ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ಸಂಘಟಿತ ಸ್ಪಿನ್ ದಾಳಿಯ ಪರಿಣಾಮ, ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ 219 ರನ್ ಗಳಿಸುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದೆ.
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಜೋ ರೂಟ್ ಶತಕದ ನೆರವಿನಿಂದ ಮೊದಲ ದಿನದಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತ್ತು. ಇಂದು ಮತ್ತೆ ಬ್ಯಾಟಿಂಗ್ ಆರಂಭಿಸಿದ್ದ ಇಂಗ್ಲೆಂಡ್ ಅನ್ನು 353 ರನ್ ಗಳಿಸುವಷ್ಟರಲ್ಲಿ ಟೀಮ್ ಇಂಡಿಯಾ ಆಲೌಟ್ ಮಾಡಿತ್ತು. ನಿನ್ನೆ ಶತಕ ಗಳಿಸಿದ್ದ ಜೋ ರೂಟ್ 122 ರನ್ ಗಳಿಸಿ, ಔಟಾಗದೆ ಉಳಿದರು.
Stumps on Day 2 in Ranchi!
A valuable unbeaten partnership between Dhruv Jurel and Kuldeep Yadav helps #TeamIndia move to 219/7 👏
Scorecard ▶️ https://t.co/FUbQ3MhXfH#INDvENG | @IDFCFIRSTBank pic.twitter.com/fhnl0yrMbP
— BCCI (@BCCI) February 24, 2024
ಟೀಮ್ ಇಂಡಿಯಾ ಪರ ಉತ್ತಮ ಬೌಲಿಂಗ್ ನಡೆಸಿದ ಆಲ್‌ರೌಂಡರ್ ರವೀಂದ್ರ ಜಡೇಜಾ 67ಕ್ಕೆ 4 ವಿಕೆಟ್ ಗಳಿಸಿದರೆ, ಯುವ ಬೌಲರ್ ಆಕಾಶ್ ದೀಪ್ ಮೂರು, ಮೊಹಮ್ಮದ್ ಸಿರಾಜ್ 2 ವಿಕೆಟ್ ಗಳಿಸಿದರೆ, ಆರ್ ಅಶ್ವಿನ್ 1 ವಿಕೆಟ್ ಗಳಿಸಿದರು.
ಇಂಗ್ಲೆಂಡ್‌ನ 353 ರನ್ ಗಳಿಸಿದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಮೂರನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾರ ವಿಕೆಟ್ ಗಳಿಸುವ ಮೂಲಕ ವೇಗಿ ಜೇಮ್ಸ್ ಆ್ಯಂಡರ್‌ಸನ್ ಆಘಾತ ನೀಡಿದರು. ಕೇವಲ 9 ಎಸೆತಗಳಲ್ಲಿ 2 ರನ್ ಗಳಿಸಿದ್ದ ರೋಹಿತ್ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ರೋಹಿತ್ ವಿಕೆಟ್ ಕಳೆದುಕೊಂಡ ವೇಳೆ ಟೀಮ್ ಇಂಡಿಯಾ ಕೇವಲ 4 ರನ್ ದಾಖಲಿಸಿತ್ತು.
ಬಳಿಕ ಕ್ರೀಸ್‌ನಲ್ಲಿದ್ದ ಯಶಸ್ವಿ ಜೈಸ್ವಾಲ್‌ಗೆ ಜೊತೆಯಾದ ಶುಭ್‌ಮನ್ ಗಿಲ್ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿಯು 82 ರನ್‌ಗಳ ಜೊತೆಯಾಟ ನಡೆಸಿತು.
ಗಿಲ್, ಇಂಗ್ಲೆಂಡ್‌ನ ಯುವ ಸ್ಪಿನ್ನರ್ ಬಶೀರ್ ಅವರಿಗೆ ವಿಕೆಟ್ ಒಪ್ಪಿಸುವುದಕ್ಕೂ ಮುನ್ನ 38 ರನ್ ಗಳಿಸಿದರು. ಬಳಿಕ ಬಂದ ರಜತ್ ಪಾಟೀದಾರ್ 17 ರನ್, ರವೀಂದ್ರ ಜಡೇಜಾ 12 ರನ್ ಅವರನ್ನೂ ಕೂಡ ತನ್ನ ಸ್ಪಿನ್ ಬಲೆಗೆ ಬೀಳಿಸಿದ ಸ್ಪಿನ್ನರ್ ಬಶೀರ್, ಅರ್ಧಶತಕ ಗಳಿಸಿ ಮುಂದುವರಿಯುತ್ತಿದ್ದ ಯಶಸ್ವಿ ಜೈಸ್ವಾಲ್ ಅವರನ್ನೂ ಕೂಡ ಕ್ಲೀನ್ ಬೌಲ್ಡ್ ಮಾಡಿದರು. ಆ ಮೂಲಕ ಒಟ್ಟು 4 ವಿಕೆಟ್ ಗಳಿಸುವಲ್ಲಿ ಸಫಲರಾದರು.
ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಯುವ ಬ್ಯಾಟರ್ ಸರ್ಫರಾಝ್ ಖಾನ್ 14 ರನ್ ಗಳಿಸಿ, ಸ್ಪಿನ್ನರ್ ಹಾರ್ಟ್‌ಲೀಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಅಶ್ವಿನ್ (1 ರನ್) ಅವರನ್ನೂ ಕೂಡ ಹಾರ್ಟ್‌ಲೀ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಇಂಗ್ಲೆಂಡ್‌ನ ಸಂಘಟಿತ ದಾಳಿಗೆ ಕುಸಿದ ಟೀಮ್ ಇಂಡಿಯಾ 177 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತ್ತು.
ಈ ವೇಳೆ ಯುವ ಬ್ಯಾಟರ್, ವಿಕೆಟ್ ಕೀಪರ್ ಧ್ರುವ್ ಜುರೆಲ್ ಹಾಗೂ ಬೌಲರ್ ಕುಲ್‌ದೀಪ್ ಯಾದವ್ ರಕ್ಷಣಾತ್ಮಕ ಆಟವಾಡುವ ಮೂಲಕ ಎರಡನೇ ದಿನ ಆಲೌಟ್ ಆಗುವುದರಿಂದ ತಪ್ಪಿಸಿದ್ದಾರೆ. ಈ ಜೋಡಿಯು 42 ರನ್‌ಗಳ ಜೊತೆಯಾಟ ನಡೆಸಿದೆ. ಆ ಮೂಲಕ ದಿನದಾಟದ ಅಂತ್ಯದ ವೇಳೆ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು 219 ರನ್ ದಾಖಲಿಸಿದೆ. ಆ ಮೂಲಕ ಇನ್ನೂ 134 ರನ್‌ಗಳ ಹಿನ್ನಡೆಯಲ್ಲಿದೆ. ಸದ್ಯ ವಿಕೆಟ್ ಕೀಪರ್ ಧ್ರುವ್ ಜುರೆಲ್ 30 ರನ್ ಹಾಗೂ ಕುಲ್‌ದೀಪ್ ಯಾದವ್ 17 ರನ್ ಗಳಿಸಿ, ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Shoaib Bashir’s best day in cricket so far, but Jurel and Kuldeep stopped England’s charge in the last hour #INDvENG
▶️ https://t.co/N9hKxN5o8f pic.twitter.com/UzHhZjj6i6
— ESPNcricinfo (@ESPNcricinfo) February 24, 2024
ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ 32 ಓವರ್ ಎಸೆದಿರುವ ಯುವ ಸ್ಪಿನ್ನರ್ ಬಶೀರ್ 82ಕ್ಕೆ 4 ವಿಕೆಟ್ ಪಡೆದರೆ, ಹಾರ್ಟ್‌ಲೀ 47ಕ್ಕೆ 2 ವಿಕೆಟ್ ಪಡೆದಿದ್ದಾರೆ. ಜೇಮ್ಸ್ ಆ್ಯಂಡರ್‌ಸನ್ ಒಂದು ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 117 ಎಸೆತಗಳನ್ನು ಎದುರಿಸಿ 1 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 73 ರನ್ ಬಾರಿಸಿದರು. ಈ ರನ್ಗಳೊಂದಿಗೆ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 600+ ರನ್ ಕಲೆಹಾಕಿದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಂಡರು.
Yashasvi Jaiswal has completed 600 runs in this Test series.
– Nobody else has even scored 300 runs. 🤯🔥 pic.twitter.com/Cfc8D74lBk
— Mufaddal Vohra (@mufaddal_vohra) February 24, 2024
ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. 2002ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಾಹುಲ್ ದ್ರಾವಿಡ್ 6 ಇನಿಂಗ್ಸ್ಗಳಲ್ಲಿ 602 ರನ್, 2016ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ, 8 ಇನಿಂಗ್ಸ್ಗಳ ಮೂಲಕ 655 ರನ್ ಬಾರಿಸಿದ್ದರು. ಇವರಿಬ್ಬರೂ ಬಲಗೈ ಬ್ಯಾಟರ್‌ಗಳು.
Jaiswal needs just 38 more runs to take Kohli’s record for the most runs for India in a Test series against England 👊 #INDvENG pic.twitter.com/7htpnklcqf
— ESPNcricinfo (@ESPNcricinfo) February 24, 2024
ಸದ್ಯ ಟೆಸ್ಟ್ ಸರಣಿಯೊಂದರಲ್ಲಿ ಟೀಮ್ ಇಂಡಿಯಾ ಪರ 600+ ರನ್ ಕಲೆಹಾಕಿದ ಮೊದಲ ಎಡಗೈ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ನಿರ್ಮಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಈವರೆಗೆ 103 ಸರಾಸರಿಯಲ್ಲಿ 618 ರನ್ ದಾಖಲಿಸಿದ್ದಾರೆ.
