ಪರಿಹಾರಕ್ಕೆ ಹಣವಿಲ್ಲ, ಜಾಹೀರಾತಿಗೆ ಹಣವಿದೆ ಎಂದು ಸರ್ಕಾರ ಕುಟುಕಿದ ಕುಮಾರಸ್ವಾಮಿ

Date:

“ರಾಜ್ಯದ ರೈತರು ನಷ್ಟದಲ್ಲಿದ್ದಾರೆ, ಪರಿಹಾರ ಕೊಡೋಕೆ ಸರ್ಕಾರದ ಬಳಿ ಹಣವಿಲ್ಲ. ಆದ್ರೆ, ಜಾಹೀರಾತು ಕೊಡೋಕೆ ಬಜೆಟ್​ನಲ್ಲಿ 200 ಕೋಟಿ ರೂ. ಅನುದಾನ ಪಡೆಯುತ್ತಾರೆ. ಜಾಹೀರಾತಿನಲ್ಲಿ ಇರುವ ಕಲರ್ ಫೋಟೋ ನೋಡಿದ್ರೆ ಹೇಸಿಗೆ ಆಗುತ್ತದೆ” ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹರಿಹಾಯ್ದರು.

ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ರಾಜ್ಯದ ಜನತೆ ಕಾಂಗ್ರೆಸ್​ನ ಕೆಟ್ಟ ಸರ್ಕಾರ ತೆಗೆಯಬೇಕಿದೆ. ಸರ್ಕಾರದವರು ಯಾರಪ್ಪನ ದುಡ್ಡಲ್ಲಿ ಜಾಹೀರಾತು ಕೊಡ್ತಿದ್ದಾರೆ?” ಎಂದು ಕಿಡಿಕಾರಿದರು.

“ರೈತರಿಗೆ ತಲಾ 2 ಸಾವಿರ ಕೊಡ್ತೀವಿ ಅಂತ 620 ಕೋಟಿ ಮೀಸಲಿಟ್ಟಿದ್ದಾರೆ. ಅದರಲ್ಲಿ 75 ಪರ್ಸೆಂಟ್ ಕೇಂದ್ರದ್ದು, 25 ಪರ್ಸೆಂಟ್ ರಾಜ್ಯದ್ದು. ರೈತರ ಸಾಲಮನ್ನಾ ಮಾಡಿದ ಬಳಿಕ ನಾನು ಜಾಹೀರಾತು ಎಲ್ಲೂ ಹಾಕಿಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ ಬೇಕಾದ್ರೆ ಇನ್ನು 2 ಸಾವಿರ ಹೆಚ್ಚಿಗೆ ಕೊಡಲಿ. ಸರ್ಕಾರ ಗ್ಯಾರಂಟಿ ಬಗ್ಗೆ ಕನವರಿಕೆ ಮಾಡಿ ಖಜಾನೆ ಖಾಲಿ ಮಾಡಿಕೊಳ್ತಿದ್ದಾರೆ” ಎಂದು ಆರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಲೋಕಸಭಾ ಚುನಾವಣೆಯಲ್ಲಿ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಹೆಸರು ಸಹ ಕೇಳಿ ಬರ್ತಿದೆ. ಈ ಬಾರಿ ಕೋಲಾರ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಸೀಟ್ ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಬೇಕು. ಸಂಸದ ಮುನಿಸ್ವಾಮಿ ಸಹ ನಿರೀಕ್ಷೆ ಇಟ್ಟಿದ್ದಾರೆ, ಅಂತಿಮವಾಗಿ ಪಟ್ಟಿ ಬರಲಿದೆ. ಮುನಿಸ್ವಾಮಿ ಸಹ ಸಮರ್ಥರಿದ್ದಾರೆ” ಎಂದು ಹೇಳಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಎಡಬಿಡಂಗಿತನ,, ಗ್ಯಾರಂಟಿ ಘೋಷಣೆ ಮಾಡಿದಾಗ ರಾಜ್ಯ ದಿವಾಳಿ ಎಂದು ಗಂಟಲು ಹರಕೊಂಡು ಒದರಿದರು,,ಈಗ ಗ್ಯಾರಂಟಿ ಫಲಾನುಭವಿಗಳು ಗೇಲಿ ಮಾಡಿದವರಿಗೆ ತಿರುಗಿ ಗೂಟಾ ಇಡಬಹುದೆಂಬ ಭಯದಿಂದ ತಮ್ಮ ಮಾತಿಗೆ ತಾವೇ ಬೆಲೆ ಕೊಡದಂತೆ ಒದರುವರು

  2. ಕುಮಾರಣ್ಣ ಗೃಹಲಕ್ಷ್ಮಿ ಯೋಜನೆಯಿಂದ ಇನ್ನು 2000 ರೂ ಹೆಚ್ಚಿಗೆ ಕೊಡಿ ಅಂತ ಕೇಳ್ತಾ ಇರೋದ್ರಲ್ಲೆ ಅವರ ನೋವು ಅರ್ಥ ಆಗುತ್ತೆ. ಪಾಪ ಕುಮಾರಣ್ಣನಿಗೆ ಇಬ್ಬರೆಂಡಿರ್ಲ್ವ! ಅದಕ್ಕೆ ಸರ್ಕಾರದ ಮುಂದೆ ಡಿಮ್ಯಾಂಡ್ ಇಡ್ತಾವ್ರೆ!

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಪ್ರಕಾಶ್ ಅಂಬೇಡ್ಕರ್‌ಗೆ ಎಐಎಂಐಎಂ ಬೆಂಬಲ: ಓವೈಸಿ

ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ವಂಚಿತ್ ಬಹುಜನ ಅಘಾಡಿ...

ಕೇಂದ್ರ ಸರ್ಕಾರ ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ: ರಾಹುಲ್‌ ಗಾಂಧಿ ವಾಗ್ದಾಳಿ

"ಕೇಂದ್ರ ಸರ್ಕಾರ 20-25 ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ. ಉದ್ಯಮಿಗಳ...

ನರೇಂದ್ರ ಮೋದಿಯೇ ಭಾರತದ ದೊಡ್ಡ ಸಮಸ್ಯೆ: ಎಂ ಕೆ ಸ್ಟಾಲಿನ್

ಪ್ರಸ್ತುತ ಭಾರತದ ದೊಡ್ಡ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿದ್ದಾರೆ...

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ

ಪೊಲೀಸ್‌ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ...