‌ಪಾಕಿಸ್ತಾನ ಜಿಂದಾಬಾದ್‌ | ಮಾಧ್ಯಮಗಳ ವಿಡಿಯೋ ಎಫ್‌ಎಸ್‌ಎಲ್‌ನವರು ಪಡೆಯಲಿದ್ದಾರೆ: ಡಾ. ಜಿ.ಪರಮೇಶ್ವರ್

Date:

‌ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಎಫ್‌ಎಸ್‌ಎಲ್‌ನವರು ವೈಜ್ಞಾನಿಕ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

- Advertisement -

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ಘಟನೆಗೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪೋಸ್ಟಿಂಗ್ ಮಾಡಿದ್ದಾರೆ. ‘ನಾಸೀರ್ ಸಾಬ್ ಜಿಂದಾಬಾದ್’ ಎಂದು ಹೇಳಲಾಗಿದೆ ಅಂತ ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ‘ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ರು’ ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ...

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ...

ನಡು ಮುರಿದ ಕಾಂಗ್ರೆಸ್ಸನ್ನು ಮತ್ತೆ ಕಟ್ಟಬಲ್ಲರೇ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ...

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

“ಈಗಾಗಲೇ ಎಫ್‌ಎಸ್‌ಎಲ್‌ನವರು ಪರೀಶೀಲನೆ ಕೈಗೊಂಡಿದ್ದಾರೆ. ಎಲ್ಲ ವೀಡಿಯೋ ತುಣುಕುಗಳನ್ನು ಸಂಗ್ರಹಿಸುತ್ತಿದ್ದಾರೆ. ಅಧಿಕೃತವಾಗಿ ಸುದ್ದಿ ವಾಹಿನಿಯಲ್ಲಿ ಮೊದಲು ಪ್ರಸಾರವಾದ ವೀಡಿಯೋಗಳನ್ನು ಎಫ್‌ಎಸ್‌ಎಲ್‌ನವರು ಪಡೆಯಲಿದ್ದಾರೆ. ವೈಜ್ಞಾನಿಕವಾಗಿ ಖಚಿತವಾದರೆ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಬಿಜೆಪಿಯವರು ಕೊಟ್ಟಿರುವ ದೂರನ್ನು ಸುಮೋಟೋ ಜತೆ ಸೇರಿಸಲಾಗುವುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ

“ಘಟನೆಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಎಲ್ಲವನ್ನು ಪರಿಶೀಲನೆ ನಡೆಸಲಾಗುತ್ತಿವೆ. ಘೋಷಣೆ ಕೂಗಿದರೂ ಎನ್ನಲಾದ ಸ್ಥಳದಲ್ಲಿ ಯಾರಿದ್ರು ಅನ್ನುವುದನ್ನು ಗುರುತಿಸಿ, ಅವರನ್ನು ವಿಚಾರಣೆ ನಡೆಸಲಾಗುತ್ತೆದೆ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಖಚಿತವಾದರೆ ತಪ್ಪಿತಸ್ಥನ ವಿರುದ್ಧ ಏನೆಲ್ಲ ಕಾನೂನು ರೀತ್ಯ ಕ್ರಮ ಜರುಗಿಸಬೇಕೊ ಅದು ಆಗುತ್ತದೆ. ಯಾವುದೇ ಕಾರಣಕ್ಕೂ ರಾಜೀ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

“ಯಾರೋ ಒಬ್ಬ ಮಾಡಿದ್ದನೆಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ತಳುಕು ಹಾಕುವುದು ಸರಿಯಲ್ಲ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮಾಡಿ, ವರದಿ ಆಧರಿಸಿ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಅದು ಆಗುತ್ತದೆ. ಬಿಜೆಪಿ ಪಕ್ಷ ಶೂರವಾದಗಿನಿಂದಲೂ ‘ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ’ ಎಂದು ಹೇಳುತ್ತಲೇ ಇದ್ದಾರೆ. ಕಾಂಗ್ರೆಸ್ ಪಕ್ಷ ಏನು ತಪ್ಪು ಮಾಡಿದೆ” ಎಂದು ಪ್ರಶ್ನಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ | ರಾಜ್ಯದ ಹಲವೆಡೆ ಒಣಹವೆ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

ಕರ್ನಾಟಕದಾದ್ಯಂತ ಇಂದು ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ನಂತರ ಕೆಲವೆಡೆ...

ಸೆ.17ರಂದು ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದಿಂದ ದತ್ತಿ ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ವಾರ್ಷಿಕ ದತ್ತಿ...

ವಂದೇ ಮಾತರಂ ಚರಣಗಳ ಮೊಟಕು: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ

ವಂದೇ ಮಾತರಂ ಗೀತೆಯ ಕೆಲವು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ...