ದಾವಣಗೆರೆಯಲ್ಲಿ ಜಿಲ್ಲಾಡಳಿತದ ಅಂಬೇಡ್ಕರ್, ಗಾಂಧಿ ಚಿತ್ರ ಹಾಗೂ ಸಂವಿಧಾನ ಪೀಠಿಕೆ ಇರುವ ಪ್ಲೆಕ್ಸ್ ಮೇಲೆ ಖಾಸಗಿ ಪ್ಲೆಕ್ಸ್ ಹಾಕಲಾಗಿದ್ದು, ಅವುಗಳನ್ನು ತೆರವುಗೊಳಿಸಿ, ಕ್ರಮ ಕೈಗೊಳ್ಳಬೇಕೆಂದು ದಸಂಸ ಆಗ್ರಹಿಸಿದೆ.
75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಭಗೀರಥ ಸರ್ಕಲ್‌ನಲ್ಲಿ ಅಳವಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮಾಗಾಂಧಿ ಮತ್ತು ಸಂವಿಧಾನ ಪೀಠಿಕೆ ಇರುವ ಪ್ಲೆಕ್ಸ್ ಮೇಲೆ (ಪುರೋಹಿತ ವೆಜ್) ಖಾಸಗಿ ಹೋಟೆಲ್ ಮಾಲೀಕರು ಅವರ ಅಂಗಡಿಯ ಪ್ರಚಾರದ ಪ್ಲೆಕ್ಸ್ ಹಾಕಿದ್ದು, ರಾಷ್ಟ್ರೀಯ ನಾಯಕರು ಮತ್ತು ಸಂವಿಧಾನ ಪೀಠಿಕೆ ಇರುವ ಬ್ಯಾನರ್ ಮೇಲೆ ತಂತಿ ಇಂದ ಕಟ್ಟಿ ದೇಶ ದ್ರೋಹದ ಕೆಲಸವನ್ನು ಎಸಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕೃತ್ಯದಿಂದ ಅಂಬೇಡ್ಕರ್ ಅನುಯಾಯಿಗಳಿಗೆ ಮತ್ತು ಅಂಬೇಡ್ಕರ್ ಸಂಘಟನೆಗಳಿಗೆ ಮತ್ತು ಅಂಬೇಡ್ಕರ್ ಅವರ ಸಮಸ್ತ ಅಭಿಮಾನಿಗಳಿಗೆ ಮತ್ತು ಡಿಎಸ್ಎಸ್ ಸಂಘಟನೆಗೆ ತೀವ್ರವಾದ ನೋವು ಉಂಟಾಗಿದೆ. ಈ ಅವಹೇಳನ ಕೆಲಸ ಮಾಡಿರುವ ಪುರೋಹಿತ ಹೋಟೆಲ್ ಮಾಲೀಕರ ಮೇಲೆ ಕ್ರಮ ಕೈ ಕೊಳ್ಳಬೇಕೆಂದು ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಹೋರಾಟದ ಮೂಲಕ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಪ್ರದೀಪ್, ಮಂಜುನಾಥ್ ಆರ್, ಶಿವಶಂಕರ ಗಾಂಧಿನಗರ ಮತ್ತು ಮಾಗಡಿ ದ್ವಾರಕೀಶ್ ಶಿವಾನಂದಣ್ಣ ಮತ್ತು ಅಂಜಿನಪ್ಪ ವಕೀಲರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.