ಟ್ರಕ್ ಹಾಗೂ ಟಾಟಾ ಏಸ್ ವಾಹನಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ನಡೆದಿದೆ.
ಬೀದರ್ – ಭಾಲ್ಕಿ ಹೆದ್ದಾರಿಯ ಸೇವಾನಗರ ತಾಂಡಾ ಬಳಿ ಬುಧವಾರ ಬೆಳಗ್ಗೆ ನಡೆದ ದುರ್ಘಟನೆಯಲ್ಲಿ ಮಹಾರಾಷ್ಟ್ರದ ಉದಗೀರ್ ಮೂಲದವರಾದ ದಸ್ತಗಿರ್ ದಾವಲಸಾಬ್ (36) ರಸೀದಾ ಶೇಕ್ (41) ಟಾಟಾ ಎಸಿ ಚಾಲಕ ವಲಿ (31) ಅಮಾಮ್ ಶೇಕ್ (51) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಟಾಟಾ ಏಸ್ ವಾಹನದಲ್ಲಿ ಒಟ್ಟು 14 ಜನ ಪ್ರಯಾಣಿಸುತ್ತಿದ್ದರು. ಉದಗೀರ್‌ದಿಂದ ಹೈದರಾಬಾದ್ ಕಡೆಗೆ ತೆರಳುವ ವೇಳೆ ಬೀದರ್‌ನಿಂದ ಭಾಲ್ಕಿಗೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಐದು ಜನರಿಗೆ ಗಾಯಗಳಾಗಿದ್ದು, ಬೀದರ್‌ನ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮೌಢ್ಯಕ್ಕೆ ಸೆಡ್ಡು : ಮದುವೆ ಮಂಟಪದಲ್ಲಿ ಮೃತ ರೈತರಿಗೆ ಶ್ರದ್ಧಾಂಜಲಿ
ಈ ಕುರಿತು ಭಾಲ್ಕಿ ತಾಲೂಕಿನ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್‌ಪಿ ಚನ್ನಬಸವಣ್ಣ ಲಂಗೋಟಿ ನೇತ್ರತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.