ಪಶ್ಚಿಮ ಬಂಗಾಳ | ಸಿಖ್ ಐಪಿಎಸ್ ಅಧಿಕಾರಿಯನ್ನು ‘ಖಲಿಸ್ತಾನಿ’ ಎಂದ ಬಿಜೆಪಿಗರು; ಒಂದಾದ ಸಿಖ್ಖರು

Date:

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ವಿವಾದಿತ ಸಂದೇಶಖಲಿ ಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದ ವಿಪಕ್ಷ ಬಿಜೆಪಿ ನಾಯಕರನ್ನು ತಡೆದಾಗ ಗುಂಪಿನಲ್ಲಿದ್ದವರು ಸಿಖ್ ಐಪಿಎಸ್ ಅಧಿಕಾರಿಯನ್ನು ‘ಖಲಿಸ್ತಾನಿ’ ಎಂದು ಕರೆದಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಸಿಖ್ ಐಪಿಎಸ್ ಅಧಿಕಾರಿಯನ್ನು ‘ಖಲಿಸ್ತಾನಿ’ ಎಂದಿರುವ ಹಿನ್ನೆಲೆಯಲ್ಲಿ ಬಿಜೆಪಿಯ ವಿರುದ್ಧ ಸಿಖ್ ಸಮುದಾಯ ಒಂದಾಗಿದ್ದು, ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದೆ.

ವಿವಾದಿತ ಸಂದೇಶಖಲಿ ಪ್ರದೇಶಕ್ಕೆ ಪ್ರವೇಶಿಸಲು ಬಿಜೆಪಿಯ ನಿಯೋಗವೊಂದು ಯತ್ನಿಸುತ್ತಿತ್ತು. ಈ ವೇಳೆ ಸ್ಥಳದಲ್ಲಿ ಸಿಖ್ ಐಪಿಎಸ್ ಅಧಿಕಾರಿ ಜಸ್‌ಪ್ರೀತ್‌ ಸಿಂಗ್ ಎಂಬುವವರು ಭದ್ರತೆಗೆ ನಿಯೋಜನೆಗೊಂಡಿದ್ದರು. ಬಿಜೆಪಿ ನಾಯಕರು ಮುಂದೆ ಹೋಗದಂತೆ ಜಸ್‌ಪ್ರೀತ್‌ ಸಿಂಗ್ ತಡೆದಾಗ ಬಿಜೆಪಿಯ ನಿಯೋಗದಲ್ಲಿದ್ದವರೊಬ್ಬರು ಖಲಿಸ್ತಾನಿ ಎಂದು ಹೇಳಿರುವುದು ಅಧಿಕಾರಿಗೆ ಕೇಳಿಸಿದೆ. ಅಲ್ಲದೇ, ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳ ಕ್ಯಾಮರಾಗಳಲ್ಲಿ ಇದು ಸೆರೆಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ವೇಳೆ ಆಕ್ರೋಶಗೊಂಡ ಜಸ್‌ಪ್ರೀತ್‌ ಸಿಂಗ್, ತಮ್ಮನ್ನು ಖಾಲಿಸ್ತಾನಿ ಎಂದು ಕರೆದದ್ದೇಕೆ ಎಂದು ಪ್ರಶ್ನಿಸಿದರು. “ನಾನು ಸಿಖ್ ಪೇಟ ಧರಿಸಿದ್ದೇನೆಂಬ ಮಾತ್ರಕ್ಕೆ ಖಾಲಿಸ್ತಾನಿ ಎನ್ನುತ್ತೀರಾ?” ಎಂದು ಪ್ರಶ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ನಾನು ಪೇಟ ಧರಿಸಿದ್ದೇನೆಂಬ ಮಾತ್ರಕ್ಕೆ ನನ್ನನ್ನು ಖಾಲಿಸ್ತಾನಿ ಎಂದು ಕರೆಯುತ್ತೀರಾ? ನಿಮಗೆ ಇಷ್ಟೊಂದು ಧೈರ್ಯವೇ? ಪೇಟ ಧರಿಸಿ ಯಾವುದೇ ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರೆ ಅವರು ಖಾಲಿಸ್ತಾನಿ ಆಗುತ್ತಾರೆಯೇ?” ಎಂದು ಅವರು ಸುವೇಂದು ಅಧಿಕಾರಿ ಸಹಿತ ಬಿಜೆಪಿ ಶಾಸಕರಿದ್ದ ತಂಡಕ್ಕೆ ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.

