ಗಲೀಜು ಬಟ್ಟೆ ಕಾರಣಕ್ಕೆ ರೈತನನ್ನು ಮೆಟ್ರೋಗೆ ಹತ್ತಲು ಬಿಡದ ಸಿಬ್ಬಂದಿ: ವಿಡಿಯೋ ವೈರಲ್ ಬಳಿಕ ಸೇವೆಯಿಂದ ವಜಾ

Date:

Advertisements

ಮೂಟೆ ಹೊತ್ತುಕೊಂಡು ರೈತನೋರ್ವ ಮೆಟ್ರೋ ರೈಲಿಗೆ ಹತ್ತುವಾಗ ಮೆಟ್ರೋ ಸಿಬ್ಬಂದಿ ಗಲೀಜು ಬಟ್ಟೆ ಹಾಕಿದ್ದಾನೆ ಎಂದು ಅವರನ್ನು ಒಳಗೆ ಬಿಡದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು, ಸಿಬ್ಬಂದಿಯನ್ನು ಸೇವೆಯಿಂದಲೇ ವಜಾಗೊಳಿಸಿದ್ದಾರೆ.

ತಲೆ ಮೇಲೆ ಮೂಟೆ ಹೊತ್ತು, ಗಲೀಜು ಬಟ್ಟೆ ಹಾಕಿದ್ದಾನೆ ಅನ್ನುವ ಒಂದೇ ಕಾರಣಕ್ಕೆ ರೈತನನ್ನು ನಮ್ಮ ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ. ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಫೆ.24ರಂದು ಈ ಘಟನೆ ನಡೆದಿದೆ.

ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ ಎನ್ನುವ ವಿಡಿಯೋ ವೈರಲ್ ಆಗಿದೆ.

Advertisements

ಸಿಬ್ಬಂದಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ ಸ್ಥಳದಲ್ಲಿದ್ದ ಕಾರ್ತಿಕ್ ಸಿ ಐರಾನಿ ಎಂಬ ಯುವಕ, ಇದನ್ನು ಪ್ರಶ್ನಿಸಿದ್ದಾನೆ.

“ಗಲೀಜು ಬಟ್ಟೆಗೆ ಹಾಕಿದರೆ ಮೆಟ್ರೋದಲ್ಲಿ ಪ್ರವೇಶಿಸುವಂತಿಲ್ಲ ಏನಾದರೂ ಬೋರ್ಡ್‌ ಇದೆಯೇ?ಇದು ಸಾರ್ವಜನಿಕ ಸಾರಿಗೆ. ಇದು ವಿಐಪಿಗಳ ಸಾರಿಗೆ ಅಲ್ಲ. ನಾನು ಚೆನ್ನಾಗಿರುವ ಬಟ್ಟೆ ಹಾಕಿದ್ದೇನೆ. ನನಗೆ ಉಚಿತ ಪ್ರವೇಶ ನೀಡುತ್ತೀರಾ?” ಎಂದು ಕಾರ್ತಿಕ್ ಸ್ಥಳದಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಯುವಕ ಕೂಡ ಧ್ವನಿಗೂಡಿಸಿದ್ದರಿಂದ ಸಿಬ್ಬಂದಿ ಮೌನವಾಗಿದ್ದಾರೆ. ಕೊನೆಗೂ ಯುವಕ ಕಾರ್ತಿಕ್ ಆ ರೈತನನ್ನು ಕರೆದುಕೊಂಡು ಒಳಪ್ರವೇಶಿಸಿದ್ದಾರೆ. ಘಟನೆಯ ಎಲ್ಲವನ್ನೂ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು. ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮೆಟ್ರೋ ಸಿಬ್ಬಂದಿಗಳ ವರ್ತನೆಗೆ ಕಿಡಿಕಾರಿದ್ದರು. ರೈತ ರಾಜಾಜಿನಗರದಿಂದ ಯಾವ ಸ್ಟೇಷನ್‌ಗೆ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ವಿಡಿಯೋ ವೈರಲಾದ ಬಳಿಕ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್ ಅಧಿಕಾರಿಗಳು, “ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ , ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ” ಎಂದು ಸೋಮವಾರ(ಫೆ.26) ಅಧಿಕೃತ ಹೇಳಿಕೆ ನೀಡಿದೆ.

“ಮೆಟ್ರೋ ಒಳಗೆ ರೈತನನ್ನು ಬಿಡದ ಭದ್ರತಾ ಮೇಲ್ವಿಚಾರಕನನ್ನು ಕೂಡಲೇ ವಜಾಗೊಳಿಸಲಾಗಿದೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುವುದು” ಎಂದು ಮೆಟ್ರೋ ಹಿರಿಯ ಅಧಿಕಾರಿ ಯಶವಂತ ಚವ್ಹಾಣ್ ಭರವಸೆ ನೀಡಿದ್ದಾರೆ.

ಯುವಕ ಕಾರ್ತಿಕ್ ನಡೆಗೆ ವ್ಯಾಪಕ ಪ್ರಶಂಸೆ

ಸಿಬ್ಬಂದಿಗಳ ಈ ನಡೆಯ ವಿರುದ್ಧ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲೇ ಸುಮಾರು 15 ನಿಮಿಷ ನಿಂತು ಪ್ರಶ್ನಿಸಿ, ರೈತನನ್ನು ಮೆಟ್ರೋದಲ್ಲಿ ಪ್ರಯಾಣ ಮಾಡುವಂತೆ ನೆರವಾದ ಯುವಕ ಕಾರ್ತಿಕ್ ನಡೆಗೆ, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಈ ಬಗ್ಗೆ ಹಲವು ಮಂದಿ ಕಮೆಂಟ್ ಮಾಡಿದ್ದು, ತನ್ನೆದುರು ನಡೆದ ಅನ್ಯಾಯವನ್ನು ಪ್ರಶ್ನಿಸಿ, “ರೈತನ ಪರವಾಗಿ ನಿಂತಿದ್ದು ಸರಿಯಾದ ನಡೆ. ಸಾರ್ವಜನಿಕ ಸಾರಿಗೆ ಅನ್ನೋದನ್ನು ಸಿಬ್ಬಂದಿಗಳಿಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸರಿಯಾದ ತರಬೇತಿ ನೀಡಬೇಕು. ಆಗ ಮಾತ್ರ ಇಂಥದ್ದನ್ನೆಲ್ಲ ತಡೆಯಬಹುದು” ಎಂದು ತಿಳಿಸಿದ್ದಾರೆ.

“ಸಿಬ್ಬಂದಿಯನ್ನು ವಜಾಗೊಳಿಸುವುದರಿಂದ ನೀವು ಸಾಧಿಸುವುದು ಏನಿಲ್ಲ. ಆತನಿಗೂ ಹೆಂಡತಿ ಮಕ್ಕಳಿರುತ್ತಾರೆ. ಒಬ್ಬರ ಅನ್ನ ಕಿತ್ತುಕೊಳ್ಳುವುದೂ ಕೂಡ ತಪ್ಪೇ. ನಡೆದ ಘಟನೆ ಯ ಬಗ್ಗೆ ತನಿಖೆ ನಡೆಸಿ, ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸಿ, ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಿ. ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಿ” ಎಂದು ಕೂಡ ಕೆಲವರು ಸಿಬ್ಬಂದಿಯನ್ನು ನಡೆಯನ್ನು ಖಂಡಿಸುವುದರ ಜೊತೆಗೆ ಜಾಗೃತಿ ಮೂಡಿಸುವಂತೆ ಚೈತ್ರಾ ದೇವರಾಜ್ ಎಂಬುವವರು ಮೆಟ್ರೋ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X