರ್ಬಂಧಿಸಿದ್ದ ಹೋಟೆಲ್‌ನಲ್ಲಿಯೇ ಅಧಿಕಾರಿಗಳು ಉಪಾಹಾರ ವ್ಯವಸ್ಥೆ ಮಾಡಿದ್ದಾರೆ. ಗ್ರಾಮದೇವತೆ ಮತ್ತು ಆಂಜನೇಯನ ದೇವಸ್ಥಾನಕ್ಕೆ ದಲಿತರನ್ನು ಕರೆದುಕೊಂಡು ಹೋದ ಅಧಿಕಾರಿಗಳು, ಎಲ್ಲರ ಸಮ್ಮುಖದಲ್ಲಿ ದೇವರ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ದೇವಾಲಯ ಪ್ರವೇಶ ಮಾಡಿಸಿದರು” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಗ್ರಾಮದಲ್ಲಿ ಇನ್ನೂ ಕೂಡ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಜನವರಿ 26ರಿಂದ ರಾಜ್ಯ ಸರ್ಕಾರ ಹೊರಡಿಸಿರುವ ಸಂವಿಧಾನ ಜಾಗೃತಿ ಮೆರವಣಿಗೆ ಕಾರ್ಯಕ್ರಮದ ಭಾಗವಾಗಿ, ಸುಮಾರು ಹತ್ತು ದಿನಗಳ ಹಿಂದೆ ಹಾಲವರ್ತಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಮೆರವಣಿಗೆ ನಡೆದಿದೆ. ಇದರಿಂದ ಎಚ್ಚೆತ್ತುಕೊಂಡಿದ್ದ ಗ್ರಾಮದ ತಳಸಮುದಾಯದ ಯುವಜನರು ಅಸ್ಪೃಶ್ಯತೆ ವಿರುದ್ಧ ಸವರ್ಣೀಯರನ್ನು ಪ್ರಶ್ನಿಸಲು ಆರಂಭಿಸಿದರು. ಆದರೆ, ಸವರ್ಣೀಯರು ಯುವಜನರಿಗೆ ಜೀವ ಬೆದರಿಕೆ ನೀಡಿದ್ದು, ಹೋಟೆಲ್‌ಗಳಿಗೆ ಕ್ಷೌರದಂಗಡಿಗಳಿಗೆ ಪ್ರವೇಶಿಸದಂತೆ ತಡೆದಿದ್ದರು. ಆದರೆ ವಿದ್ಯಾವಂತ ಯುವಜನರು ಅಸ್ಪೃಶ್ಯತೆ ಆಚರಣೆ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು” ಎಂದು ಹೇಳಿದರು.

“ದಲಿತರು ಹೋಟೆಲ್‌ಗೆ ಬಂದರೆ ತಿಂದು ಬೀಸಾಡುವ ಪ್ಲೇಟ್‌ನಲ್ಲಿ, ಸವರ್ಣೀಯರು ಹೋಟೆಲ್‌ಗೆ ಬಂದರೆ ಸ್ಟೀಲ್‌ ಪ್ಲೇಟ್‌ನಲ್ಲಿ ಆಹಾರ ಕೊಡುತ್ತಿದ್ದರು. ಕ್ಷೌರಿಕರ ಅಂಗಡಿ ತೆರಳಿದರೆ ಕ್ಷೌರ ಮಾಡುತ್ತಿರಲಿಲ್ಲ. ಪ್ರಶ್ನಿಸಿದರೆ ಬೀಗ ಹಾಕಿಕೊಂಡು ಹೋಗಿಬಿಡುತ್ತಿದ್ದರು” ಎಂದರು.

“ಹಾಲವರ್ತಿ ಗ್ರಾಮದವರೊಬ್ಬರಿಗೆ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿದೆ. ಇದರಿಂದ ಕ್ಷೌರ ಮಾಡಿಸಿಕೊಳ್ಳಲು ಬೇರೆ ಊರಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಿದೆ. ಆದ್ದರಿಂದ ಕ್ಷೌರ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋಗುತ್ತಿದ್ದರು” ಎಂದು ಬೇಸರ ವ್ಯಕ್ತಪಡಿಸಿದರು.

“ಗ್ರಾಮದಲ್ಲಿ ಕೆರೆಯಿದ್ದು ಅಲ್ಲಿನ ನೀರು ದಲಿತರು ಮುಟ್ಟಬಾರದು ಎಂದು ಕೆರೆಗೆ ಕಾವಲುಗಾರನನ್ನು ನಿಯೋಜಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ ‘ಕೆರೆಯ ನೀರು ಕೊಳಚೆಯಾಗಬಾರದೆಂದು ಹೀಗೆ ಮಾಡಿದ್ದೇವೆಂದು ಸಬೂಬು ಹೇಳುತ್ತಾರೆ” ಎಂದು ಆರೋಪಿಸಿದರು.

“ಸಂವಿಧಾನ ಜಾಗೃತಿ ವೇಳೆ ಅಸ್ಪೃಶ್ಯತೆ ಆಚರಣೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಎಲ್ಲ ಹೋಟೆಲ್‌ಗಳ ಮಾಲೀಕರನ್ನು ವಿಚಾರಿಸಿದರು. ಬಳಿಕ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಿಲ್ಲೆಗೂ ಹೆಚ್ಚಿನ ಯೋಜನೆ ಪ್ರಕಟ; ರಾಜ್ಯ ಸರ್ಕಾರ ಜನರ ಹಿತಕ್ಕೆ ಬದ್ಧವಾಗಿದೆ: ಸಚಿವ ಮಧು ಬಂಗಾರಪ್ಪ

“ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ‍್ಟನ್‌ ಮಹೇಶ ಮಾಲಗಿತ್ತಿ ಮತ್ತು ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಅವರು ಗುರುವಾರ ಎಲ್ಲ ಸಮದಾಯಗಳ ಶಾಂತಿ ಸಭೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಈ ರೀತಿಯ ಘಟನೆ ಮುರುಕಳಿಸಿದಂತೆ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮೋದಿ ದುರಾಡಳಿತ ಕೊನೆಗಾಣಿಸಬೇಕು: ಅಪ್ಪಾಸಾಹೇಬ ಯರನಾಳ

ಮೋದಿ ಹಿಟ್ಲರ್ ಶಾಹಿ ಆಡಳಿತ ಕೊನೆಗೊಳ್ಳುವ ಸಮಯ ಬಂದಿದೆ, ಮೋದಿ ಈ...

ತುಮಕೂರು | ಸ್ಟ್ರಾಂಗ್ ರೂಮ್ ಪರಿಶೀಲಿಸಿದ ಜಿಲ್ಲಾಧಿಕಾರಿ

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ಷೇತ್ರ ವ್ಯಾಪ್ತಿಗೆ ಒಳಪಡುವ...

ಚಿಕ್ಕಬಳ್ಳಾಪುರ | ಅನುಚಿತ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಕರಣದಡಿ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್

ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲು ಮನೆಯೊಂದರಲ್ಲಿ ಅಕ್ರಮವಾಗಿ ಹಣ ದಾಸ್ತಾನು ಮಾಡಿದ್ದ...

ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ 29 ರಿಂದ ಆರಂಭ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ತಿಂಗಳಷ್ಟೇ ಪಿಯುಸಿ...