ಮೈಸೂರು ನಗರದ ಹೊರವಲಯದಲ್ಲಿರುವ ಆರ್ ಆರ್ ನಗರ, ದಟ್ಟಗಳ್ಳಿ, ಬೋಗಾದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಆರ್ ಆರ್ ನಗರ ಬಳಿಯ ನ್ಯೂ ಕಾಂತರಾಜ್ ಅರಸ್ ರಸ್ತೆಯ ರಿಂಗ್ ರಸ್ತೆಗೆ ಅಡ್ಡಲಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಇದೀಗ ಮೈಸೂರು ಮಹಾನಗರ ಪಾಲಿಕೆ ಸಿಗ್ನಲ್ ದೀಪ ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಈ ವೃತ್ತದಲ್ಲಿ ಪ್ರತಿದಿನವೂ ವಾಹನ ದಟ್ಟಣೆಯಾಗುವುದರಿಂದ ಭಾರೀ ಜನಸಂದಣಿಗೆ ಕಾರಣವಾಗುತ್ತಿತ್ತು. ಹಾಗಾಗಿ ಎಂಸಿಸಿ ಮತ್ತು ನಗರ ಸಂಚಾರ ಪೊಲೀಸರು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಬೋಗಾದಿ-ಗದ್ದಿಗೆ ರಸ್ತೆಯ ಬೋಗಾದಿ ಬಳಿ ರಿಂಗ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಲಾಗಿದೆ. ಆದರೆ, ಈ ವೃತ್ತದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದರೂ ಕೂಡ ಸಂಚಾರ ಪೊಲೀಸರಾಗಲೀ, ಮಹಾನಗರ ಪಾಲಿಕೆಯಾಗಲೀ ಸಿಗ್ನಲ್ ಅಳವಡಿಸುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಡಿಸಿಪಿ (ಸಂಚಾರ) ಎಸ್ ಜಾಹ್ನವಿ ಅವರ ಪ್ರಕಾರ, “ನಗರದಾದ್ಯಂತ 10 ಸ್ಥಳಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಸ್ಥಾಪಿಸಲು ಸಂಚಾರ ಪೊಲೀಸರು ಎಂಸಿಸಿಗೆ ಸಲಹೆ ನೀಡಿದ್ದರು.
“ಬೋಗಾದಿ-ಗದ್ದಿಗೆ ರಸ್ತೆಯ ಬೋಗಾದಿ ಜನನಿಬಿಡ ವೃತ್ತಗಳಲ್ಲಿ ಒಂದಾಗಿದ್ದರೂ, ಇಷ್ಟು ವರ್ಷಗಳ ಕಾಲ ಇಲ್ಲಿ ಸಂಚಾರವನ್ನು ಕ್ರಮಬದ್ಧಗೊಳಿಸದಿರುವುದು ಸಾಕಷ್ಟು ಅವ್ಯವಸ್ಥೆಗೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದ ಸ್ಥಳೀಯರು ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಏಜೆನ್ಸಿಗಳನ್ನು ಸಂಪರ್ಕಿಸಿದ್ದರು. ಆದರೆ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅಂತಿಮವಾಗಿ, ಕೆಲಸ ಪ್ರಾರಂಭವಾಗಿರುವುದು ನಮಗೆ ಸಂತೋಷವಾಗಿದೆ” ಎಂದು ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.
“ಈ ಪ್ರದೇಶವು ನಗರದ ವಸತಿ ಕೇಂದ್ರವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ವೇಗವಾಗಿ ಚಲಿಸುವ ಭಾರೀ ವಾಹನಗಳು ಯಾವಾಗಲೂ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತಿದ್ದು, ಭಯ ಎದುರಾಗಿತ್ತು. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕಾರ್ಯರೂಪಕ್ಕೆ ತರಬೇಕು” ಎಂದು ಎಂಸಿಸಿಯನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಮಾರ್ಚ್ 3ರಂದು ಪಲ್ಸ್ ಪೋಲಿಯೋ; ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ
“ಅನೇಕ ಸ್ಥಳಗಳಲ್ಲಿ ಸಿಗ್ನ ಅಳವಡಿಕೆ ಕೆಲಸವನ್ನು ಎಂಸಿಸಿ ಕೈಗೊಂಡಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ದೇವೇಗೌಡ ವೃತ್ತ ಸೇರಿದಂತೆ ಸಿಗ್ನಲ್ ಅಳವಡಿಕೆ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು” ಎಂದು ನಗರದ ನಿವಾಸಿಗಳುಮೈಸ ಹೇಳಿದರು.