ರೈತರ ಹೋರಾಟ ಆರನೇ ದಿನಕ್ಕೆ ದಾಟಿದೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಗಾಯಗೊಂಡ ಗುರುದಾಸ್‍ಪುರದ ಗ್ಯಾನ್ ಸಿಂಗ್(65) ಹಾಗೂ ರೈತ ಜಿಯಾನ್ ಸಿಂಗ್(63) ವರ್ಷದ ಇಬ್ಬರೂ ರೈತರು ಮೃತಪಟ್ಟಿರುವುದನ್ನು ಖಂಡಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದಿಂದ ರಾಯಚೂರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
“ಹರಿಯಾಣ ಪೊಲೀಸರು ಅಶ್ರುವಾಯು ಸಿಡಿಸಿದ್ದು, ಈ ಘಟನೆಯಲ್ಲಿ ಗ್ಯಾನ್ ಸಿಂಗ್ ಅಸ್ವಸ್ಥಗೊಂಡಿದ್ದರು, ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೇಂದ್ರ ಸರ್ಕಾರ ಮೃತಪಟ್ಟ ಇಬ್ಬರು ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು. ರೈತರ ಮೇಲೆ ಅಶ್ರುವಾಯು ಸಿಡಿ ಗುಂಡುಗಳನ್ನು ಎಸೆಯುವುದನ್ನು ನಿಲ್ಲಿಸಬೇಕು. ಹರಿಯಾಣದ ಪೊಲೀಸರು ರೈತರ ಮೇಲೆ ದೌರ್ಜನ್ಯವನ್ನು ನಿಲ್ಲಿಸಬೇಕು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹೋರಾಟ ಮಾಡಲು ಹಕ್ಕಿದೆ. ಆದ್ದರಿಂದ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ” ಎಂದು ಎಚ್ಚರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂ.ಗ್ರಾಮಾಂತರ | ಕಾಯಕಯೋಗಿ ಬಸವಣ್ಣನವರ ಮಾರ್ಗದರ್ಶನದಲ್ಲಿ ನಡೆಯೋಣ: ಸಚಿವ ಮುನಿಯಪ್ಪ
ಈ ಸಂದರ್ಭದಲ್ಲಿ ಜಿ ಅಮರೇಶ, ಅಜೀಜ್ ಅಡಿವಿ ರಾವ್, ಸೈಯದ್ ಅಬ್ಬಾಸ್ ಅಲಿ, ಲಕ್ಷ್ಮಣ್, ನಿರಂಜನ್ ಕುಮಾರ್, ಆನಂದ್ ಇದ್ದರು.