ತಮಿಳುನಾಡಿನ ಗ್ರಾಮೀಣ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 32,900 ನೈರ್ಮಲ್ಯ ಸಿಬ್ಬಂದಿಗೆ ಜೀವನ ನೆಡೆಸುವುದೇ ದುಸ್ತರವಾಗಿದೆ. ನಿತ್ಯ ಹತ್ತಾರು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಇವರು ಕಳೆದ 10 ವರ್ಷಗಳಿಂದ ಕೇವಲ 100 ರೂ. ವೇತನ ಪಡೆಯುತ್ತಿದ್ದಾರೆ. ದುಃಖದ ವಿಷಯವೆಂದರೆ ಸಿಗುವ 100 ರೂ. ಕೂಡ ಬಹುತೇಕರಿಗೆ ನೀಡಲಾಗುತ್ತಿಲ್ಲ.
ಗ್ರಾಮೀಣ ಪ್ರಾಥಮಿಕ ಶಾಲೆಗಳ ನೈರ್ಮಲ್ಯ ಕಾರ್ಮಿಕರಿಗೆ ತಿಂಗಳಿಗೆ 100 ರೂ. ವೇತನ ಪಡೆದರೆ, ಮಾಧ್ಯಮಿಕ ಶಾಲೆಗಳಲ್ಲಿ 1500 ರೂ., ಪ್ರೌಢಶಾಲೆಗಳಲ್ಲಿ 2250 ರೂ., ಹಾಗೂ ಉನ್ನತ ಮಾಧ್ಯಮಿಕ ಶಾಲೆಗಳ ಕಾರ್ಮಿಕರಿಗೆ 3000 ರೂ. ವೇತನ ನೀಡಲಾಗುತ್ತಿದೆ.
ನಾಮಕ್ಕಲ್ ಜಿಲ್ಲೆಯ 400 ವಿದ್ಯಾರ್ಥಿಗಳಿರುವ ಸರ್ಕಾರಿ ಉನ್ನತ ಮಾಧ್ಯಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ನಿತ್ಯ 30 ಮೂತ್ರಾಲಯಗಳು ಹಾಗೂ 20 ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ನೈರ್ಮಲ್ಯ ಕೆಲಸಕ್ಕಾಗಿಯೇ ದಿನಕ್ಕೆ ಮೂರಕ್ಕೂ ಹೆಚ್ಚು ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಇವರಿಗೆ ಸಿಗುವ ವೇತನ ಕೇವಲ 3 ಸಾವಿರ ರೂ. ಮಾತ್ರ.
“ನನ್ನ ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುವ ಕಾರಣಕ್ಕಾಗಿ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ವೇತನವು ತುಂಬಾ ಕಡಿಮೆಯಾಗಿದ್ದು, ನಿಯಮಿತವಾಗಿ ಕೂಡ ನೀಡುತ್ತಿಲ್ಲ. ಕೆಲವು ಬಾರಿ 10 ತಿಂಗಳಾದರೂ ವೇತನ ನೀಡುವುದಿಲ್ಲ” ಎಂದು ನಾಮಕ್ಕಲ್‌ನಲ್ಲಿ ಕಾರ್ಯನಿರ್ವಹಿಸುವ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ
2023-24ನೇ(ಏಪ್ರಿಲ್‌ವೆರೆಗೂ) ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯು ನೈರ್ಮಲ್ಯ ಕಾರ್ಮಿಕರ ವೇತನ ಹಾಗೂ ಪಂಚಾಯತ್ ಯೂನಿಯನ್ ಶಾಲೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತಾ ಉಪಕರಣಗಳ ಖರೀದಿಗಾಗಿ 62.7 ಕೋಟಿ ರೂ. ಮಂಜೂರು ಮಾಡಿದೆ.
2022-23ರಲ್ಲಿ 63 ಕೋಟಿ ರೂ ಮಂಜೂರು ಮಾಡಲಾಗಿತ್ತು.ಅಂಕಿಅಂಶಗಳ ವರದಿಗಳ ಪ್ರಕಾರ ಶಾಲೆಗಳ ನೈರ್ಮಲ್ಯಕ್ಕಾಗಿ 2015ರಿಂದಲೂ ಇಷ್ಟೆ ಅನುದಾನವನ್ನು ನೀಡಲಾಗುತ್ತಿದೆ.
ಗ್ರಾಮೀಣ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹೇಳುವ ಪ್ರಕಾರ ಕಳೆದ ಒಂದು ದಶಕದಿಂದ ವೇತನವನ್ನು ಪರಿಷ್ಕರಣೆ ಮಾಡಿಲ್ಲ. ವೇತನ ತುಂಬ ಕಡಿಮೆ, ಅನಿಯಮಿತವಾಗಿದೆ. ಇದರಿಂದಾಗಿ ಹಲವು ಕಾರ್ಮಿಕರು ತಮ್ಮ ಕೆಲಸವನ್ನು ಬಿಟ್ಟು ಹೋಗುತ್ತಿದ್ದಾರೆ ಎನ್ನುತ್ತಾರೆ. ಇನ್ನೂ ಕೆಲವು ಶಾಲೆಗಳಲ್ಲಿ ಶಿಕ್ಷಕರೆ ಹೆಚ್ಚುವರಿಯಾಗಿ ತಮ್ಮ ಹಣದಿಂದ ನೈರ್ಮಲ್ಯ ಕಾರ್ಮಿಕರಿಗೆ ಗೌರವಾನ್ವಿತ ವೇತನ ನೀಡುತ್ತಿದ್ದಾರೆ.
ಸ್ನಾತಕೋತ್ತರ ಪದವಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಎ ರಾಮು, ಪ್ರತಿ ಶಾಲೆಗೆ ಇಬ್ಬರು ನೈರ್ಮಲ್ಯ ಕಾರ್ಮಿಕರು, ಓರ್ವ ಭದ್ರತಾ ಸಿಬ್ಬಂದಿ ಹಾಗೂ ಒಬ್ಬರು ಕಚೇರಿ ಸಹಾಯಕರನ್ನು ಸರ್ಕಾರದಿಂದ ನೇಮಿಸುವಂತೆ ನಮ್ಮ ಸಂಘಟನೆ ಬೇಡಿಕೆಯಿಟ್ಟಿದೆ. ಮನ್‌ರೇಗಾ ಯೋಜನೆಯಡಿ 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ನಿರ್ಮಲ್ಯ ಕೆಲಸಗಾರರಿಗೆ ನಿತ್ಯ 300 ರೂ. ವೇತನ ನೀಡಬೇಕು.ರಾಜ್ಯ ಸರ್ಕಾರ ನೈರ್ಮಲ್ಯ ಕೆಲಸಗಾರರಿಗೆ ತಿಂಗಳಿಗೆ 10 ಸಾವಿರ ರೂ. ವೇತನ ನಿಗದಿಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.