ಮಂಗಳೂರು ನಗರದ ಜೆರೋಸಾ ಶಾಲೆಯ ಬಗ್ಗೆ ಅಪಪ್ರಚಾರದ ಆಡಿಯೋ ವೈರಲ್ ಮಾಡಿದ ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಶಾಲೆಯ ಶಿಕ್ಷಕಿಗೆ ಕವಿತಾ ಅವರಿಗೆ ಅಲ್ಲಿನ ಶಾಲಾಡಳಿತ ಮಂಡಳಿ ಗೇಟ್ ಪಾಸ್ ನೀಡಿದೆ.
ಕವಿತಾ ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕವಿತಾ ಅವರ ಪುತ್ರಿ ಜೆರೋಸಾ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಜೆರೋಸಾ ಶಾಲೆಯಲ್ಲಿ ಸಿಸ್ಟರ್ ಹಿಂದೂ ಧರ್ಮನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮಾತುಕತೆ ನಡೆಸಿದ ಆಡಿಯೋವೊಂದನ್ನು ಕವಿತಾ ವೈರಲ್ ಮಾಡಿದ್ದರು.
ಈ ಘಟನೆಯ ಬೆನ್ನಿಗೆ ಜೆರೋಸಾ ಶಾಲೆಗೆ ವಿಶ್ವಹಿಂದೂ ಪರಿಷತ್ ಹಾಗೂ ಬಿಜೆಪಿ ಕಾರ್ಯಕರ್ತರು, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮುತ್ತಿಗೆ ಹಾಕಿದ್ದರು. ತನಿಖೆಯ ವೇಳೆ ಈ ಆಡಿಯೋವನ್ನು ಜೆರೋಸಾ ಶಾಲೆಯ ವಿದ್ಯಾರ್ಥಿನಿಯ ಪೋಷಕಿಯಾಗಿರುವ ಕವಿತಾ ಅವರು ಮಾಡಿದ್ದರು ಎಂಬುದಾಗಿ ವಿಷಯ ಬಹಿರಂಗಗೊಂಡಿತ್ತು.
ವಾಸ್ತವವಾಗಿ ಪೋಷಕಿ ಕವಿತಾ ಅವರು ಕೂಡ ಇನ್ನೊಂದು ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು, ಅವರು ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಜೆರೋಸಾ ಶಾಲೆಯ ಪ್ರಕರಣ ವ್ಯಾಪಕ ಪ್ರಚಾರ ಪಡೆದು, ಪರ ವಿರೋಧ ಸಂಘರ್ಷದ ವಾತಾವರಣ ಉಂಟುಮಾಡಿ ಸಮಾಜದ ಸೌಹಾರ್ದಕ್ಕೆ ಧಕ್ಕೆ ಮಾಡಿದೆ ಎಂಬ ಕಾರಣಕ್ಕೆ ಕವಿತಾ ಅವರನ್ನು ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಸೇವೆಯಿಂದ ವಜಾಗೊಳಿಸಿದೆ.
ತನ್ನ ಸೇವೆ ಇನ್ನು ನಮಗೆ ಅಗತ್ಯವಿಲ್ಲ ಎಂದು ಸೆಬಾಸ್ಟಿಯನ್ ಶಾಲೆಯ ಆಡಳಿತ ಮಂಡಳಿ ತಿಳಿಸಿ ನನ್ನನ್ನು ಕಳುಹಿಸಿದ್ದಾರೆ, ನನ್ನ ಸೇವೆ ಅವರಿಗೆ ಅಗತ್ಯವಿಲ್ಲ ಎಂದು ಶಾಲೆಯವರು ನೇರವಾಗಿ ಹೇಳಿರುವುದರಿಂದ ನಾನು ಕೂಡ ಮರು ಪ್ರಶ್ನೆ ಮಾಡದೆ ಉದ್ಯೋಗಕ್ಕಾಗಿ ಬಯಸದೆ ಹೊರ ಬಂದಿದ್ದೇನೆ ಎಂದು ಕವಿತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕವಿತಾರ ಪುತ್ರಿ ಜೆರೋಸಾ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.
ಇನ್ನೊಂದು ಶಾಲೆಯ ಬಗ್ಗೆ ಅಪಪ್ರಚಾರ ನಡೆಸಿದ ಕಾರಣಕ್ಕೆ ತನ್ನ ಶಾಲೆಯ ಶಿಕ್ಷಕಿಯನ್ನು ಸೇವೆಯಿಂದ ವಜಾ ಮಾಡಿದ ಸೆಬಾಸ್ಟಿಯನ್ ಶಾಲಾ ಆಡಳಿತ ಮಂಡಳಿ ಶಾಲೆಯಿಂದ ವಜಾಗೊಂಡ ಬಳಿಕ ವಾಟ್ಸಪ್ ಮೂಲಕ ಬೆದರಿಕೆ ಕರೆ ಬಂದಿರುವ ಬಗ್ಗೆ ಶಿಕ್ಷಕಿ ಕವಿತಾ ದೂರು.
