ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುವ ಶಬ್ದ ಸದ್ದು ಮಾಡುತ್ತದೆ. ಮಾಧ್ಯಮಗಳು ಅದನ್ನೇ ದೊಡ್ಡ ಸುದ್ದಿ ಮಾಡುತ್ತಿವೆ. ಮಾಧ್ಯಮ ಜಾಗೃತವಾಗಬೇಕು. ಜಾಗೃತ ಮಾಧ್ಯಮ ಜನಕಲ್ಯಾಣಕ್ಕೆ ಕಾರಣವಾಗಬೇಕು. ಅದನ್ನು ಬಿಟ್ಟು, ಈ ರೀತಿ ಭಜನೆಗೆ ಸೀಮಿತವಾಗಬಾರದು ಎಂದು ಬಿಜೆಪಿ ಮತ್ತು ಮಾಧ್ಯಮಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರು ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿನ ಸಂಭ್ರದ ವೇಳೆ ಬೆಂಬಲಿಗರು ‘ನಾಸಿರ್ ಸಾಬ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ. ಆದರೆ, ಅದನ್ನ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾರೆಂದು ಕೆಲ ಮಾಧ್ಯಮಗಳು ಮತ್ತು ಬಿಜೆಪಿ ಅಪಪ್ರಚಾರ ಮಾಡಿದ್ದು, ವಿವಾದ ಸೃಷ್ಠಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಅಕಸ್ಮಾತ್ ಅಲ್ಲಿ ‘ಪಾಕಿಸ್ತಾನ್’ ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ? ಹಾಗೆ ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ, ಆತನತ್ತ ಗಮನ ಹರಿಸುತ್ತಿದ್ದರು. ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು. ಆತನ ಮೇಲೆ ಮುಗಿಬೀಳುತ್ತಿದ್ದರು. ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸಲಿಲ್ಲ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ‘ನಾಸೀರ್ ಸಾಬ್ ಝಿಂದಾಬಾದ್’ ಘೋಷಣೆಯನ್ನು ‘ಪಾಕಿಸ್ತಾನ್ ಝಿಂದಾಬಾದ್’ ಎಂದು ತಿರುಚಿದ ಮಾಧ್ಯಮಗಳು
“ಆತ ಹಾಗೆ ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ. ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು. ಆದರೆ, ಆ ಘೋಷಣೆ ಕೂಗವ ವೇಳೆ ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಗಿಲ್ಲ. ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ, ಅಲ್ಲಿನ ಪತ್ರಕರ್ತರ ‘ದೇಶಭಕ್ತಿ’ ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಪತ್ರಕರ್ತ ಸ್ನೇಹಿತರೇ ಉತ್ತರಿಸಬೇಕು” ಎಂದಿದ್ದಾರೆ.
ಕೆಲವು ದೃಶ್ಯ ಮಾಧ್ಯಮಗಳು ತಮ್ಮ ದಿಲ್ಲಿ ದರ್ಬಾರನ್ನು ಖುಷ್ ಮಾಡಲು ಸಾಧ್ಯವಿರುವ ಎಲ್ಲ ಅನಾಚಾರಗಳನ್ನು ಮಾಡಲು ಹೇಸುವುದಿಲ್ಲ,, ಇವುಗಳು ತಮ್ಮ ವೃತ್ತಿ ಧರ್ಮ ಸ್ವಾಭಿಮಾನ ಎಲ್ಲಾ ಬಿಟ್ಟು ದಿಲ್ಲಿ ದರ್ಬಾರಿನ ಹಂಗಿನಲ್ಲಿ ಕೊಳೆಯುತ್ತಿವೆ,,,ಪಾಪ ಅವರಿಗೂ ಭಯ ಇರಬಹುದು,,ಆಳುವವರ ಪರ ಪುಂಗಿ ಊದದೇ ಹೋದರೆ ಬಾಗಿಲು ಹಾಕಿಸುವ ಭಯ ಇದ್ದರೂ ಇರಬಹುದು