“ನಾನು ನಿಮ್ಮ ಧರ್ಮದ ಬಗ್ಗೆ ಏನೂ ಹೇಳುವುದಿಲ್ಲ. ನೀವೂ ನನ್ನ ಧರ್ಮದ ಬಗ್ಗೆ ಏನೂ ಹೇಳಬಾರದು. ಏಕೆ ಹೀಗೆ ಮಾಡುತ್ತೀರಿ? ನಿಮ್ಮ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳುವೆ” ಎಂದು ಆಕ್ರೋಶಗೊಂಡ ಸಿಖ್ ಐಪಿಎಸ್ ಅಧಿಕಾರಿ ಜಸ್‌ಪ್ರೀತ್‌ ಸಿಂಗ್ ಹೇಳಿದ್ದಾರೆ.

ಈ ವೇಳೆ ಅಧಿಕಾರಿ ಜೊತೆಗಿದ್ದ ಬಿಜೆಪಿ ಶಾಸಕ ಅಗ್ನಿಮಿತ್ರ ಪೌಲ್ ಅವರು ಸಿಂಗ್‌ ಅವರನ್ನು ಉದ್ದೇಶಿಸಿ, “ನಿಮ್ಮ ಕರ್ತವ್ಯ ನಿರ್ವಹಿಸಿ, ಯಾರೋ ಒಬ್ಬರ ಪರ ಏಕೆ ವಹಿಸುತ್ತಿದ್ದೀರಿ?” ಎಂದು ಹೇಳುವುದು ಕೂಡ ಕೇಳಿಸಿದೆ.

ಈ ಘಟನೆಯ ಬಗ್ಗೆ ಸ್ವತಃ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದು, ಬಿಜೆಪಿಯ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಒಂದಾದ ಸಿಖ್ ಸಮುದಾಯದಿಂದ ಪ್ರತಿಭಟನೆ

ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಒಂದಾದ ಸಿಖ್ ಸಮುದಾಯದ ಮುಖಂಡರು, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊಲ್ಕತ್ತಾದಲ್ಲಿರುವ ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಸಿಖ್ ಸಮುದಾಯದ ಜನರು, ಸಿಖ್ ವಿರೋಧಿ ಬಿಜೆಪಿಗರಿಗೆ ಧಿಕ್ಕಾರ ಎಂದು ಕೂಗಿ ಪ್ರತಿಭಟಿಸುತ್ತಿದ್ದಾರೆ.

“ಕರ್ತವ್ಯನಿರತ ಐಪಿಎಸ್ ಅಧಿಕಾರಿಯನ್ನು ಜಸ್‌ಪ್ರೀತ್ ಸಿಂಗ್‌ ಅವರನ್ನು ಖಲಿಸ್ತಾನಿ ಎಂದು ಕರೆಯುವ ಮೂಲಕ ದೇಶಪ್ರೇಮಿಗಳಾದ ಸಿಖ್ ಸಮುದಾಯವನ್ನು ಅವಮಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸಿಖ್ ಸಮುದಾಯದವರಲ್ಲಿ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸಮೀಕ್ಷೆ ನಡೆಸಿ ಪುನರ್ವಸತಿ ಕಲ್ಪಿಸುವಂತೆ ಸ್ಲಂ ಸಮಿತಿ ಒತ್ತಾಯ

ಹೊಸದಾಗಿ ಸಮೀಕ್ಷೆ ನಡೆಸಿ ನೖಜ ಫಲಾನುಭವಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು...

‘ಇಂದ್ರಾಣಿ ಮುಖರ್ಜಿ’ ವೆಬ್‌ ಸೀರೀಸ್ ವೀಕ್ಷಿಸಿದ ಬಾಂಬೆ ಹೈಕೋರ್ಟ್: ಸಿಬಿಐ ಅರ್ಜಿ ತಿರಸ್ಕೃತ

ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಕುರಿತ...

ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಪ್ರವೇಶಕ್ಕೆ ತಡೆಯಾಜ್ಞೆ ವಿಧಿಸಿದ್ದ ಜಿಲ್ಲಾಡಳಿತ: ತೆರವುಗೊಳಿಸಿದ ಹೈಕೋರ್ಟ್‌

ಸಂಘಪರಿವಾರದ ಮುಖಂಡ, ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಕಲಬುರಗಿ ಪ್ರವೇಶಕ್ಕೆ...

1993ರ ಸರಣಿ ಸ್ಪೋಟದ ಪ್ರಮುಖ ಆರೋಪಿಯನ್ನು ಖುಲಾಸೆಗೊಳಿಸಿದ ಟಾಡಾ ಕೋರ್ಟ್

1993ರ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಮ್‌ ತುಂಡಾನನ್ನು...