ವಿಜಯಪುರ ನಗರದ ಕರ್ನಾಟಕ ಜಲಾಭಿವೃದ್ಧಿ ಸಂಸ್ಥೆ ಹಾಗೂ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ ಶಾಖೆ ನೇತೃತ್ವದಲ್ಲಿ ವಿಜಯಪುರ ನಗರದ ಚಾಬುಕ್ ಸವಾರ್ ದರ್ಗಾ ಬಳಿಯ ಐತಿಹಾಸಿಕ ಬಾವಿ ಪುನರುಜ್ಜೀವನ ಅಭಿಯಾನಕ್ಕೆ ಚಾಲನೆ ನೀಡಿ ಸ್ವಚ್ಛತಾ ಕಾರ್ಯ ಆರಂಭಿಸಿದರು.
ವಿಜಯಪುರ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್, ಆಯುಕ್ತರು ಹಾಗೂ ಅಪರ ಜಿಲ್ಲಾಧಿಕಾರಿ ಹಾಗೂ ವಾರ್ಡಿನ ಸದಸ್ಯರ ಸಮ್ಮುಖದಲ್ಲಿ ಚಾಲನೆ ನೀಡಿದರು.
ಜಲಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಮಾತನಾಡಿ, “ನಗರದಲ್ಲಿರುವ ಐತಿಹಾಸಿಕ ಬಾವಿಗಳು ಪುನರುಜ್ಜೀವನ ಮಾಡಿದರೆ ನೀರಿನ ಹಾಹಾಕಾರ ತಪ್ಪಿಸಲು ಸಾಧ್ಯವಾಗಬಹುದು. ಬಾವಿಗಳನ್ನು ರಕ್ಷಣೆ ಮಾಡಿ ಸರಿಯಾದ ನಿರ್ವಹಣೆ ಮಾಡಬೇಕು” ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗೂಳಪ್ಪ ಶೆಟ್ಟಿಗಾರ್ ಮಾತನಾಡಿ, “ಈ ಕಾರ್ಯಗಳಿಂದ ಬಾವಿ ಸುತ್ತಮುತ್ತಲಿನ ಬಡಾವಣೆಯಲ್ಲಿರುವ ಸಾರ್ವಜನಿಕರಿಗೆ ಸ್ವಚ್ಛ ಗಾಳಿ ಬರುತ್ತದೆ. ಸೊಳ್ಳೆಗಳ ಕಾಟ ತಪ್ಪಿ ಜನರ ಆರೋಗ್ಯ ಹಾಳಾಗುವುದನ್ನು ತಪ್ಪಿಸಬಹುದು. ಒಟ್ಟಾರೆ ಉತ್ತಮ ಕಾರ್ಯವಾಗಿದ್ದು, ಪರಿಸರ ರಕ್ಷಣೆಯಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಲ್ಲ ಗ್ರಾಮ ಪಂಚಾಯತಿಗಳಿಗೆ ಪಿಡಿಒ ನೇಮಕಕ್ಕೆ ಮನವಿ
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗೂಳಪ್ಪ ಶೆಟ್ಟಿಗಾರ್ ಅವರಿಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ಅವರು ಸನ್ಮಾನಿಸಿದರು. ಹಾಗೆಯೇ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅವರನ್ನು ಕೂಡಾ ಜಲಾಭಿವೃದ್ಧಿ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಸನ್ಮಾನಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಪಾಟೀಲ ಫೌಂಡೇಶನ್ ಸಂಸ್ಥೆ, ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ, ರಾಜೇಂದ್ರ ಫೌಂಡೇಶನ್, ಹ್ಯಾಪಿ ಕೇಕ್, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್, ಕ್ರಾಂತಿ ಅಸೋಸಿಯೇಷನ್ ಸಂಸ್ಥೆಯ ಸ್ವಯಂ ಸೇವಕರು ಭಾಗವಹಿಸಿದ್ದರು.
