ಕೇವಲ ಒಂದು ವರ್ಷದ ಅವಧಿಯಲ್ಲಿ ದ್ವಾರಹಳ್ಳಿಯಲ್ಲಿ ಅಡಿಕೆ ತೋಟಕ್ಕೆ ಬೆಂಕಿ ಬಿದ್ದಿದ್ದು, ಆನವಟ್ಟಿಯಲ್ಲಿ ಕಬ್ಬಿಣದ ಅಂಗಡಿ ಬೆಂಕಿಗೆ ಆಗುತಿಯಾಗಿದೆ. ಬಿಳಗಲಿಯಲ್ಲಿ ತೋಟಕ್ಕೆ ಬೆಂಕಿ ಹೊತ್ತಿಕೊಂಡು ನಾಶವಾಗಿರುವ ಘಟನೆಗಳು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದಿವೆ.
ಸೊರಬದಲ್ಲಿ ಒಂದೇ ಒಂದು ಅಗ್ನಿಶಾಮಕ ಠಾಣೆಯಿದ್ದು, ಒಂದೇ ಒಂದು ಅಗ್ನಿಶಾಮಾಕ ವಾಹನ ಇದೆ. ಇನ್ನೊಂದು ವಾಹನ ಸರಿಯಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ಆನವಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಗ್ನಿಶಾಮಕ ವಾಹನ ಬರಬೇಕೆಂದರೆ ಶಿವಮೊಗ್ಗದಿಂದ ಬರಬೇಕು ಇಲ್ಲ, ಹಾನಗಲ್‌ನಿಂದ ಬರಬೇಕು. ಅಷ್ಟರಲ್ಲಿ ಬಹಳಷ್ಟು ಅನಾಹುತಗಳು ನಡೆದಿರುತ್ತವೆ. ಅಂತಹ ಸಂದರ್ಭದಲ್ಲಿ ಅಗ್ನಿಶಾಮಕ ವಾಹನ ಮತ್ತು ಅಗ್ನಿಶಾಮಕ ಠಾಣೆಯ ಅವಶ್ಯಕತೆ ಹೇರಳವಾಗಿದೆ. ಹಾಗಾಗಿ ಆನವಟ್ಟಿಗೆ ಉಪಶಾಖೆ ನೀಡಬೇಕು” ಎಂದು ಒತ್ತಾಯಿಸಿದರು.
ಹಾಗೆಯೇ ಇಲ್ಲಿ ಹೈವೇ ಕೂಡ ಹಾದು ಹೋಗಿದೆ. ಆನವಟ್ಟಿಯಿಂದ ಹುಬ್ಬಳ್ಳಿ ಹೈವೇ ಇದೆ. ಮಳೆಗಾಲದಲ್ಲಿ ಬಹಳಷ್ಟು ಅನಾಹುತ ಎದುರಾಗುತ್ತವೆ” ಎಂದು ಹೇಳಿದರು.
“ಬಂಗಸನ ಅಂತ ಆನವಟ್ಟಿ ಭಾಗದ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ದ್ವೀಪದಂತೆ ಆಗುತ್ತೆ ಅಷ್ಟು ತೀವ್ರ ಮಳೆಯಿಂದ ಅಲ್ಲಿ ಯಾವುದೇ ವಾಹನಗಳು ತೆರಳುವುದಕ್ಕೆ ಆಗುವುದೇ ಇಲ್ಲ” ಎಂದು ಹೇಳಿದರು.
ಆನವಟ್ಟಿ ನಿವಾಸಿ ಹಾಗೂ ಜನದನಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿಜಯ್ ಕುಮಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆನವಟ್ಟಿ ಸುತ್ತಮುತ್ತ ಅತಿಯಾಗಿ ಮಳೆ ಬಂದಾಗ, ಹಾಗೆ ಬೇಸಿಗೆಯಲ್ಲಿ ಹುಲ್ಲಿಗೆ ಬೆಂಕಿ ತಗುಲಿದಾಗ ಅಗ್ನಿಶಾಮಕ ವಾಹನ ಬೇಕೆಂದರೆ ಸೊರಬ ಹಿರೇಕೆರೂರ ಹಾನಗಲ್ ಭಾಗದಿಂದ ಈ ಮೂರು ಭಾಗಕ್ಕೆ ಕರೆ ಮಾಡಿ ಕರೆಸಿಕೊಳ್ಳಬೇಕು. ಆದರೆ ಆ ವಾಹನ ಬರುವಷ್ಟರಲ್ಲಿ ಬಹಳಷ್ಟು ಹಾನಿಯಾಗಿರುತ್ತೆ. ಇಲ್ಲಿ ಮುಖ್ಯವಾಗಿ ಭತ್ತ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯೋ ಪ್ರದೇಶವಾಗಿರುವುದರಿಂದ ಅಗ್ನಿ ಅನಾಹುತಗಳು ಹೆಚ್ಚಾಗಿ ಸಂಭವಿಸುತ್ತವೆ. ಹಾಗಾಗಿ ಆನವಟ್ಟಿ ಭಾಗಕ್ಕೆ ತುರ್ತಾಗಿ ಅಗ್ನಿಶಾಮಕ ಠಾಣೆ ಹಾಗೂ ಅಗ್ನಿಶಾಮಕ ವಾಹನ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಸೂಕ್ತ ಕ್ರಮ ವಹಿಸಬೇಕು” ಎಂದು ಮನವಿ ಮಾಡಿದರು.
ಆನವಟ್ಟಿ ಕೋಟಿಪುರ ನಿವಾಸಿ ರಾಖೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆನವಟ್ಟಿಯ ಕೋಟಿಪುರ ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ಹಾಗೆ ಬಹಳಷ್ಟು ವಾಹನ ಸಂಚಾರವೂ ಇದೆ. ಸುತ್ತಮುತ್ತಲಿನ ಹೊಲ ಜಮೀನುಗಳಲ್ಲಿ ಬಹುತೇಕ ಭತ್ತ ಬೆಳೆಯುವುದರಿಂದ ಅಗ್ನಿ ಶಾಮಕ ಠಾಣೆ ಮತ್ತು ವಾಹನಗಳ ಅಗತ್ಯವಿದೆ. ಹುಲ್ಲಿನ ಬಣವಗೆ ಬೆಂಕಿ ಹತ್ತಿಕೊಂಡರೆ ಸೊರಬದಿಂದ ಇಲ್ಲಿಗೆ ಬರಲು ಕನಿಷ್ಟ 1 ಗಂಟೆ ಬೇಕಾಗುತ್ತದೆ. ಸೊರಬದಿಂದ ಬರುವ ರಸ್ತೆ ಚೆನ್ನಾಗಿಲ್ಲ ಹಾಗಾಗಿ ಆನವಟ್ಟಿ ಬಸ್ ನಿಲ್ದಾಣದ ಪಕ್ಕ ಸಾಕಷ್ಟು ಜಾಗವಿದೆ. ಅಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಹಾಗಾಗಿ ಸಚಿವರು, ಶಾಸಕರು ಹಾಗೂ ಸಂಸದರು ಮುತುವರ್ಜಿ ವಹಿಸಿ ಈ ಬಗ್ಗೆ ಕ್ರಮ ಕೈಗೊಂಡರೆ ಒಳ್ಳೆಯದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೆಸರು