ಬಾಗಲಕೋಟೆ | 70ರ ದಶಕದ ದಲಿತ ಚಳವಳಿ ನಮಗೆ ದಾರಿ ತೋರಿಸಿ, ಎಚ್ಚರಿಸುತ್ತದೆ: ಪರಶುರಾಮ ನಿಲಾನಾಯಕ

Date:

Advertisements

70ರ ದಶಕದ ಅಂದಿನ ದಲಿತ ಚಳವಳಿಯ ಹೋರಾಟ ಎಂದಿಗೂ ನಮಗೆ ಸ್ಪೋರ್ತಿದಾಯಕ. ಜಿಲ್ಲೆಯ ತಳಸಮುದಾಯಗಳನ್ನು ಒಂದಡೆ ಸೇರಿಸಿ ಅವರಿಗೆ ಹೋರಾಟದ ದಾರಿಯನ್ನು ತೋರಿಸಿ, ಎಚ್ಚರಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ನಾಯಕ ಪರಶುರಾಮ ನಿಲಾನಾಯಕ ಹೇಳಿದರು.

ದಲಿತ ಸಂಘರ್ಷ ಸಮೀತಿ (ಭೀಮವಾದ) ಜಿಲ್ಲಾ ಸಮಿತಿಯು ಬಾಗಲಕೋಟೆಯ ನವನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ದಲಿತ ಚಳುವಳಿಗೆ ಅಡಿಪಾಯ ಹಾಕಿದ ಕೀರ್ತಿ ರಾಜ್ಯದ ನಮ್ಮ ನಿಮ್ಮಲ್ಲೆರ ನಾಯಕ ಪ್ರೊ. ಬಿ.ಕೃಷ್ಣಪ್ಪರವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಅವರ ಜೊತೆಗೂಡಿ ಅನೇಕ ಹಿರಿಯರು ಹೋರಾಟಗಾರರು ಅನ್ನ ಆಹಾರವಿಲ್ಲೆದೆ ಹಳ್ಳಿಹಳ್ಳಿಗೆ ಬೇಟಿನೀಡಿ ದಲಿತರ ಸಮಸ್ಯೆಗಳನ್ನು ಆಲಿಸಿ, ಅರಿತು ಹೊರಟದ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತ ಬಂದರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು.

Advertisements

ಬಾಗಲಕೋಟ ಜಿಲ್ಲೆಯ ಎಲ್ಲಾ ತಾಲೂಕು ಮುಖಂಡರು ಬಂದಿದ್ದಿರಿ ಪ್ರೊ. ಬಿ.ಕೃಷ್ಣಪ್ಪರವರು ವಿಚಾರಗಳನ್ನು ಗಲ್ಲಿ ಗಲ್ಲಿಗೆ ತಲುಪಿಸುವ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕಾರ್ಯಕರ್ತರಿಗೆ ಹೇಳಿದರು.

ದಲಿತ ಸಂಘರ್ಷ ಸಮೀತಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದವರಿಗೆ ಸಾಮೂಹಿಕ ಮದುವೆಗಳನ್ನು ಕಳೆದ 14 ವರ್ಷಗಳಿಂದ ಮಾಡುತ್ತ ಬರುತ್ತಿದೆ. ಈ ವರ್ಷ ವು ಅತ್ಯಂತ ಯಶಸ್ವಿಯಾಗಿ ನೆರೆವೆರಿಸೋಣ ಎಂದ ಅವರು, ಬರುವ ಏಪ್ರಿಲ್ 14, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ನಾವೆಲ್ಲರೂ ಸೇರಿ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ದುಂಡುವಯ್ಯ, ಡಿ. ಸಿದ್ದುರಾಜ, ಪ್ರಕಾಶ, ಶ್ಯಾಮ್ ಕಾಳೆ, ಯಲ್ಲಪ್ಪ ಹಳೆಮನಿ, ಕಲ್ಲಪ್ಪ ಚನ್ನವರ, ಪಡಿಯಪ್ಪ ಕಳ್ಳಿಮನಿ, ಸಂಜು ಕರೆನ್ನವರ, ಶಿವಶರಣಪ್ಪ ವಾಡಿ, ಕೆ. ನಾಗರಾಜ್ ಇತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X