ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಅರ್ಜಿಯನ್ನು ವಿಚಾರಣೆಗೊಳಪಡಿಸಲು ಒಪ್ಪಿಗೆ ಸೂಚಿಸಿದೆ. ಇತ್ತೀಚಿಗಷ್ಟೆ ಚುನಾವಣಾ ಆಯೋಗವು ಮಹಾರಾಷ್ಟ್ರದ ಅಜಿತ್ ಪವಾರ್ ನೇತೃತ್ವದ ಬಣವನ್ನು ನಿಜವಾದ ಎನ್‌ಸಿಪಿ ಎಂದು ಘೋಷಿಸಿತ್ತು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಕೆ ವಿ ವಿಶ್ವನಾಥನ್ ಅವರಿದ್ದ ಪೀಠವು ಮುಂದಿನ ಆದೇಶ ಬರುವವರೆಗೂ ಚುನವಣಾ ಆಯೋಗ ನೀಡಿದ ಆದೇಶಕ್ಕೆ ಮಧ್ಯಂತರ ಆದೇಶ ನೀಡಿ ಶರದ್ ಪವಾರ್ ಬಣದ ಎನ್‌ಸಿಪಿ ಬಣಕ್ಕೆ ಎನ್‌ಸಿಪಿ ಶರದ್ ಚಂದ್ರ ಪವಾರ್ ಎಂದು ಬಳಸಲು ಅನುಮತಿಸಿದೆ.
ಅರ್ಜಿದಾರರು ಪಕ್ಷದ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗವನ್ನು ಕೋರಲು ಸೂಚಿಸಿತಲ್ಲದೆ, ಅರ್ಜಿ ಸಲ್ಲಿಸಿದ ಒಂದು ವಾರದೊಳಗಾಗಿ ನೀಡಲಾಗುತ್ತದೆ ಎಂಬುದನ್ನು ತಿಳಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತವನ್ನು ಗೆಲ್ಲಿಸಿದ ಬಡವರ ಮಕ್ಕಳ ಬೆರಗಿನ ಆಟ
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಅಜಿತ್ ಪವಾರ್ ಬಣಕ್ಕೆ ನೋಟಿಸ್ ನೀಡಿತು. ಕೋರ್ಟ್ ಮುಂದಿನ ವಿಚಾರಣೆಯನ್ನು ಮೂರು ವಾರಗಳ ನಂತರದ ಅವಧಿಗೆ ಮುಂದೂಡಿದೆ.
ಅರ್ಜಿದಾರ ಶರದ್ ಪವಾರ್ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಬಳಸುವಂತೆ ಕೋರ್ಟ್‌ಗೆ ಮನವಿ ಮಾಡಿದರು.
ಕಳೆದ ವರ್ಷದ ಜುಲೈನಲ್ಲಿ ಅಜಿತ್ ಪವಾರ್ ಹಾಗೂ ಎಂಟು ಇತರ ಶಾಸಕರು ಶರದ್ ಪವಾರ್ ಗುಂಪಿನಿಂದ ಬೇರ್ಪಟ್ಟು ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು. ಫೆ.15ರಂದು ಅಜಿತ್ ಪವಾರ್ ಅವರ ಬಣ ನಿಜವಾದ ಎಂದು ಮಹಾರಾಷ್ಟ್ರ ಸ್ಪೀಕರ್ ಘೋಷಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಿತ್ ಪವಾರ್ ಗುಂಪು ಕೂಡ ಈಗಾಗಲೇ ಕೇವಿಯೇಟ್ ಸಲ್ಲಿಸಿದೆ.