ಹೇಳಲು ಇಚ್ಛಿಸದ ಅಗ್ನಿಶಾಮಕ ಠಾಣೆ ಅಧಿಕಾರಿಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇಲ್ಲಿ ಹೈವೇ ಇರುವುದರಿಂದ ಹಾಗೂ ಒಂದು ಗಾಡಿ ಸ್ಕ್ರಾಪ್ ಆಗಿರುವ ಕಾರಣ ಸೊರಬ ಅಗ್ನಿಶಾಮಕ ಠಾಣೆಯಲ್ಲಿ ಇರುವುದು ಒಂದೇ ವಾಹನ 1992 ರ ವಾಹನ 32 ವರ್ಷ ಆಗಿದೆ ಹಾಗಾಗಿ ಸ್ಕ್ರಾಪ್ ಆಗಿದೆ ಹಾಗೆ ಆಗಿರುವ ಕಾರಣ ಆನವಟ್ಟಿ ಭಾಗಕ್ಕೆ ಅವಶ್ಯಕವಾಗಿ ಅಗ್ನಿಶಾಮಕ ಠಾಣೆ ಮತ್ತು ಅಗ್ನಿಶಾಮಕ ವಾಹನ ವ್ಯವಸ್ಥೆ ಬೇಕಾಗಿದೆ ಹಾಗೂ ಇಲ್ಲಿಂದ ಅಲ್ಲಿ ಬರುವಷ್ಟರಲ್ಲಿ ಕನಿಷ್ಠ 1 ಗಂಟೆ ಬೇಕು ಅಷ್ಟ್ರಲ್ಲಿ ಅನಾಹುತ ಹೆಚ್ಚಾಗಿ ಇರುತ್ತದೆ ಮತ್ತು ಹಿರೇಕೆರೂರ ಹಾವೇರಿ ಇದೆಲ್ಲ ಅವರ ಭಾಗಕ್ಕೆ ಆನವಟ್ಟಿ ಬರುವುದಿಲ್ಲ ಹಾಗೆ ಶಿಕಾರಿಪುರ ಶಿರಾಳಕೊಪ್ಪ ಇಂದ ಬರುವುದು ತುಂಬ ದೂರ ಆಗತ್ತೆ ಎಂದು ತಿಳಿಸಿದ್ದಾರೆ. ಹಾಗೆ ಮಾನ್ಯ ಸಚಿವರು ಅಗ್ನಿಶಾಮಕ ಠಾಣೆ ಗೆ ಒಂದು ಸ್ಥಳ ಗುರುತಿಸಿದ್ದಾರೆ ಅದರ ಮಾಹಿತಿ ತಾಲೂಕ್ ಕಚೇರಿ ಇಂದ ಪಡೆಯಬೇಕು ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರೈತರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹ
“ಮುಖ್ಯವಾಗಿ ಸೊರಬ ತಾಲೂಕಿಗೆ ಒಂದೇ ಒಂದು ಅಗ್ನಿಶಾಮಕ ವಾಹನವಿದೆ. ಬೇರೆ ಕಡೆ ಬೆಂಕಿ ಅವಘಡ ಉಂಟಾದಾಗ ತರಳಿದ್ದರೆ, ಇನ್ನೊಂದು ಕಡೆ ಅದೇ ವೇಳೆ ಘಟನೆ ಸಂಭವಿಸಿದರೆ ವಾಹನದ ಕೊರತೆ ಉಂಟಾಗುತ್ತದೆ. ಹಾಗಾಗಿ ಇನ್ನೊಂದು ಅಗ್ನಿಶಾಮಕ ವಾಹನದ ಅವಶ್ಯಕತೆ ಇದೆ. ಇದೂ ಕೂಡ ಗಮನಿಸಬೇಕಾದ ವಿಚಾರವಾಗಿದೆ. ಹಾಗಾಗಿ ಸಚಿವರು ಇದರ ಸಂಬಂಧ ತಕ್ಷಣ ಇಲಾಖೆಗೆ ಸೂಚನೆ ನೀಡಿ, ಅಗ್ನಿಶಾಮಕ ಠಾಣೆ ಹಾಗೂ ಅಗ್ನಿಶಾಮಕ ವಾಹನ ವ್ಯವಸ್ಥೆಯನ್ನು ತುರ್ತಾಗಿ ಮಾಡಿಕೊಡಬೇಕಾಗಿದೆ. ಬೇಸಿಗೆ ತಾಪಕ್ಕೆ ಮತ್ತಷ್ಟು ಅನಾಹುತ ಸಂಭವಿಸದಂತೆ ಎಚ್ಚರ ವಹಿಸಬೇಕು” ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.